»   » ಮರ್ಲಿನ್ ಮನ್ರೊ ವಕ್ಷಸ್ಥಳದ ಎಕ್ಸ್ ರೇಗೆ ದಾಖಲೆ ಬೆಲೆ

ಮರ್ಲಿನ್ ಮನ್ರೊ ವಕ್ಷಸ್ಥಳದ ಎಕ್ಸ್ ರೇಗೆ ದಾಖಲೆ ಬೆಲೆ

Posted By:
Subscribe to Filmibeat Kannada

ಹಾಲಿವುಡ್ ನ ಪ್ರಸಿದ್ಧ ನಟಿ ಮರ್ಲಿನ್ ಮನ್ರೊ ಅವರ ವಕ್ಷಸ್ಥಳದ ಎಕ್ಸ್ ರೆ ಚಿತ್ರ ಹರಾಜಿನಲ್ಲಿ ದಾಖಲೆ ಬೆಲೆಗೆ ಸುಮಾರು 45 ಸಾವಿರ ಡಾಲರ್ಸ್ ಗೆ ಮಾರಾಟವಾಗಿದೆ. ನವೆಂಬರ್ 10, 1954ರಲ್ಲಿ ಮರ್ಲಿನ್ ಆಸ್ಪತ್ರೆಗೆ ಭೇಟಿ ಕೊಟ್ಟ ಸಂದರ್ಭದಲ್ಲಿ ಈ ಎಕ್ಸ್ ರೇ ತೆಗೆಯಲಾಗಿತ್ತು.

ಲಾಸ್ ವೆಗಾಸ್ ನಲ್ಲಿ ನಡೆದ ಹರಾಜಿನಲ್ಲಿ ಮರ್ಲಿನ್ ಅವರ ಈ ಎಕ್ಸ್ ರೇ ಚಿತ್ರದೊಂದಿಗೆ ಅವರು 1962ರಲ್ಲಿ ಬಳಸಿದ್ದ ಕುರ್ಚಿ, ಹೈಹೀಲ್ಡ್ ಶೂಗಳನ್ನು ಹರಾಜಿಗೆ ಇಡಲಾಗಿದೆ. ಈ ಹಿಂದೆ ನಡೆದ ಹರಾಜಿನಲ್ಲಿ ಮರ್ಲಿನ್ ಮನ್ರೊ ಅಭಿಮಾನಿಗಳು ಆಕೆಯ ಭಾವಚಿತ್ರಗಳನ್ನು ದಾಖಲೆ ಬೆಲೆಗೆ ಖರೀದಿಸಿದ್ದರು.

ಆಕೆ ಮಧುಚಂದ್ರಕ್ಕೆ ತೆರಳಿದ್ದ ಹಾಗೂ ಕೊರಿಯಾಗೆ ಕೈಗೊಂಡಿದ್ದ ಪ್ರವಾಸದಲ್ಲಿ ತೆಗೆದ ಛಾಯಾಚಿತ್ರಗಳನ್ನು ಅಭಿಮಾನಿಗಳು ಜಿದ್ದಿಗೆ ಬಿದ್ದು ಹರಾಜಿನಲ್ಲಿ ಕೊಂಡುಕೊಂಡಿದ್ದರು. ಮನ್ರೊ ಬಳಸಿದ್ದ ಕುರ್ಚಿ 35 ಸಾವಿರ ಡಾಲರ್ ಗೆ ಮಾರಾಟವಾಗಿದೆ. ಇದೇ ಹರಾಜಿನಲ್ಲಿ ಪಾಪ್ ತಾರೆ ಮೈಕೇಲ್ ಜಾಕ್ಸನ್ ಬಳಸಿದ್ದ ಕೈಗವಸುಗಳು 190,000 ಡಾಲರ್ ಗೆ ಮಾರಾಟವಾಗಿದೆ.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada