»   »  ಮೈಕಲ್ ಜಾಕ್ಸನ್ ಸಲಿಂಗಕಾಮಿಯಾಗಿದ್ದರೆ?

ಮೈಕಲ್ ಜಾಕ್ಸನ್ ಸಲಿಂಗಕಾಮಿಯಾಗಿದ್ದರೆ?

Subscribe to Filmibeat Kannada

ಇತ್ತೀಚಿಗೆ ನಿಧನ ಹೊಂದಿದ ಪಾಪ್ ಲೋಕದ ದೊರೆ ಮೈಕಲ್ ಜಾಕ್ಸನ್ ಸಲಿಂಗಕಾಮಿಯಾಗಿದ್ದು ಪುರುಷ ಪ್ರೇಮಿಗಳೊಂದಿಗೆ ಸಂಬಂಧ ಹೊಂದಿದ್ದ ಎಂದು ಜೀವನ ಚರಿತ್ರೆಕಾರ ಲಾನ್ ಹೆಲ್ಪರಿನ್ ತಮ್ಮ ಪುಸ್ತಕ 'Unmasked: The Final Years of Michael Jackson' ಎನ್ನುವ ಪುಸ್ತಕದಲ್ಲಿ ಹೇಳಿರುವುದಾಗಿ ಸನ್ ಆನ್ ಲೈನ್ ಪತ್ರಿಕೆ ವರದಿ ಮಾಡಿದೆ.

ಜಾಕ್ಸನ್ ಮಧ್ಯರಾತ್ರಿ ಮಹಿಳೆಯ ರೀತಿ ವೇಷ ಧರಿಸಿ ಮನೆಯಿಂದ ಹೊರಟು ತನ್ನ ಪ್ರೇಮಿಗಳೊಂದಿಗೆ ಡೇಟಿಂಗ್ ಮಾಡುತ್ತಿದ್ದ. ಆತನಿಗೆ ಆಪ್ತರಾಗಿದ್ದ ಹಲವಾರು ಮಂದಿ ಜಾಕ್ಸನ್ ಸಲಿಂಗಕಾಮಿಯಾಗಿದ್ದನ್ನು ಹೇಳಿದ್ದಾರೆ. ಜಾಕ್ಸನ್ ಲೈಂಗಿಕ ಕಿರುಕುಳದ ಆರೋಪಕ್ಕೆ ಒಳಗಾದಗೆಲ್ಲ ಆತನನ್ನು ಮುಗ್ದನೆಂದು ಸಮರ್ಥಿಸಿ ಕೊಳ್ಳುತ್ತಿದ್ದವರು ಮತ್ತು ಆತನ ಕಟ್ಟಾ ಅಭಿಮಾನಿಗಳು ಕೂಡಾ ಜಾಕ್ಸನ್ ಸಲಿಂಗರತಿ ಬಗ್ಗೆ ಒಲವು ಹೊಂದಿದ್ದ ವಿಷಯವನ್ನು ಬಾಯಿ ಬಿಟ್ಟಿದ್ದಾರೆಂದು ಹೆಲ್ಪರಿನ್ ತಿಳಿಸಿದ್ದಾರೆ.

ಜಾಕ್ಸನ್ ನ ಕನಿಷ್ಠ ಇಬ್ಬರು ಪ್ರೇಮಿಗಳನ್ನು ಪತ್ತೆ ಹಚ್ಚಿರುವುದಾಗಿ ಹೇಳಿಕೊಂಡಿರುವ ಹೆಲ್ಪರಿನ್ ಅವರಲ್ಲಿ ಒಬ್ಬ ಹಾಲಿವುಡ್ ವೇಟರ್ ಹಾಗು ಮತ್ತೊಬ್ಬ ಉದಯೋನ್ಮುಖ ನಟ ಲಾರೆನ್ಸ್ ಎಂದು ಹೇಳಿದ್ದಾರೆ. ಜಾಕ್ಸನ್ ಲಾಸ್ ವೆಗಾಸ್ ನಲ್ಲಿ ನೆಲೆಸಿದ್ದಾಗ ಏಷ್ಯಾ ಮೂಲದ ದಪ್ಪನೆಯ ವ್ಯಕ್ತಿಗಳೊಂದಿಗೆ ಪ್ರೀತಿ ಹೊಂದಿದ್ದ ಎಂದು ತಮ್ಮ ಪುಸ್ತಕದಲ್ಲಿ ತಿಳಿಸಿದ್ದಾರೆಂದು ಪತ್ರಿಕೆ ಬಹಿರಂಗಪಡಿಸಿದೆ.

(ದಟ್ಸ್ ಕನ್ನಡ ಚಿತ್ರವಾರ್ತೆ)

Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada