»   » ಟ್ವಿಟ್ಟರ್ ಲೋಕದ ರಾಣಿ ಬ್ರಿಟ್ನಿ ಸ್ಪಿಯರ್ಸ್

ಟ್ವಿಟ್ಟರ್ ಲೋಕದ ರಾಣಿ ಬ್ರಿಟ್ನಿ ಸ್ಪಿಯರ್ಸ್

Posted By:
Subscribe to Filmibeat Kannada

ಪಾಪ್ ಗಾಯಕಿ ಬ್ರಿಟ್ನಿ ಸ್ಪಿಯರ್ಸ್ 'ಊಪ್ಸ್ ಐ ಡಿಡ್ ಇಟ್ ಎಗೇನ್ ..' ಎಂದು ಹಾಡುತ್ತಿದ್ದಾರೆ. ಅದರಲ್ಲೇನು ವಿಶೇಷ ಅಂತೀರಾ? ಅದು ಆಕೆಯ ಅತಿ ಜನಪ್ರಿಯ ಗೀತೆ ಇರಬಹುದು. ಈಗ ಬ್ರಿಟ್ನಿ ಖುಷಿ ಪಡಲು ಕಾರಣವಿದೆ. ಸಾಮಾಜಿಕ ಜಾಲತಾಣ ಟ್ವಿಟ್ಟರ್.ಕಾಂ ನಲ್ಲಿ ದಶಲಕ್ಷಕ್ಕೂ ಅಧಿಕ ಹಿಂಬಾಲಕರನ್ನು ಹೊಂದಿದ ಮೊದಲ ಚಿತ್ರ/ಸಂಗೀತ ತಾರೆ ಎಂದು ಯಶಸ್ಸು ಗಳಿಸಿದ್ದ ಬ್ರಿಟ್ನಿ, ಈಗ ಅತಿ ಜನಪ್ರಿಯ ಸೆಲೆಬ್ರಿಟಿ ಎಂಬ ಕೀರ್ತಿ ಹೊಂದಿದ್ದಾರೆ.

ಮೈಕ್ರೋ ಬ್ಲಾಗಿಂಗ್ ತಾಣ ಟ್ವಿಟ್ಟರ್.ಕಾಂನಲ್ಲಿ ಅತಿ ಹೆಚ್ಚು ಹಿಂಬಾಲಕರನ್ನು ಹೊಂದಿದ್ದ ಅಸ್ಟನ್ ಕಚ್ಚರ್ ರನ್ನು ಹಿಂದಿಕ್ಕಿರುವ 29 ರ ಹರೆಯ ಅಮೆರಿಕಾ ಮೂಲದ ಪಾಪ್ ತಾರೆ ಸಹಜವಾಗಿ ಖುಷಿಯಾಗಿದ್ದಾರೆ. 4,955,768 ಅನುಯಾಯಿಗಳನ್ನು ಹೊಂದಿದ್ದರೆ, 4,944,221 ಹಿಂಬಾಲಕರನ್ನು ಅಸ್ಟನ್ ಹೊಂದಿದ್ದಾರೆ.

ಅನುಯಾಯಿಗಳಿಗೆ ಪ್ರೀತಿಪೂರ್ವಕ ಧನ್ಯವಾದಗಳು. ನಿಮ್ಮ ಅಭಿಮಾನದಿಂದ ನಾನು ಅತ್ಯಂತ ಹೆಚ್ಚು ಸಂತೋಷಪಡುವಂತಾಗಿದೆ ಎಂದು ಬ್ರಿಟ್ನಿ ಸ್ಪಿಯರ್ಸ್ ಟ್ವೀಟ್ ಮಾಡಿದ್ದಾರೆ. 2008ರಲ್ಲಿ ಟ್ವಿಟ್ಟರ್ ಹಕ್ಕಿಯ ಹಿಂದೆ ಬಿದ್ದ ಬ್ರಿಟ್ನಿ ಮತ್ತೆ ತಿರುಗಿ ನೋಡಿದ್ದಿಲ್ಲ. ಭಾರತದ ಸೆಲೆಬ್ರಿಟಿಗಳಲ್ಲಿ ಸಿನಿಮಾ, ಸಂಗೀತ ,ಕ್ರೀಡೆ ಎಲ್ಲಾ ಕ್ಷೇತ್ರವನ್ನು ಗಣನೆ ತೆಗೆದುಕೊಂಡರೆ, ಸದ್ಯಕ್ಕೆ ಮಾಸ್ಟರ್ ಬ್ಲಾಸ್ಟರ್ ಸಚಿನ್ (3,60,368 ಹಿಂಬಾಲಕರು) ಎಲ್ಲರನ್ನು ಹಿಂದಿಕ್ಕಿ ಮುಂದೆ ಸಾಗುತ್ತಿದ್ದಾರೆ. ಬಿಗ್ ಬಿ (97,754 ಹಿಂಬಾಲಕರು) ಕೂಡ ಸಚಿನ್ ವೇಗಕ್ಕೆ ತಲೆಬಾಗಿದ್ದಾರೆ.

Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada