»   » ಸಾವು ಬದುಕಿನ ನಡುವೆ ಜಾಕ್ಸೆನ್ ಹೋರಾಟ

ಸಾವು ಬದುಕಿನ ನಡುವೆ ಜಾಕ್ಸೆನ್ ಹೋರಾಟ

Subscribe to Filmibeat Kannada
Michael Jacksons health precarious-Fox News
ಜನಪ್ರಿಯ ಪಾಪ್ ಗಾಯಕ ಮೈಕೇಲ್ ಜಾಕ್ಸನ್(50) ಸಾವು ಬದುಕಿನ ನಡುವೆ ಹೋರಾಟ ನಡೆಸುತ್ತಿದ್ದಾರೆ. ಶ್ವಾಸಕೋಶಗಳ ತೊಂದರೆಯಿಂದ ಬಳಲುತ್ತಿರುವ ಅವರ ಸ್ಥಿತಿ ಚಿಂತಾಜನಕವಾಗಿದೆ. ಜಾಕ್ಸನ್ ಗೆ ಶ್ವಾಸಕೋಶಗಳ ಬದಲಿ ಜೋಡಣೆ ಚಿಕಿತ್ಸೆ ಮಾಡಬೇಕಾಗಿದೆ. ಆದರೆ ಜಾಕ್ಸನ್ ಬಲಹೀನಗೊಂಡಿರುವ ಕಾರಣ ಚಿಕಿತ್ಸೆ ಮಾಡಲಾಗದೆ ವೈದ್ಯರು ಕೈಚೆಲ್ಲಿದ್ದಾರೆ. ಅವರನ್ನು ಕೆಲವು ದಿನಗಳ ಮಟ್ಟಿಗೆ ಮಾತ್ರ ಉಳಿಸಬಹುದು ಎಂದು 'ಸಂಡೆ ಎಕ್ಸ್ ಪ್ರೆಸ್' ಪತ್ರಿಕೆ ಪ್ರಕಟಿಸಿದೆ.

ಮೈಕೇಲ್ ಜಾಕ್ಸನ್ ಆತ್ಮಕಥೆ ಬರೆಯುತ್ತಿರುವ ಲೇಖಕ ಇಯಾನ್ ಹಲ್ ಪೆರಿನ್ ಈ ವಿಚಾರವನ್ನು ಬಹಿರಂಗ ಪಡಿಸಿರುವುದಾಗಿ ಪತ್ರಿಕೆ ತಿಳಿಸಿದೆ. ಸಂಶೋಧನಾತ್ಮಕ ಪತ್ರಕರ್ತನಾಗಿ ಕೆಲಸ ಮಾಡಿರುವ ಇಯಾನ್ ಗೆ ಹಲವಾರು ಪ್ರಶಸ್ತಿ, ಪುರಸ್ಕಾರಗಳನ್ನು ಸಂದಿವೆ. ಜಾಕ್ಸನ್, ಶ್ವಾಸಕೋಶಗಳ ಮೇಲೆ ಪ್ರಭಾವ ಬೀರುತ್ತಿದೆ. ಇದನ್ನು ನಿಯಂತ್ರಿಸಲು ವೈದ್ಯರು ಹರಸಾಹಸ ಮಾಡುತ್ತಿದ್ದರೂ ಪೂರ್ಣ ಪ್ರಮಾಣದಲ್ಲಿ ಅವರು ಯಶಸ್ವಿಯಾಗಲು ಸಾಧ್ಯವಾಗುತ್ತಿಲ್ಲ ಎಂದು ಇಯಾನ್ ಹೇಳಿದ್ದಾರೆ.

ಎಂಫಿಸೆಮ ಶ್ವಾಸಕೋಶಗಳ ಮೇಲೆ ಪ್ರಭಾವ ಬೀರುತ್ತದೆ. ಈ ಕಾಯಿಲೆಯಿಂದ ಬಳಲುತ್ತಿರುವವರಿಗೆ ಉಸಿರಾಡಲು ತೊಂದರೆಯಾಗುತ್ತದೆ. ಧೂಮಪಾನಿಗಳು ಈ ಕಾಯಿಲೆ ಹೆಚ್ಚಾಗಿ ತುತ್ತಾಗುತ್ತಾರೆ. ಆದರೆ ಮೈಕೇಲ್ ಸಿಗರೇಟು ಸೇದುವುದಿಲ್ಲ. ''ಜಾಕ್ಸನ್ ತರಹದ ಪರಿಸ್ಥಿತಿ ಐದು ಸಾವಿರ ಮಂದಿಯಲ್ಲಿ ಒಬ್ಬರಿಗೆ ಮಾತ್ರ ಅಮೆರಿಕಾದಲ್ಲಿ ಬರುವ ಸಾಧ್ಯತೆ ಇದೆ. ಈ ಕಾಯಿಲೆಗೆ ಚಿಕಿತ್ಸೆ ನೀಡುವುದು ಕಷ್ಟಕರವಾದ ಕೆಲಸ. ಏಕೆಂದರೆ ಈ ಕಾಯಿಲೆಗೆ ಹಲವಾರು ಕಾಯಿಲೆಗಳು ಜೊತೆಯಾಗುತ್ತವೆ, ಚಿಕಿತ್ಸೆ ನೀಡಲು ಸಾಧ್ಯವಾಗುವುದಿಲ್ಲ'' ಎನ್ನುತ್ತಾರೆ ವೈದ್ಯರು.

ಸುಮಾರು ದಿನಗಳಿಂದ ಜಾಕ್ಸನ್ ಈ ಸಮಸ್ಯೆಯಿಂದ ಬಳಲುತ್ತಿದ್ದಾರೆ. ಕಾಯಿಲೆಯನ್ನು ವಾಸಿ ಮಾಡಿಕೊಳ್ಳಲು ಈ ಹಿಂದೆ ಅವರು ಅನೇಕ ಬಾರಿ ಚಿಕಿತ್ಸೆ ಪಡೆದಿದ್ದರು ಎಂದು ಇವಾನ್ ವಿವರನೀಡಿರುವುದನ್ನು ಜಾಕ್ಸನ್ ರ ಅಧಿಕೃತ ಪ್ರತಿನಿಧಿ ಅಲ್ಲಗಳೆದಿದ್ದಾರೆ. ಆದರೆ ಜಾಕ್ಸನ್ ರ ಸಹೋದರ ಜರ್ಮೈನ್ ಮಾತ್ರ ಜಾಕ್ಸನ್ ಗೆ ತೀವ್ರ ಆರೋಗ್ಯ ಸಮಸ್ಯೆ ಇರುವ ಬಗ್ಗೆ ಪರೋಕ್ಷವಾಗಿ ಅಂಗೀಕರಿಸಿದ್ದಾರೆ. ''ಆತನ ಪರಿಸ್ಥಿತಿ ಚಿಂತಾಜನಕವಾಗಿದೆ. ಇದೊಂದು ದುರದೃಷ್ಟಕರವಾದ ವಿಚಾರ'' ಎಂದು 'ಫಾಕ್ಸ್ ಟಿವಿ ನ್ಯೂಸ್' ನೊಂದಿಗೆ ಆತ ಹೇಳಿಕೊಂಡಿದ್ದಾನೆ.

(ಏಜೆನ್ಸೀಸ್)

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada