»   » ಒಲ್ಲದ ನಲ್ಲನಿಗೆ ಭಾರಿ ಬೆಲೆತೆತ್ತ ಮಡೋನಾ

ಒಲ್ಲದ ನಲ್ಲನಿಗೆ ಭಾರಿ ಬೆಲೆತೆತ್ತ ಮಡೋನಾ

Subscribe to Filmibeat Kannada
Madonna
ಅಂತಾರಾಷ್ಟ್ರೀಯ ಪಾಪ್ ಗಾಯಕಿ ಮಡೋನಾ ತನ್ನ ಗಂಡ ಗೈ ರಿಚಿಗೆ 2008ರ ನವೆಂಬರ್ ತಿಂಗಳಲ್ಲಿ ಸೋಡಾ ಚೀಟಿ ಕೊಟ್ಟಿದ್ದರು. ವಿವಾಹ ವಿಚ್ಛೇದನ ಒಡಂಬಡಿಕೆ ಪ್ರಕಾರ ಈಗ ಆಕೆ ಮಾಜಿ ಗಂಡನಿಗೆ 76 ದಶಲಕ್ಷ ಡಾಲರ್ ಪರಿಹಾರ ಧನ ಕೊಡಬೇಕಾಗಿದೆ. ಸ್ವತಃ ನಿರ್ದೇಶಕ ಹಾಗೂ ಗಾಯಕನಾಗಿರುವ ಗೈ ರಿಚಿ 525 ದಶಲಕ್ಷ ಡಾಲರ್ ಆಸ್ತಿ ಒಡೆಯ.

ಹಣಕಾಸಿನ ವಿಚಾರದ ಬಗೆಗಿನ ಎಲ್ಲ ತಕರಾರು ಮುಗಿದಿದ್ದು , ಈ ಮಾಜಿ ದಂಪತಿಗಳ ಮಕ್ಕಳಾದ ರೋಕೊ(8) ಹಾಗೂ ದತ್ತು ಪುತ್ರ ಡೇವಿಡ್ ಬಾಂಡ್(3) ಯಾರ ಬಳಿ ಇರಬೇಕು ಎನ್ನುವ ಬಗ್ಗೆ ತೀರ್ಮಾನ ಆಗಬೇಕಾಗಿದೆ. ವಿವಾಹ ವಿಚ್ಛೇದನೆಗೆ ಸಂಬಂಧಿಸಿದಂತೆ ಇದುವರೆಗೆ ನೀಡಿರುವ ಭಾರಿ ಮೊತ್ತ ಇದಾಗಿದೆ ಎಂದು ಮಡೋನಾ ಪರ ವಕೀಲ ರೊಸನ್ ಬರ್ಗ್ ತಿಳಿಸಿದ್ದಾರೆ. ಆದರೆ ಗೈ ರಿಚೀ ಪರ ವಕೀಲರು ಇದನ್ನು ತಳ್ಳಿಹಾಕಿದ್ದಾರೆ.

2000ನೇ ವರ್ಷದಲ್ಲಿ ಸ್ಕಾಟಿಶ್ ದ್ವೀಪದಲ್ಲಿ ಮಡೋನಾ ಮತ್ತು ಗೈ ರಿಚಿ ಮದುವೆಯಾಗಿದ್ದರು. 2008ರ ಹೊತ್ತಿಗೆ ಇಬ್ಬರು ವಿವಾಹ ವಿಚ್ಛೇದನದಲ್ಲಿ ಅಗಲಿದರು.ಪ್ರಸ್ತುತ ಮಡೋನಾ Sticky and Sweet world tour ಎಂಬ ಹಾಲಿವುಡ್ ಚಿತ್ರದಲ್ಲಿ ಬ್ಯುಸಿಯಾಗಿದ್ದಾರೆ.

(ಏಜನ್ಸೀಸ್)


ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada