»   » ಎಆರ್.ರೆಹಮಾನ್ ಗೆ ಗೋಲ್ಡನ್ ಗ್ಲೋಬ್ ಪ್ರಶಸ್ತಿ

ಎಆರ್.ರೆಹಮಾನ್ ಗೆ ಗೋಲ್ಡನ್ ಗ್ಲೋಬ್ ಪ್ರಶಸ್ತಿ

Subscribe to Filmibeat Kannada
A.R. Rahman bags Satellite Award
ಖ್ಯಾತ ಸಂಗೀತ ಸಂಯೋಜಕ ಎ.ಆರ್.ರೆಹಮಾನ್ ಅವರಿಗೆ ಪ್ರತಿಷ್ಠಿತ ಗೋಲ್ಡನ್ ಗ್ಲೋಬ್ ಪ್ರಶಸ್ತಿ ವರಿಸಿದೆ. ಬ್ರಿಟಿಷ್ ನಿರ್ದೇಶಕ ಡ್ಯಾನ್ನಿ ಬಾಯ್ಲ್ ನಿರ್ದೇಶನದ Slumdog Millionaire ಎಂಬ ಚಿತ್ರಕ್ಕೆ ರೆಹಮಾನ್ ಸಂಗೀತ ಸಂಯೋಜಿಸಿದ್ದರು. ಅತ್ಯುತ್ತಮ ಚಿತ್ರ ನಾಟಕ ಹಾಗೂ ಉತ್ತಮ ನಿರ್ದೇಶಕ ಪ್ರಶಸ್ತಿಗಳು ಈ ಚಿತ್ರಕ್ಕೆ ದಕ್ಕಿವೆ.

ಮುಂಬೈ ಕೊಳಗೇರಿಗೆ ಸೇರಿದ 18 ರ ಅನಾಥ ಯುವಕನೊಬ್ಬನ ಕಥೆಯನ್ನು Slumdog Millionaire ಅನಾವರಣಗೊಳಿಸುತ್ತದೆ. ಚಿತ್ರದಲ್ಲಿ ಅವನು 'ಕೋಟ್ಯಾಧಿಪತಿ ಯಾರಾಗ ಬೇಕು?' ಎಂಬ ಕಾರ್ಯಕ್ರಮದಲ್ಲಿ ಭಾಗವಹಿಸಿ ರು.20 ಕೋಟಿ ಗೆದ್ದು ಕೋಟ್ಯಾಧಿಪತಿಯಾಗುತ್ತಾನೆ. ಇದು ಚಿತ್ರದ ಹೂರಣ.

''ಪ್ರಶಸ್ತಿ ಸಿಕ್ಕಿರುವುದಕ್ಕೆ ಖುಷಿಯಾಗಿದೆ. ಇದರ ಎಲ್ಲ ಶ್ರೇಯಸ್ಸು ಡ್ಯಾನ್ನಿ ಬಾಯ್ಲ್ ಗೆ ಸಲ್ಲುತ್ತದೆ. ಉತ್ತಮ ಸಂಗೀತವನ್ನು ನನ್ನಿಂದ ಆತ ಹೊರ ತೆಗೆಸಿದ್ದಾನೆ. ಡ್ಯಾನಿ ಮತ್ತು ನಾನು ಈಗ ಪರಮಾಪ್ತ ಮಿತ್ರರು ಎಂದು ರೆಹಮಾನ್ ಪ್ರಶಸ್ತಿ ಸಿಕ್ಕ ಬಗ್ಗೆ ಪ್ರತಿಕ್ರಿಯಿಸಿದ್ದಾರೆ. ಒಟ್ಟಿನಲ್ಲಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ಎ.ಆರ್.ರೆಹಮಾನ್ ಪ್ರತಿಭೆಯನ್ನು ಗುರುತಿಸಿರುವುದು ಮೆಚ್ಚ ಬೇಕಾದ ಸಂಗತಿ.

(ಏಜೆನ್ಸೀಸ್)

ಚಿತ್ರ ಚಿತ್ರ ವಿಶ್ಲೇಷಣೆ: ಕೊಳಚೆ ನಾಯಿ-ಕೋಟೀಶ್ವರ(Slumdog Millionaire)

Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada