»   » ತ್ರಿಡಿಯಲ್ಲಿ ರಂಗುರಂಗಿನ ನೀಲಿ ಪತ್ರಿಕೆ ಪ್ಲೇಬಾಯ್

ತ್ರಿಡಿಯಲ್ಲಿ ರಂಗುರಂಗಿನ ನೀಲಿ ಪತ್ರಿಕೆ ಪ್ಲೇಬಾಯ್

Posted By:
Subscribe to Filmibeat Kannada

ಪ್ಲೇಬಾಯ್ ಎಂದರೆ ಎಂಥವರಿಗೂ ಕಿವಿ ನಿಮಿರುತ್ತದೆ. ಸಾಮಾನ್ಯವಾಗಿ ಓದುಗರ ಕೈಗೆ ಪ್ಲೇಬಾಯ್ ಪತ್ರಿಕೆ ಸಿಗುತ್ತಿದ್ದಂತೆ ಮಧ್ಯದ ಪುಟಕ್ಕೆ ಎಡತಾಕುತ್ತಾರೆ. ಮಧ್ಯಪುಟದಲ್ಲಿ ಈ ಬಾರಿ ಯಾವ ಕಾಮಿನಿ ದರ್ಶನ ನೀಡಬಹುದು ಎಂಬಕುತೂಹಲ ಓದುಗನದು. ಈ ಬಾರಿಯ ಜೂನ್ ತಿಂಗಳ ನಿಯತಕಾಲಿಕೆ ಮಾರುಕಟ್ಟೆಗೆ ಹೊರಬಿದ್ದಿದೆ.

ಪತ್ರಿಕೆ ಕೊಂಡವರಿಗೆ ಈ ಬಾರಿ ಒಂದು ಅಚ್ಚರಿ ಕಾದಿತ್ತು. ಕಾರಣ ಪತ್ರಿಕೆಯ ಜೊತೆ ತ್ರಿಡಿ ಕನ್ನಡಕವನ್ನು ಕೊಡಲಾಗಿತ್ತು! ತ್ರಿಡಿ ಚಿತ್ರಗಳ ಭರಾಟೆಯ ನಡುವೆ ತ್ರಿಡಿ ಟಿವಿಗಳು ಮಾರುಕಟ್ಟೆಗೆ ದಾಂಗುಡಿಯಿಟ್ಟಿವೆ. ಪ್ಲೇಬಾಯ್ ಪತ್ರಿಕೆ ತಾನೇನು ಕಮ್ಮಿ ಎಂದು ಈ ಬಾರಿ ತ್ರಿಡಿ ಚಿತ್ರವನ್ನು ನೀಡಿದೆ.

ಪತ್ರಿಕೆಯ ಮಾರಾಟವನ್ನು ಹೆಚ್ಚಿಸುವ ಉದ್ದೇಶದಿಂದ ಪ್ಲೇಬಾಯ್ ಈ ಸಾಹಸಕ್ಕೆ ಕೈಹಾಕಿದೆ. 2006ರಲ್ಲಿ 35 ಲಕ್ಷದಷ್ಟಿದ್ದ ಪತ್ರಿಕೆಯ ಪ್ರಸಾರ ಸಂಖ್ಯೆ ಬರುಬರುತ್ತಾ ಈಗ 15 ಲಕ್ಷಕ್ಕೆ ತಲುಪಿದೆ. ಯುವಕರು ಪತ್ರಿಕೆಯ ಕಡೆಗೆ ಹೆಚ್ಚು ಹೆಚ್ಚು ಆಕರ್ಷಿತರಾಗಲಿ ಎಂಬ ಉದ್ದೇಶದಿಂದ ಪತ್ರಿಕೆ ಸ್ಥಾಪಕ ಹ್ಯೂ ಹೆಫ್ನರ್ ಹೊಸ ಪ್ರಯತ್ನ ಮಾಡಿದ್ದಾರೆ, ಮೆಚ್ಚಬೇಕು!

Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada