Just In
Don't Miss!
- Sports
ಐಎಸ್ಎಲ್: ಈಸ್ಟ್ ಬೆಂಗಾಲ್ ಅಜೇಯ ನಡೆಗೆ ಬೆಸ್ಟ್ ಮುಂಬೈ ಸವಾಲು
- News
ಶಿವಮೊಗ್ಗದಲ್ಲಿ ಡೈನಾಮೈಟ್ ಸ್ಫೋಟ: ಕನಿಷ್ಠ 7 ಕಾರ್ಮಿಕರ ಸಾವಿನ ಶಂಕೆ
- Finance
ಬಜೆಟ್ 2021: ಪ್ರಧಾನಿ ಮೋದಿ ಅಧ್ಯಕ್ಷತೆಯಲ್ಲಿ ಜನವರಿ 30ರಂದು ಸರ್ವ ಪಕ್ಷಗಳ ಸಭೆ
- Lifestyle
ಗಣರಾಜ್ಯೋತ್ಸವ 2021: ಇಲ್ಲಿದೆ ಶುಭಾಶಯಗಳು, ಕೋಟ್ಸ್, ವಾಟ್ಸಾಪ್ ಸ್ಟೇಟಸ್
- Automobiles
ಬಿಡುಗಡೆಗೆ ಸಜ್ಜಾದ ಹೊಸ ಡುಕಾಟಿ ಸ್ಕ್ರ್ಯಾಂಬ್ಲರ್ ಬೈಕುಗಳು
- Education
BMRCL Recruitment 2021: ಸೀನಿಯರ್ ಅರ್ಬನ್ ಮತ್ತು ಟ್ರಾನ್ಸ್ ಪೋರ್ಟ್ ಪ್ಲಾನರ್ ಹುದ್ದೆಗಳಿಗೆ ಅರ್ಜಿ ಆಹ್ವಾನ
- Technology
ಒನ್ಪ್ಲಸ್ ನಾರ್ಡ್ ಜುಲೈ 15 ರಿಂದ ಅಮೆಜಾನ್ ತಾಣದಲ್ಲಿ ಪ್ರಿ-ಆರ್ಡರ್ಗೆ ಲಭ್ಯವಿದೆ; ಖರೀದಿಸುವಲ್ಲಿ ಮೊದಲಿಗರಾಗಿರಿ!
- Travel
ಭಾರತದಲ್ಲಿ ಜೂನ್ 1 ರಿಂದ ಚಲಿಸಲಿರುವ ರೈಲುಗಳ ಸಂಪೂರ್ಣ ಪಟ್ಟಿ
'ಟೈಟಾನಿಕ್' ನಟಿ ಗ್ಲೋರಿಯಾ ಸ್ಟುವರ್ಟ್ ನಿಧನ
ಹಾಲಿವುಡ್ ನ ಆ ಕಾಲದ ಸುಂದರಿ, ಐತಿಹಾಸಿಕ ಟೈಟಾನಿಕ್ ಚಲನಚಿತ್ರದಲ್ಲಿ ಪೋಷಕ ನಟಿಯಾಗಿ ಪಾತ್ರ ವಹಿಸಿದ್ದ ಗ್ಲೋರಿಯಾ ಸ್ಟುವರ್ಟ್ ನೂರನೆ ವಯಸ್ಸಿನಲ್ಲಿ ಲಾಸ್ ಏಂಜೆಲ್ಸ್‌ನ ತಮ್ಮ ಸ್ವಗೃಹದಲ್ಲಿ ನಿಧನರಾಗಿದ್ದಾರೆ ಎಂಬ ಸುದ್ದಿ ತಡವಾಗಿ ಬೆಳಕಿಗೆ ಬಂದಿದೆ.
1930ರ ದಶಕದ ಹಾಲಿವುಡ್ ಸುಂದರಿ ಎಂದು ಹೆಸರಾಗಿದ್ದ ಗ್ಲೋರಿಯಾ ಕಳೆದ ಮೂವತ್ತು ವರ್ಷಗಳಿಂದ ಚಿತ್ರರಂಗದಿಂದ ದೂರವುಳಿದಿದ್ದರು. ಅವರ ಹೆಸರನ್ನು ಅಕಾಡಮಿ ಪುರಸ್ಕಾರಕ್ಕೂ ಸೂಚಿಸಲಾಗಿದ್ದು, ಇದುವರೆಗೆ ನಾಮ ನಿರ್ದೇಶನಗೊಂಡವರಲ್ಲಿ ಅತ್ಯಂತ ಹಿರಿಯ ವ್ಯಕ್ತಿಯೆಂದು ಪರಿಗಣಿಸಲಾಗಿತ್ತು. ಗ್ಲೋರಿಯಾ ಉಸಿರಾಟದ ತೊಂದರೆಯಿಂದಾಗಿ ತಮ್ಮ ಸ್ವಗೃಹದಲ್ಲಿ ನಿಧನರಾಗಿದ್ದಾರೆ ಎಂದು ಅವರ ಪುತ್ರಿ ಸಿಲ್ವಿಯಾ ಥಾಂಪ್ಸನ್ ತಿಳಿಸಿದ್ದಾರೆ.
ಗ್ಲೋರಿಯಾ ಕಳೆದ ಐದು ವರ್ಷಗಳಿಂದ ಗಂಟಲು ಕ್ಯಾನ್ಸರ್‌ನಿಂದ ಬಳಲುತ್ತಿದ್ದು, ಚಿಕಿತ್ಸೆ ಪಡೆಯುತ್ತಿದ್ದರು ಎಂದು ಥಾಂಪ್ಸನ್ ವಿವರಿಸಿದ್ದಾರೆ. ತಮ್ಮ ಯೌವ್ವನದಲ್ಲಿ ಹೊಂಬಣ್ಣದ ಕೂದಲಿನ ಚೆಲುವೆಯಾಗಿದ್ದ ಗ್ಲೋರಿಯಾ ಸ್ಟುವರ್ಟ್ 'ದಿ ಇನ್‌ವಿಸಿಬಲ್ ಮ್ಯಾನ್', 'ಗೋಲ್ಡ್ ಡಿಗ್ಗರ್ಸ್ ಆಫ್ 1935', 'ಪೂವರ್ ಲಿಟ್ಲ್ ರಿಚ್ ಗರ್ಲ್', 'ರೆಬೆಕ್ಕಾ ಆಫ್ ಸನ್ನಿಬ್ರೂಕ್ ಫಾರ್ಮ್' ಮೊದಲಾದ ಚಿತ್ರಗಳಲ್ಲಿ ತಾರೆಯಾಗಿ ಪ್ರೇಕ್ಷಕರ ಗಮನ ಸೆಳೆದಿದ್ದರು.
ಟೈಟಾನಿಕ್ ಅಜ್ಜಿಗೆ ನಾಲ್ಕು ಮೊಮ್ಮಕ್ಕಳು, 12 ಜನ ಮರಿಮೊಮ್ಮಕ್ಕಳಿದ್ದಾರೆ. ಹಾಲಿವುಡ್ ನಟ ಟೈಟಾನಿಕ್ ಚಿತ್ರದ ಹೀರೋ ಲಿಯಾನಾರ್ಡೊ ಡಿ ಕಾರ್ಪಿಯೋ ಸೇರಿದಂತೆ ಹಲವಾರು ಪ್ರಮುಖರು ಗ್ಲೋರಿಯಾ ಅವರ ನಿಧನಕ್ಕೆ ಕಂಬನಿ ಮಿಡಿದಿದ್ದಾರೆ. ಹಾಲಿವುಡ್ ನ ಶತಮಾನದ ಸೌಂದರ್ಯವತಿ ನಟಿ ಕಳೆದುಕೊಂಡ ದುಃಖ ಆವರಿಸಿದೆ ಎಂದು ಲಿಯನಾರ್ಡೊ ಪ್ರತಿಕ್ರಿಯಿಸಿದ್ದಾರೆ.