»   » ಭಾರತಕ್ಕೆ ಮೊಟ್ಟ ಮೊದಲ ಬಾರಿಗೆ ಲೇಡಿ ಗಾಗಾ ಎಂಟ್ರಿ

ಭಾರತಕ್ಕೆ ಮೊಟ್ಟ ಮೊದಲ ಬಾರಿಗೆ ಲೇಡಿ ಗಾಗಾ ಎಂಟ್ರಿ

Posted By:
Subscribe to Filmibeat Kannada
Pop Singer Lady Gaga
ಪಾಪ್ ತಾರೆ ಲೇಡಿ ಗಾಗಾ ಅಕ್ಟೋಬರ್ 30ಕ್ಕೆ ಮುಂಬೈಗೆ ಆಗಮಿಸುತ್ತಿದ್ದು ರಾಗ ರಂಜನೆಯಲ್ಲಿ ತಮ್ಮ ಅಪಾರ ಅಭಿಮಾನಿ ಬಳಗವನ್ನು ತೇಲಿಸಲಿದ್ದಾರೆ. ಗ್ರೇಟರ್ ನೋಯ್ಡಾದಲ್ಲಿ ನಡೆಯುತ್ತಿರುವ ದೇಶದ ಚೊಚ್ಚಿಲ ಫಾರ್ಮುಲಾ ರೇಸ್ ಒನ್ ಮುಕ್ತಾಯ ಸಮಾರಂಭಕ್ಕೆ ಗಾಗಾ ಆಗಮನವಾಗಲಿದೆ.

ಲೇಡಿ ಗಾಗಾ ಬರುವ ಸುದ್ದಿಯನ್ನು ಗೋಪ್ಯವಾಗಿಡಲಾಗಿತ್ತು. ಆದರೆ ಬಾಲಿವುಡ್ ನಟ ಅರ್ಜುನ್ ರಾಂಪಾಲ್ ಸಸ್ಪೆನ್ಸ್ ತಾಳಲಾರದೆ ಸುದ್ದಿಯನ್ನು ಲೀಕ್ ಮಾಡಿದ್ದಾರೆ. ಭಾರತದಲ್ಲಿ ತಮ್ಮ ಪ್ರದರ್ಶನವನ್ನು ನೀಡಲು ಲೇಡಿ ಗಾಗಾ ಒಪ್ಪಿರುವುದೇ ದೊಡ್ಡ ವಿಷಯ ಎಂದಿದ್ದಾರೆ ಅರ್ಜುನ್.

ಸದ್ಯಕ್ಕೆ ತಮ್ಮ ವೃತ್ತಿಜೀವನದ ಉತ್ತುಂಗದಲ್ಲಿರುವ ಗಾಗಾ ಇದೇ ಮೊದಲ ಬಾರಿಗೆ ಭಾರತಕ್ಕೆ ಬರುತ್ತಿರುವುದು ನಿಜಕ್ಕೂ ಸಂತಸವಾಗುತ್ತಿದೆ ಎನ್ನುತ್ತಾರೆ ಅರ್ಜುನ್. ಫಾರ್ಮುಲಾ ಒನ್ ಕಾರ್ಯಕ್ರಮದಲ್ಲೂ ಭಾಗವಹಿಸುತ್ತಿರುವ ಗಾಗಾ ಬಳಿಕ ಮುಕ್ತಾಯ ಸಮಾರಂಭದಲ್ಲಿ ಹಾಡಿ ರಂಜಿಸಲಿದ್ದಾರಂತೆ. (ಏಜೆನ್ಸೀಸ್)

English summary
Sources claims that, American pop singer Lady GaGa will perform during the closing ceremony of the country's first Formula One race in Greater Noida on October 30.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada