»   » ಪರಿವೆ ಇಲ್ಲದಂತೆ ಅರಿವೆ ಕಳಚಿದ ಪ್ಯಾರಿಸ್ ಹಿಲ್ಟನ್

ಪರಿವೆ ಇಲ್ಲದಂತೆ ಅರಿವೆ ಕಳಚಿದ ಪ್ಯಾರಿಸ್ ಹಿಲ್ಟನ್

Posted By:
Subscribe to Filmibeat Kannada

ಇತ್ತೀಚೆಗೆ ಹಾಲಿವುಡ್ ನಟಿ ಪ್ಯಾರಿಸ್ ಹಿಲ್ಟನ್ ಮರಿವಾನಾ ಮಾದಕ ದ್ರವ್ಯದೊಂದಿಗೆ ಫ್ರಾನ್ಸ್ ನಲ್ಲಿ ಸಿಕ್ಕಿಬಿದ್ದು ಸುದ್ದಿ ಮಾಡಿದ್ದಳು. ಇದೀಗ ಆಕೆ ಯೂರೋಪ್ ಪ್ರವಾಸದಲ್ಲಿದ್ದು ಈಜಾಟದಲ್ಲಿ ಮೈಮರೆತ ಆಕೆ ಪರಿವೆ ಇಲ್ಲದಂತೆ ಅರಿವೆ ಕಳಚಿಕೊಂಡಿದ್ದಾರೆ. ಆ ರೋಮಾಂಚಕ ದೃಶ್ಯಗಳು ಕ್ಯಾಮೆರಾ ದಲ್ಲಿ ಬಂಧಿಯಾಗಿವೆ.

ಪ್ಯಾರಿಸ್ ಹಿಲ್ಟನ್ ಕುಂಭ ದರ್ಶನದ ಚಿತ್ರಗಳನ್ನು ಯಥಾವತ್ತಾಗಿ Radaronline.com ಪ್ರಕಟಿಸಿದೆ. ಸನ್ ಗ್ಲಾಸ್ ತೊಟ್ಟು ಬಿಕಿನಿಯೊಂದಿಗೆ ಹಾಯಿ ದೋಣಿಯಲ್ಲಿ ವಿಹರಿಸುತ್ತಾ ಕೆಲವು ಫೋಟೋಗಳು, ಬಳಿಕ ಟಾಪ್ ಲೆಸ್ ನಲ್ಲಿ ತಂಗಾಳಿಗೆ ಎದೆಯೊಡ್ಡಿದ ಕೆಲವು ಫೋಟೋಗಳನ್ನು ಸ್ವತಃ ಆಕೆಯ ತಂಗಿ ನಿಕಿ ಹಿಲ್ಟನ್ ಸೆರೆಹಿಡಿದ್ದಾರೆ.

ಇದನ್ನು ಟ್ವೀಟ್ ಮಾಡಿಕೊಂಡಿರುವ ಹಿಲ್ಟನ್, ಈಗಷ್ಟೆ ಹಾಯಿದೋಣಿಯಲ್ಲಿ ವಿಹರಿಸಿಕೊಂಡು ಬಂದು ಸೂರ್ಯನ ಎಳೆ ಬಿಸಿಲಿಗೆ ಮೈಯೊಡ್ಡಿದ್ದೇನೆ. ವಾವ್! ಎಂಥಹ ಸುಂದರ ದಿನ ಎಂದಿದ್ದಾರೆ. ತಮ್ಮ ಹಡಗಿನಲ್ಲಿ ಚಿತ್ರಮಂದಿರ, ರೆಕಾರ್ಡಿಂಗ್ ಸ್ಟುಡಿಯೋ, ಮಸಾಜ್ ಪಾರ್ಲರ್, ಜಿಮ್, ಹೆಲಿಕಾಪ್ಟರ್ ಇಳಿದಾಣ ಎಲ್ಲವೂ ಇರುವುದಾಗಿ ಬರೆದುಕೊಂಡಿದ್ದಾರೆ. ಆದರೆ ಟಾಪ್ ಲೆಸ್ ಆಗಿದ್ದು ಯಾಕೆ ಎಂದು ಮಾತ್ರ ಹೇಳಿಲ್ಲ.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada