»   » ಹಾಲಿವುಡ್ ಚಿತ್ರದಲ್ಲಿ ಬೆಂಗಳೂರು ಹುಡುಗಿ ಸಿಂಧು

ಹಾಲಿವುಡ್ ಚಿತ್ರದಲ್ಲಿ ಬೆಂಗಳೂರು ಹುಡುಗಿ ಸಿಂಧು

Posted By:
Subscribe to Filmibeat Kannada

ಚತುರ್ಭಾಷಾ ತಾರೆ, ಬೆಂಗಳೂರು ಮೂಲದ ಹುಡುಗಿ ಸಿಂಧು ಮೆನನ್ ಹಾಲಿವುಡ್ ಗೆ ಹಾರಿದ್ದಾರೆ. ಹಾಲಿವುಡ್ ನ ಎರಡು ಚಿತ್ರಗಳಲ್ಲಿ ನಟಿಸುವ ಅವಕಾಶವನ್ನು ಸಿಂಧು ಗಿಟ್ಟಿಸಿಕೊಂಡಿದ್ದಾರೆ. ದಕ್ಷಿಣ ಭಾರತದಲ್ಲಿ ತಮ್ಮ ಸಕ್ಸಸ್ ಗ್ರಾಫನ್ನು ದಿನದಿಂದ ದಿನಕ್ಕೆ ಏರಿಸಿಕೊಳ್ಳುತ್ತಿದ್ದ ತಾರೆ ಏಕ್ ದಂ ಹಾಲಿವುಡ್ ಗೆ ಲಗ್ಗೆ ಹಾಕಿದ್ದಾರೆ.

ಈ ಬಗ್ಗೆ ಸಿಂಧು ಮಾತನಾಡುತ್ತಾ, 2007ರಲ್ಲೆ ಹಾಲಿವುಡ್ ಚಿತ್ರದಲ್ಲಿ ನಟಿಸುವ ಅವಕಾಶ ಸಿಕ್ಕಿತ್ತು. ಅಕ್ಟೋಬರ್ ನಲ್ಲಿ ಕಾಗದ ಪತ್ರಗಳಿಗೆ ಸಹಿ ಹಾಕಬೇಕಾಗುತ್ತದೆ. ಇದರ ಜೊತೆಗೆ ಮತ್ತೊಂದು ಇಂಗ್ಲಿಷ್ ಚಿತ್ರದಲ್ಲಿ ನಟಿಸುವ ಅವಕಾಶವು ಹುಡುಕಿಕೊಂಡು ಬಂದಿದೆ. ಜುಲೈನಲ್ಲಿ ಈ ಚಿತ್ರ ಆರಂಭವಾಗಿ ಅಕ್ಟೋಬರ್ ನಲ್ಲಿ ಬಿಡುಗಡೆ ಕಾಣಲಿದೆ ಎಂದು ಹೇಳಿದ್ದಾರೆ.

ಸಂದರ್ಶನ ಮತ್ತು ಛಾಯಾಚಿತ್ರಗಳನ್ನು ನೋಡಿ ಚಿತ್ರಕ್ಕೆ ಆಯ್ಕೆ ಮಾಡಿದ್ದಾಗಿ ಸಿಂಧು ತಿಳಿಸಿದ್ದಾರೆ. ಸಿಂಧು ನಟಿಸಲಿರುವ ಮೊದಲ ಹಾಲಿವುಡ್ ಚಿತ್ರವನ್ನು ಬ್ರಾಡ್ ಪೀಟರ್ ನಿರ್ದೇಶಿಸಲಿದ್ದಾರೆ. ಆಂಗ್ಲಹುಡುಗನೊಬ್ಬನ ಪ್ರೇಮಬಂಧನಕ್ಕೆ ಸಿಲುಕುವ ಭಾರತೀಯ ಹುಡುಗಿಯ ಪಾತ್ರದಲ್ಲಿ ಸಿಂಧು ಕಾಣಿಸಲಿದ್ದಾರೆ.

ಸಿಂಧು ಮೆನನ್ ಕನ್ನಡದ ಹಲವಾರು ಚಿತ್ರಗಳಲ್ಲಿ ನಟಿಸಿದ್ದಾರೆ. ಅವುಗಳಲ್ಲಿ ಮುಖ್ಯವಾಗಿ ಪ್ರೇಮ ಪ್ರೇಮ ಪ್ರೇಮ, ನಂದಿ, ಖುಷಿ, ಧರ್ಮ, ಜ್ಯೇಷ್ಠ, ಯಾರೇ ನೀ ಹುಡುಗಿ ಸೇರಿವೆ. ಬಾಲನಟಿಯಾಗಿ ಕನ್ನಡದ 'ರಶ್ಮಿ' ಚಿತ್ರದಲ್ಲಿ ಸಿಂಧು ಅಭಿನಯಿಸಿದ್ದರು. ಕಿರುತೆರೆಯ ಧಾರಾವಾಹಿಗಳಲ್ಲೂ ಸಿಂಧು ಅಭಿನಯಿಸಿದ್ದಾರೆ.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada