»   » ಜಾಕ್ಸನ್ ಗೆ ಅಮ್ಮ ಕೊಟ್ಟ ಮರೆಯಲಾಗದ ಕೊಡುಗೆ

ಜಾಕ್ಸನ್ ಗೆ ಅಮ್ಮ ಕೊಟ್ಟ ಮರೆಯಲಾಗದ ಕೊಡುಗೆ

Posted By:
Subscribe to Filmibeat Kannada

ದಿವಂಗತ ಪಾಪ್ ತಾರೆ ಮೈಕೇಲ್ ಜಾಕ್ಸನ್ ತನ್ನ ಅಣ್ಣತಮ್ಮಂದಿರೊಂದಿಗೆ ಕಲೆತು (ಜಾಕ್ಸನ್ 5) ಹಾಡಿದ ಹಾಡುಗಳಲ್ಲಿ ಅತ್ಯಂತ ಜನಪ್ರಿಯವಾದವುಗಳಲ್ಲಿ 'ನೆವರ್ ಕೆನ್ ಸೆ ಗುಡ್ ಬೈ' ಒಂದು. ಇದೇ ಹೆಸರಿನೊಂದಿಗೆ ಜಾಕ್ಸನ್ ಅವರ ತಾಯಿ ಪುಸ್ತಕವನ್ನು ಬರೆದಿದ್ದಾರೆ.

ಪುಸ್ತಕದಲ್ಲಿ ಜಾಕ್ಸನ್ ರೊಂದಿಗೆ ಕೇಥರಿನ್ ಗೆ ಇದ್ದ ಸಂಬಂಧಗಳು, ಹಳೆಯ ಜ್ಞಾಪಕಗಳು ಜೊತೆಗೆ ಛಾಯಚಿತ್ರಗಳು ಇವೆ. ಪುಸ್ತಕ ಸೋಮವಾರ(ಜೂ.21) ಲೋಕರ್ಪಣೆಯಾಗಲಿದೆ. ಜಾಕ್ಸನ್ ರನ್ನು ಇಡೀ ವಿಶ್ವವೇ ಜ್ಞಾಪಿಸಿಕೊಳ್ಳುವಂತಹ ಪುಸ್ತಕವನ್ನು ಬರೆದಿರುವುದಾಗಿ ಕೇಥರಿ ನ್ ಹೇಳಿದ್ದಾರೆ.

ಜಾಕ್ಸನ್ ವಿಧಿವಶವಾಗಿ ಜೂನ್ ತಿಂಗಳ 25ಕ್ಕೆ ಒಂದು ವರ್ಷವಾಗುತ್ತದೆ. ಜಾಕ್ಸನ್ ಮಕ್ಕಳ ಸಂರಕ್ಷಣೆಯ ಜವಾಬ್ದಾರಿಯನ್ನು ಕೇಥರಿನ್ ಅವರೇ ಹೊತ್ತಿದ್ದಾರೆ. ಈ ಎಲ್ಲಾ ವಿವರಗಳನ್ನು ಟಿಎಂಜೆಡ್ ವೆಬ್ ಸೈಟಿನಲ್ಲಿ ಆಕೆ ಬಹಿರಂಗಪಡಿಸಿದ್ದಾರೆ.

Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada