»   » ಗೋಲ್ಡನ್ ಗ್ಲೋಬ್ ಅತ್ಯುತ್ತಮ ಚಿತ್ರ 'ಅವತಾರ್'

ಗೋಲ್ಡನ್ ಗ್ಲೋಬ್ ಅತ್ಯುತ್ತಮ ಚಿತ್ರ 'ಅವತಾರ್'

Posted By:
Subscribe to Filmibeat Kannada

ಹೆಸರಾಂತ ಹಾಲಿವುಡ್ ಚಿತ್ರ ನಿರ್ದೇಶಕ ಜೇಮ್ಸ್ ಕ್ಯಾಮೆರಾನ್ 'ಟೈಟಾನಿಕ್' ಚಿತ್ರದ ನಂತರ ಬಂದ ಭಾರಿ ಬಡ್ಜೆಟ್ ಚಿತ್ರ'ಅವತಾರ್'. ಈ ಚಿತ್ರ ಗಳಿಕೆಯ ದೃಷ್ಟಿಯಲ್ಲಿ 'ಟೈಟಾನಿಕ್' ನಂತರದ ಸ್ಥಾನದಲ್ಲಿ ನಿಲ್ಲುತ್ತದೆ. ಇದೀಗ 'ಅವತಾರ್' ಚಿತ್ರಕ್ಕೆ ಗೋಲ್ಡನ್ ಗ್ಲೋಬ್ ಪ್ರಶಸ್ತಿಯ ಗರಿ ಮೂಡಿದೆ.

ಅತ್ಯುತ್ತಮ ಚಿತ್ರ, ಅತ್ಯುತ್ತಮ ನಿರ್ದೇಶನ ವಿಭಾಗಗಳಲ್ಲಿ ಎರಡು ಪ್ರಶಸ್ತಿಗಳನ್ನು ಅವತಾರ್ ಚಿತ್ರ ತನ್ನದಾಗಿಸಿಕೊಂಡಿದೆ. ಅತ್ಯುತ್ತಮ ಚಿತ್ರಗಳಲ್ಲಿ ದಿ ಹರ್ಟ್ ಲಾಕರ್, ಇನ್ ಗ್ಲೋರಿಯಸ್ ಬಾಸ್ಟರ್ಡ್ಸ್, ಪ್ರೆಸಿಯಸ್, ಅಪ್ ಇನ್ ದಿ ಎಯರ್ ಚಿತ್ರಗಳು ಸ್ಪರ್ಧೆಯಲ್ಲಿದ್ದವು. ಈ ಚಿತ್ರಗಳನ್ನೆಲ್ಲಾ ಹಿಂದಿಕ್ಕಿ 'ಅವತಾರ್' ಅತ್ಯುತ್ತಮ ಚಿತ್ರ ಪ್ರಶಸ್ತಿಯನ್ನು ಬಾಚಿಕೊಂಡಿದೆ.

ಅತ್ಯುತ್ತಮ ನಿರ್ದೇಶಕ ಪ್ರಶಸ್ತಿಗಾಗಿ ಕ್ಯಾಮೆರಾನ್ ಗೆ ಅವರ ಮಾಜಿ ಹೆಂಡತಿ ಕೆಥರೀನ್ ಬಿಜೆಲೋ (ದಿ ಹರ್ಟ್ ಲಾಕರ್) ತೀವ್ರ ಸ್ಪರ್ಧೆ ನೀಡಿದ್ದರು. ಕ್ಲಿಂಟ್ ಈಸ್ಟ್ ವುಡ್ (ಇನ್ ವಿಕ್ಟಸ್), ಜಾಸನ್ ರಿಟ್ ಮಾನ್ (ಅಪ್ ಇನ್ ದಿ ಏರ್), ಕ್ವೆಂಟಿನ್ ಟಾರೊಂಟಿನೊ (ಇನ್ ಗ್ಲೋರಿಯನ್ ಬಾಸ್ಟರ್ಡ್ಸ್) ಸಹ ಈ ವಿಭಾಗದಲ್ಲಿ ಸ್ಪರ್ಧಿಸಿದ್ದರೂ...ಅಂತಿಮವಾಗಿ ಕ್ಯಾಮೆರೂನ್ ಗೆ ಅತ್ಯುತ್ತಮ ನಿರ್ದೇಶಕ ಪ್ರಶಸ್ತಿ ವರಿಸಿದೆ.

1997ರಲ್ಲಿ 'ಟೈಟಾನಿಕ್' ಚಿತ್ರಕ್ಕಾಗಿ ಅತ್ಯುತ್ತಮ ನಿರ್ದೇಶಕ ಪ್ರಶಸ್ತಿಯನ್ನು ಕ್ಯಾಮೆರೂನ್ ಪಡೆದಿದ್ದರು. ಇದೀಗ 'ಅವತಾರ್' ಚಿತ್ರಕ್ಕೆ ಪ್ರಶಸ್ತಿ ಬಂದ ಬಗ್ಗೆ ಕ್ಯಾಮೆರೂನ್ ಮಾತನಾಡುತ್ತಾ, ನನ್ನ ಮಾಜಿ ಪತ್ನಿ ಕೇಥರೀನ್ ಗೆ ಪ್ರಶಸ್ತಿ ಸಿಗುತ್ತದೆ ಅಂದುಕೊಂಡಿದ್ದೆ, ನನಗೆ ಬರುತ್ತದೆ ಎಂದುಕೊಂಡಿರಲಿಲ್ಲ. ಇರಾಕ್ ಯುದ್ಧದ ಹಿನ್ನೆಲೆಯಲ್ಲಿ ಆಕೆ ತೆಗೆದ 'ದಿ ಹರ್ಟ್ ಲಾಕರ್' ಉತ್ತಮ ಚಿತ್ರ. ನನ್ನನ್ನು ಆಯ್ಕೆ ಮಾಡಿರುವುದು ಸಂತಸ ತಂದಿದೆ ಎಂದರು.

'ದಿ ಬ್ಲೈಂಡ್' ಚಿತ್ರದಲ್ಲಿ ಒಳಾಂಗಣ ವಿನ್ಯಾಸಕಿಯಾಗಿ ನಟಿಸಿರುವ ಸಾಂಡ್ರಾ ಬುಲ್ಲಕ್ ಅತ್ಯುತ್ತಮ ನಟಿ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ. ಕ್ರೇಜಿ ಹರ್ಟ್ ಚಿತ್ರದಲ್ಲಿ ಸಂಗೀತ ಕಲಾವಿದನಾಗಿ, ಗೀತ ಸಾಹಿತಿಯಾಗಿ ನಟಿಸಿದ ಜೆಫ್ ಬ್ರಿಡ್ಜ್ ಗೆ ಅತ್ಯುತ್ತಮ ನಟ ಪ್ರಶಸ್ತಿ ವರಿಸಿದೆ. ಈ ವಿಭಾಗದಲ್ಲಿ ಜಾರ್ಜ್ ಕ್ಲೂನಿ (ಅವ್ ಇನ್ ದ ಎಯಿರ್), ಕೊಲಿನ್ ಫಿರ್ತ್ (ಎ ಸಿಂಗಲ್ ಮ್ಯಾನ್), ಮಾರ್ಗಾನ್ ಪ್ರೀಮ್ಯಾನ್ (ಇನ್ ವಿಕ್ಟಸ್), ಟೋಬಿ ಮಾಗ್ತ್ವೆರ್ (ಬ್ರದರ್ಸ್) ಸ್ಪರ್ಧೆಯಲ್ಲಿದ್ದರು. ಅತ್ಯುತ್ತಮ ವಿದೇಶಿ ಚಿತ್ರವಾಗಿ 'ದಿ ವೈಟ್ ರಿಬ್ಬನ್' ಚಿತ್ರ ಆಯ್ಕೆಯಾಗಿದೆ.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada