»   » ಇಂಗ್ಲಿಷ್ ರೂಪದರ್ಶಿ ನಗ್ನ ಚಿತ್ರಗಳಿಗೆ ಬಂಪರ್ ಬೆಲೆ!

ಇಂಗ್ಲಿಷ್ ರೂಪದರ್ಶಿ ನಗ್ನ ಚಿತ್ರಗಳಿಗೆ ಬಂಪರ್ ಬೆಲೆ!

Posted By:
Subscribe to Filmibeat Kannada

ಇಂಗ್ಲಿಷ್ ಸೂಪರ್ ಮಾಡೆಲ್ ಕೇಟ್ ಮಾಸ್ ಳ ಕಪ್ಪು ಬಿಳುಪಿನ ನಗ್ನ ಚಿತ್ರಗಳಿಗೆ ರಸಿಕ ಮಹಾಶಯರು ಮುಗಿಬಿದ್ದಾರೆ. 1993ರಲ್ಲಿ ತೆಗೆಯಲಾಗಿರುವ ಈಕೆಯ ಒಂದು ಡಜನ್ ನಗ್ನ ಚಿತ್ರಗಳು ಶುಕ್ರವಾರ(ಮೇ.21) ಸುಮಾರು 30,000 ಫೌಂಡ್ ಗಳಿಗೆ ಹರಾಜಾಗುವ ಸಾಧ್ಯತೆಯಿದೆ. ಇದುವರೆಗೂ 300ಕ್ಕೂ ಅಧಿಕ ಜನಪ್ರಿಯ ನಿಯತಕಾಲಿಕೆಗಳ ಮುಖಪುಟ ಅಲಂಕರಿಸಿದ ಖ್ಯಾತಿ ಕೇಟ್ ರದ್ದು.

ಈ ನಗ್ನ ಚಿತ್ರಗಳನ್ನು ಆಲ್ಬರ್ಟ್ ವ್ಯಾಟ್ ಸನ್ ಎಂಬ ಛಾಯಾಗ್ರಾಹಕ ಕೇಟ್ ಹದಿಹರಯದ ದಿನಗಳಲ್ಲಿ ತೆಗೆದಿದ್ದಾರೆ. ಮೈಮೇಲೆ ಒಂದಿನಿತೂ ಬಟ್ಟೆ, ಆಭರಣಗಳಿಲ್ಲದ ನಿರಾಭರಣ, ನಗ್ನ ಚಿತ್ರಗಳಿವು. ಹಾಗಾಗಿ ಈ ಚಿತ್ರಗಳನ್ನು ಕೊಳ್ಳಲು ಕಲಾರಸಿಕರು ಮುಂದಾಗಿದ್ದಾರೆ. ಸಮುದ್ರ ತೀರದ ಮರಳು ದಂಡೆಗಳಲ್ಲಿ ಕೇಟ್ ನಗ್ನ ಚಿತ್ರಗಳನ್ನು ಕ್ಯಾಮೆರಾ ಕಣ್ಣಿನಲ್ಲಿ ಸೆರೆಹಿಡಿಯಲಾಗಿದೆ.

ಕಪ್ಪು ಬಿಳುಪಿನ ಈ ಛಾಯಾಚಿತ್ರಗಳು ಉತ್ತಮ ಗುಣಮಟ್ಟದಲ್ಲಿದ್ದು ಆಕರ್ಷಕವಾಗಿವೆ. ಕೇಟ್ ಮುದುರಿಕೊಂಡು ಆದಷ್ಟು ತಮ್ಮ ದೇಹಸಿರಿಯನ್ನು ಮುಚ್ಚಿಟ್ಟುಕೊಳ್ಳಲು ಪ್ರಯತ್ನಿಸುತ್ತಿರುವ ಭಂಗಿಯಲ್ಲಿವೆ.ಛಾಯಾಗ್ರಾಹಕ ಹಾಗೂ ರೂಪದರ್ಶಿಯ ನಡುವೆ ಉತ್ತಮ ಬಾಂಧವ್ಯವಿದೆ ಎನ್ನುತ್ತಾರೆ ಮತ್ತೊಬ್ಬ ಛಾಯಾಗ್ರಾಹಕ ಅಲೆಗ್ಸಾಂಡರ್ ಮಾಂಟೆಗೊ.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada