For Quick Alerts
  ALLOW NOTIFICATIONS  
  For Daily Alerts

  ಗಾಯಕಿ ಬಿಯಾನ್ಸ್ ಬೆತ್ತಲೆ ಆಡ್ ನೋಡಿ ಬೆಚ್ಚದಿರಿ

  By Mahesh
  |

  ಹಾಲಿವುಡ್ ನಟಿ, ಸಿಂಗರ್ ಬಿಯಾನ್ಸ್ ನಟಿರುವ 'ಹೀಟ್" ಎಂಬ ಸುಂಗದ ದ್ರವ್ಯ (ಪರ್ಫೂಮ್) ಜಾಹೀರಾತನ್ನು ಹಗಲು ಹೊತ್ತು ಟಿವಿಯಲ್ಲಿ ಪ್ರಸಾರ ಮಾಡದಂತೆ ನಿರ್ಬಂಧ ಹೇರಲಾಗಿದೆ. ಯುವ ಜನತೆಯ ಮೇಲೆ ಕೆಟ್ಟ ಪರಿಣಾಮ ಬೀರುತ್ತಿರುವ ಹಿನ್ನಲೆಯಲ್ಲಿ ಪ್ರಸಾರ ಮಾಡದಂತೆ ಬ್ರಿಟನ್ನಿನ ಕಿರುತೆರೆ ಸೆನ್ಸಾರ್ ಮಂಡಳಿ ನಿರ್ಬಂಧ ಹೇರಿದೆ.

  ಕೇವಲ ವ್ಯಾಪಾರದ ದೃಷ್ಟಿ ಇಟ್ಟುಕೊಂಡು ತೆಗೆಯಲಾಗಿರುವ ಈ ಸೆಕ್ಸಿ ಜಾಹೀರಾತುಗಳಲ್ಲಿ ಹಾಡುಗಾರ್ತಿಯಾಗಿರುವ ಬಿಯಾನ್ಸ್ ಬೆತ್ತಲೆಯಾಗಿ ರೂಂನಲ್ಲಿ ಕುಳಿತಿರುವ ಭಾವಚಿತ್ರಗಳಿದ್ದು, ಇದು ಕಾಮಪ್ರಚೋದಕವಾಗಿದೆ. ಹಾಗಾಗಿ ಎಳೆ ವಯಸ್ಸಿನ ಮಕ್ಕಳು ಇಂತಹ ಜಾಹೀರಾತುಗಳನ್ನು ವೀಕ್ಷಿಸುವುದರಿಂದ ಅವರ ಮೇಲೆ ಕೆಟ್ಟ ಪರಿಣಾಮ ಬೀರಲಿದೆ. ಈ ನಿಟ್ಟಿನಲ್ಲಿ ಬ್ರಿಟನ್ನಿನಲ್ಲಿ ಸಂಜೆ 7.30 ರ ಮೊದಲು ಪ್ರಸಾರ ಮಾಡದಂತೆ ನಿರ್ಬಂಧ ವಿಧಿಸಲಾಗಿದೆ.

  ಈ ಜಾಹೀರಾತು ಬ್ರಿಟನ್ನಿನ 'ಐಟಿವಿ" ಮತ್ತು 'ಚಾಲನ್ 4" ಹಾಗೂ ಕೆಲವು ಮ್ಯೂಸಿಕ್ ಚಾನೆಲ್‌ಗಳಲ್ಲಿ ಪ್ರಸಾರವಾಗುತ್ತಿತ್ತು. ಈ ಜಾಹೀರಾತು ವಿರುದ್ಧ ವೀಕ್ಷಕರು ಈಗಾಗಲೇ 14 ದೂರುಗಳನ್ನು ದಾಖಲಿಸಿದ್ದು, ಜಾಹೀರಾತು ಗುಣಮಟ್ಟ ಅಧಿಕಾರಿಗಳು ಈ ಬಗ್ಗೆ ತನಿಖೆ ನಡೆಸುತ್ತಿದ್ದಾರೆ.

  ಸುಪ್ರಸಿದ್ಧಳೋ ಹಾಗೇ ಕುಪ್ರಸಿದ್ಧ: ಇಪ್ಪತ್ತೊಂಬತ್ತು ವರ್ಷ ವಯಸ್ಸಿನ ಅಮೆರಿಕನ್ ಬೆಡಗಿ, ಮಿಲಿಯನ್ ಗಟ್ಟಲೆ ಹಣಗಳಿಸಿ ಯಶಸ್ವಿಯಾಗಿರುವ ಹಾಡುಗಾರ್ತಿ. ಆದರೆ, ಮೊದಲಿನಿಂದಲೂ ಸೆಕ್ಸಿ ಜಾಹೀರಾತುಗಳ ನಟಿಸುವಲ್ಲಿ ಕುಖ್ಯಾತಿ ಪಡೆದಿದ್ದಾಳೆ. ಪ್ರಸ್ತುತ ವಿವಾದಕ್ಕೆ ಕಾರಣವಾಗಿರುವ ಜಾಹೀರಾತಿನಲ್ಲಿ ಬಿಯಾನ್ಸ್ ಆರಂಭದಲ್ಲಿ ರೂಮೊಂದರಲ್ಲಿ ಬೆತ್ತಲೆಯಾಗಿ ಹಾಡುತ್ತಿರುತ್ತಾಳೆ.

  ಮುಂದಿನ ದೃಶ್ಯದಲ್ಲಿ ದೇಹದ ಬಹುಭಾಗ ಹೊರಗೆ ಕಾಣುವಂತಹ ಕೆಂಪು ಸ್ಯಾಟಿನ್ ಬಟ್ಟೆ ಧರಿಸಿ ಕ್ಯಾಮರಾ ಕಡೆಗೆ ಹೆಜ್ಜೆ ಹಾಕಿ ಕುರ್ಚಿ ಮೇಲೆ ಕುಳಿತು ಕುತ್ತಿಗೆ ಹತ್ತಿರ ತನ್ನ ಎರಡೂ ಕೈಗಳನ್ನು ತರುತ್ತಾಳೆ. ಇದು ಎಂತಹವರ ಮನಸ್ಸನ್ನು ಕೆಡಿಸುವಂತಿದೆ ಎಂದು ಕೆಲ ವೀಕ್ಷಕರು ದೂರಿದ್ದಾರೆ.

  ಆದರೆ, ಡೆಸ್ಟಿನಿ ಚೈಡ್ ತಂಡದ ಮಾಜಿ ಸದಸ್ಯೆ ಗಾಯಕಿ, ಗೀತ ಸಾಹಿತಿ, ವಸ್ತ್ರ ವಿನ್ಯಾಸಗಾರ್ತಿ, ಬಿಯಾನ್ಸ್ ಈ ಬಗ್ಗೆ ಪ್ರತಿಕ್ರಿಯಿಸಿದ್ದು, ಇದರಲ್ಲಿ ನಾನೇನು ಬೆತ್ತಲಾಗಿಲ್ಲ ಹಾಗೂ ಜಾಹೀರಾತು ಪ್ರಚೋದನಕಾರಿಯಾಗಿಯೂ ಇಲ್ಲ ಎಂದಿದ್ದಾರೆ. 6.7 oz ಗೆ 24 ಯುಎಸ್ ಡಾಲರ್ ಬೆಲೆ ಇದೆ.

  ಪ್ರಚೋದನಕಾರಿ ಜಾಹೀರಾತು ವಿಡಿಯೋ ನೋಡಲು ಈ ಕೊಂಡಿ ಕಳಚಿ

  English summary
  A raunchy telly ad for Beyonce Knowles perfume Heat has been banned before 7.30pm after complaints from viewers, who branded the ad too hot for kids. It shows her lying naked, then caressing her breast and thigh while wearing a skimpy dress.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X