Just In
Don't Miss!
- News
ಏಷಿಯನ್ ಪೇಂಟ್ಸ್ ವಿರುದ್ಧದ ರೈತರ ಹೋರಾಟಕ್ಕೆ ಜಯ; ಉದ್ಯೋಗ ನೀಡಲು ಕಾರ್ಖಾನೆ ಸಮ್ಮತಿ
- Automobiles
ಎರಡನೇ ಬಾರಿ ರೋಲ್ಸ್ ರಾಯ್ಸ್ ಕುಲಿನನ್ ಕಾರು ಖರೀದಿಸಿದ ಮುಖೇಶ್ ಅಂಬಾನಿ
- Finance
Gold, Silver Rate: ಪ್ರಮುಖ ನಗರಗಳಲ್ಲಿ ಜ. 15ರ ಚಿನ್ನ, ಬೆಳ್ಳಿ ದರ
- Sports
ಐಎಸ್ಎಲ್: ಈಸ್ಟ್ ಬೆಂಗಾಲ್ ಎಫ್ಸಿ vs ಕೇರಳ ಬ್ಲಾಸ್ಟರ್ಸ್, Live ಸ್ಕೋರ್
- Lifestyle
ಕುಂಭ ಮೇಳ ಪ್ರಾರಂಭ: ಕುಂಭ ಮೇಳ ವಿಶೇಷತೆ ಹಾಗೂ ಎಷ್ಟು ದಿನ ಇರುತ್ತದೆ?
- Education
BECIL Recruitment 2021: 11 ರೇಡಿಯೋಗ್ರಾಫರ್ ಅಥವಾ ಎಕ್ಸ್-ರೇ ಅಸಿಸ್ಟೆಂಟ್ ಹುದ್ದೆಗಳಿಗೆ ಅರ್ಜಿ ಆಹ್ವಾನ
- Technology
ಒನ್ಪ್ಲಸ್ ನಾರ್ಡ್ ಜುಲೈ 15 ರಿಂದ ಅಮೆಜಾನ್ ತಾಣದಲ್ಲಿ ಪ್ರಿ-ಆರ್ಡರ್ಗೆ ಲಭ್ಯವಿದೆ; ಖರೀದಿಸುವಲ್ಲಿ ಮೊದಲಿಗರಾಗಿರಿ!
- Travel
ಭಾರತದಲ್ಲಿ ಜೂನ್ 1 ರಿಂದ ಚಲಿಸಲಿರುವ ರೈಲುಗಳ ಸಂಪೂರ್ಣ ಪಟ್ಟಿ
ನಕ್ಕರೆ ಅದೇ ಸ್ವರ್ಗ : ದಿ. ಚಾರ್ಲಿ ಚಾಪ್ಲಿನ್
ಮೂಕಿ ಚಿತ್ರದಿಂದ ಟಾಕಿ ಚಿತ್ರದವರೆಗೂ ಹಾಸ್ಯ ನಟ ಮತ್ತು ಚಿತ್ರ ನಿರ್ದೇಶಕನಾಗಿ ಬೆಳೆದ ಪರಿ ಅಮೋಘ. ಅವನು ಸಂಗೀತ ನಿರ್ದೇಶಕ ಕೂಡ ಆಗಿದ್ದ. ಮನದೊಳಗೆ ನೋವಿನ ಸಾವಿರ ಕಂತೆಗಳನ್ನಿಟ್ಟುಕೊಂಡರೂ ಜನಮಾನಸದಲ್ಲಿ ನಗುವಿನ ಹಣತೆಯನ್ನು ಮೂಡಿಸಿದ ಅವನಿಗೆ ಇಡೀ ಜಗತ್ತೇ ಹುಟ್ಟುಹಬ್ಬದ ಶುಭಾಶಯಗಳನ್ನು ಹೇಳುತ್ತಿದೆ. ಸೀರಿಯಸ್ ಟ್ರಾಂಪ್ ಚಾರ್ಲಿಗೆ ಶುಭಾಶಯ ಹೇಳುತ್ತಿರುವ ನಮ್ಮ ಜತೆ ನೀವೂ ಸೇರಿಕೊಳ್ಳಿರಿ.
ಪುಟ್ಟಮಕ್ಕಳಿಂದ ಹಿಡಿದು ಮುದುಕರವರೆಗೂ ಚಾಪ್ಲಿನ್ ನನ್ನು ಇಷ್ಟಪಡದವರು ಇರಲಿಕ್ಕಿಲ್ಲ. ಸಮಾಜದ ಅಂಕುಡೊಂಕುಗಳನ್ನು, ಯಾಂತ್ರಿಕ ಬದುಕನ್ನು, ಮುಖವಾಡಗಳನ್ನು ಬೆತ್ತಲೆಗೊಳಿಸುವುದರಲ್ಲಿ ಚಾರ್ಲಿ ನಿಸ್ಸೀಮ. ದಿ ಸರ್ಕಸ್ ಎಂಬ ಸಿನಿಮಾದಲ್ಲಿ ಸಿಂಹದ ಬೋನಿನೊಳಗೆ ಸಿಕ್ಕಿ ಅನುಭವಿಸಿದ ಪರಿಪಾಟಲು, ದಿ ಗ್ರೇಟ್ ಡಿಕ್ಟೇಟರ್ ಚಿತ್ರದಲ್ಲಿ ಹಿಟ್ಲರ್ ನ ಬಗ್ಗೆ ಒಂದು ಬಲೂನ್ ಮೂಲಕ ಮಾಡಿದ ವಿಡಂಬನೆ, ಸರ್ಕಸ್ ಸಿನಿಮಾದಲ್ಲಿನ ಅತ್ಯದ್ಬುತ ನಟನೆ ನಾವಂತೂ ಮರೆಯುವುದಿಲ್ಲ.
ಚಾಪ್ಲಿನ್ ಪ್ರಮುಖ ಚಿತ್ರಗಳೆಂದರೆ ದಿ ಕಿಡ್(1920), ಗೋಲ್ಡ್ ರಷ್(1924), ದಿ ಸರ್ಕಸ್(1928), ಸಿಟಿ ಲೈಟ್ಸ್(1931), ಮಾಡರ್ನ್ ಟೈಮ್ಸ್(1936), ದಿ ಗ್ರೇಟ್ ಡೈರೆಕ್ಟರ್(1940) ಲಥಮ್ ಲೈಟ್(1952). ಇವರು 1940ರವರೆಗೆ ಕೇವಲ ಮೂಕಿ ಚಿತ್ರದಲ್ಲೇ ಜಗತ್ತನ್ನು ನಗಿಸಿದರು. "ನಮ್ಮ ಸಮಸ್ಯೆಯಂತೆ ಈ ಜಗತ್ತಿನಲ್ಲಿ ಯಾವುದೂ ಶಾಶ್ವತವಲ್ಲ", "ಬದುಕಿನಲ್ಲಿ ನಗದ ದಿನ ವ್ಯರ್ಥ" ಮತ್ತು "ನನಗೆ ಮಳೆಯಲ್ಲಿ ನಡೆಯಲು ಇಷ್ಟ, ಯಾಕೆಂದರೆ ನಾನು ಅಳುವುದು ಯಾರಿಗೂ ಕಾಣದು" ಎಂಬುದು ಆತ ಉದುರಿಸಿದ ಕೆಲವು ಅಣಿಮುತ್ತುಗಳು. ನೀವೇ ಆರಿಸಿಕೊಳ್ಳಬೇಕು.