»   » ಇಸ್ಲಾಂಗೆ ಮತಾಂತರವಾಗಿದ್ದರೆ ಜಾಕ್ಸನ್ ಸಾವಪ್ಪುತ್ತಿರಲಿಲ್ಲ

ಇಸ್ಲಾಂಗೆ ಮತಾಂತರವಾಗಿದ್ದರೆ ಜಾಕ್ಸನ್ ಸಾವಪ್ಪುತ್ತಿರಲಿಲ್ಲ

Posted By:
Subscribe to Filmibeat Kannada

ಪಾಪ್ ತಾರೆ ಮೈಕೇಲ್ ಜಾಕ್ಸನ್ ಒಂದು ವೇಳೆ ಇಸ್ಲಾಂ ಧರ್ಮಕ್ಕೆ ಮತಾಂತರಗೊಂಡಿದ್ದರೆ ಆತ ಬದುಕುಳಿಯುತ್ತಿದ್ದ ಎಂದು ಜಾಕ್ಸನ್ ಸಹೋದರ ಜರ್ಮೈನ್ ಸಂದರ್ಶನವೊಂದರಲ್ಲಿ ತಿಳಿಸಿದ್ದಾನೆ. ಜಾಕ್ಸನ್ ಮೊದಲ ಪುಣ್ಯ ಸ್ಮರಣೆ ಸಂದರ್ಭವನ್ನು ಉದ್ದೇಶಿಸಿ ಬಿಬಿಸಿಯೊಂದಿಗೆ ಜರ್ಮೈನ್ ಮಾತನಾಡುತ್ತಿದ್ದರು.

ಮಿತಿಮೀರಿದ ಡ್ರಗ್ ಸೇವನೆಯ ಕಾರಣ ಪಾಪ್ ದೊರೆ ಜಾಕ್ಸನ್ ತಮ್ಮ 50ರ ಹರಯದಲ್ಲಿ ಸಾವಪ್ಪಿದರು. ಒಂದು ವೇಳೆ ಜಾಕ್ಸನ್ ಇಸ್ಲಾಂ ಧರ್ಮದಲ್ಲಿ ನಂಬಿಕೆಯಿಟ್ಟು ಮತಾಂತರವಾಗಿದ್ದರೆ ಹೀಗೆ ಆಗುತ್ತಿರಲಿಲ್ಲ. ಇಂದಿಗೂ ಅವರು ನಮ್ಮೊಂದಿಗೆ ಜೀವಂತವಾಗಿ ಇರುತ್ತಿದ್ದರು ಎಂದು ಸ್ವತಃ ಮುಸ್ಲಿಂ ಆಗಿರುವ ಜರ್ಮೈನ್ ಜಾಕ್ಸನ್ ತಿಳಿಸಿದ್ದಾರೆ.

ಜಾಕ್ಸನ್ ತುಂಬಾ ಓದುತ್ತಿದ್ದ. ಅವನಿಗಾಗಿ ನಾನು ಸೌದಿ ಅರೇಬಿಯಾದಿಂದ ಪುಸ್ತಕಗಳನ್ನು ತರುತ್ತಿದ್ದೆ. ಬಹರೈನ್ ನಿಂದಲೂ ತಂದು ಕೊಡುತ್ತಿದ್ದೆ. ಮೊದಲು ಅವನನ್ನು ಅಮೆರಿಕಾದಿಂದ ಹೊರಗೆ ಕರೆದೊಯ್ದು ಬಹರೈನ್ ಗೆ ನೆಲೆನಿಲ್ಲುವಂತೆ ಮಾಡಲು ಪ್ರಯತ್ನಿಸಿದ್ದೆ ಎಂದಿದ್ದಾನೆ ಜರ್ಮೈನ್.

ಆದರೆ ಅವನು ಕಡೆಯವರೆಗೂ ಇಸ್ಲಾಂಗೆ ಮತಾಂತರವಾಗಲಿಲ್ಲ. ಹಾಗಂತ ಅವನು ಇಸ್ಲಾಂ ವಿರೋಧಿಯಾಗಿರಲಿಲ್ಲ. ಜಾಕ್ಸನ್ ಭದ್ರತಾ ಸಿಬ್ಬಂದಿಗಳೆಲ್ಲಾ ಇಸ್ಲಾಂ ಧರ್ಮಕ್ಕೆ ಸೇರಿದ್ದವರು. ರಕ್ಷಣೆ ಮಾಡುವವರು ಅಲ್ಲಾ ಇದ್ದಂತೆ. ಕಾಪಾಡುವುದೇ ದೇವರ ಧರ್ಮ ಅಲ್ಲವೆ? ಹಾಗಾಗಿ ಅವನಿಗೆ ಇಸ್ಲಾಂ ಧರ್ಮದ ಬಗ್ಗೆ ನಂಬಿಕೆ ಇತ್ತು ಎಂದಿದ್ದಾರೆ.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada