»   » ಅಂಗರಕ್ಷಕನಿಗೆ ಪಾಪ್ ಗಾಯಕಿ ಲೈಂಗಿಕ ಕಿರುಕುಳ

ಅಂಗರಕ್ಷಕನಿಗೆ ಪಾಪ್ ಗಾಯಕಿ ಲೈಂಗಿಕ ಕಿರುಕುಳ

Posted By:
Subscribe to Filmibeat Kannada

ಅಮೆರಿಕದ ಪಾಪ್ ಗಾಯಕಿ ಬ್ರಿಟ್ನಿ ಸ್ಪಿಯರ್ಸ್ ತಾಜಾ ವಿವಾದವೊಂದರಲ್ಲಿ ಸಿಕ್ಕಿಹಾಕಿಕೊಂಡಿದ್ದಾರೆ. ಬ್ರಿಟ್ನಿ ತನಗೆ ಲೈಂಗಿಕ ಕಿರುಕುಳ ನೀಡುತ್ತಿದ್ದಾಳೆ ಎಂದು ಆಕೆಯ ಅಂಗರಕ್ಷಕ ಆಪಾದಿಸಿದ್ದಾನೆ. ನಿರಂತರವಾಗಿ ತಮ್ಮ ಮೇಲೆ ನಡೆಯುತ್ತಿರುವ ಲೈಂಗಿಕ ದಬ್ಬಾಳಿಕೆಯನ್ನು ಸಹಿಸದೆ ಕಡೆಗೆ ಬೇಸತ್ತ ಅಂಗರಕ್ಷಕ ಫೆರ್ನಾಂಡೋ ಪ್ಲೋರೆಸ್ (29) ಎಂಬಾತ ಕೆಲಸಕ್ಕೆ ರಾಜೀನಾಮೆ ಬಿಸಾಕಿದ್ದಾನೆ.

"ತನ್ನ ಕಣ್ಣ ಮುಂದೆಯೇ ಬ್ರಿಟ್ನಿ (28) ಬೆತ್ತಲಾಗಿ ನಿಲ್ಲುತ್ತಿದ್ದಳು. ಒಮ್ಮೊಮ್ಮೆ ಬಲವಂತವಾಗಿ ಬೆಡ್ ರೂಮಿಗೆ ಎಳೆದೊಯ್ಯುತ್ತಿದ್ದಳು. ಇದೀಗ ಬ್ರಿಟ್ನಿ ವಿರುದ್ಧ ತಾನು ಕಾನೂನು ಕ್ರಮಕ್ಕೆ ಮುಂದಾಗಿರುವುದಾಗಿ " ಆತ ಸನ್ ಪತ್ರಿಕೆಗೆ ತನ್ನ ಅಳಲನ್ನು ತೋಡಿಕೊಂಡಿದ್ದಾನೆ.

ಬ್ರಿಟ್ನಿಯೊಂದಿಗೆ ಕೆಲಸ ಮಾಡುವುದು ಆಗದ ಮಾತು. ಕತ್ತಲಾಗುತ್ತಿದ್ದಂತೆ ಭಾವನಾ ಲೋಕದಲ್ಲಿ ವಿಹರಿಸುವ ಆಕೆ ದುಃಸ್ವಪ್ನದಂತೆ ಕಾಡುತ್ತಾಳೆ. ಮನೆಯ ಸುತ್ತಲೂ ಬೆತ್ತಲಾಗಿ ಸುತ್ತುತ್ತಾಳೆ. ಆಕೆಯ ಮನೆಯ ಕೆಲಸಗಾರರು ಕೆಟ್ಟ ದೃಷ್ಟಿಯಿಂದ ನೋಡಿದರೆ ಕೆಲಸದಿಂದ ತೆಗೆದುಹಾಕುತ್ತಾಳೆ. ಆದರೆ ಫರ್ನಾಂಡೋ ವಿಚಾರದಲ್ಲಿ ಹಾಗಲ್ಲ. ಆಕೆಯೇ ಅವನ ಮೇಲೆ ಬಲತ್ಕಾರ ಮಾಡುತ್ತಿದ್ದಳು.

ಒಬ್ಬ ಉತ್ತಮ ಸೆಕ್ಯುರಿಟಿ ಗಾರ್ಡ್ ಎಂದು ಫರ್ನಾಂಡೋ ಗುರುತಿಸಿಕೊಳ್ಳಲು ಇಚ್ಛಿಸಿದ್ದ. ಅದರೆ ಬ್ರಿಟ್ನಿ ಆತನ ಕನಸುಗಳನ್ನು ಕಿತ್ತ್ತುಕೊಂಡಿದ್ದಾಳೆ. ಸಾಲದಕ್ಕೆ ಆತನನ್ನು ಲೈಂಗಿಕವಾಗಿ ಬಳಸಿಕೊಳ್ಳಲು ಪ್ರಯತ್ನಿಸಿ ವಿಫಲವಾಗಿದ್ದಾಳೆ ಎಂದು ಸನ್ ಪತ್ರಿಕೆಯಲ್ಲಿ ಸುದ್ದಿ ಬಿತ್ತರಿಸಿದೆ.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada