»   »  ಬೆಚ್ಚಿ ಬೀಳಿಸುತ್ತಿರುವಜಾಕ್ಸನ್ ಶವಪರೀಕ್ಷೆ ವರದಿ

ಬೆಚ್ಚಿ ಬೀಳಿಸುತ್ತಿರುವಜಾಕ್ಸನ್ ಶವಪರೀಕ್ಷೆ ವರದಿ

Subscribe to Filmibeat Kannada

ಪಾಪ್ ಮಾಂತ್ರಿಕ ಮೈಕೆಲ್ ಜಾಕ್ಸನ್ ಶವ ಪರೀಕ್ಷೆಯ ವರದಿ ಬೆಚ್ಚಿ ಬೀಳಿಸುವ ಅಂಶಗಳನ್ನು ಹೊರಹಾಕಿದೆ. ಸಾವಿಗೂ ಮುನ್ನ ಜಾಕ್ಸನ್ ಅಕ್ಷರಶಃ ಅಸ್ಥಿಪಂಜರವಾಗಿದ್ದರು. ಮುರಿದ ಪಕ್ಕೆಲುಬುಗಳು, ಸುಕ್ಕುಗಟ್ಟಿದ ಚರ್ಮ, ಮೂಗೇಟುಗಳಿಂದ ಅವರ ದೇಹ ಜರ್ಜರಿತವಾಗಿತ್ತು. ಉದರದಲ್ಲಿ ಬರೀ ಮಾತ್ರೆಗಳಿದ್ದವು ಎಂಬ ವರದಿಯನ್ನು ಬ್ರಿಟನ್ನಿನ ಸನ್ ನಿಯತಕಾಯಿಕೆ ಬಹಿರಂಗಪಡಿಸಿದೆ.

ಜಾಕ್ಸನ್ ರಭುಜಗಳು, ನಿತಂಬಗಳು ಚುಚ್ಚಿದ ಗಾಯಗಳಿಂದ ಕೂಡಿತ್ತು. ಅವರಿಗೆ ನೋವು ನಿವಾರಕ ಚುಚ್ಚು ಮದ್ದನ್ನು ದಿನಕ್ಕೆ ಮೂರು ಬಾರಿ ನೀಡುತ್ತಿದ್ದರು. ಜಾಕ್ಸನ್ ಹಲವಾರು ಸಲ ಪ್ಲಾಸ್ಟಿಕ್ ಸರ್ಜರಿಗೆ ಒಳಗಾಗಿದ್ದರು ಎಂಬ ಅಂಶವನ್ನು ಅವರ ಮೈಮೇಲಿನ ಕಲೆಗಳು ತಿಳಿಸುತ್ತವೆ. ಕನಿಷ್ಠ ಪಕ್ಷ ಅವರು 13 ಸಲ ಪ್ಲಾಸ್ಟಿಕ್ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದರು ಎಂಬುದನ್ನು ಅವರ ಮೈಮೇಲಿನ ಗುರುತುಗಳು ತಿಳಿಸುತ್ತವೆ.

ಸನ್ ನಿಯತಕಾಯಿಕೆ ಬಹಿರಂಗಪಡಿಸಿರುವ ಶವ ಪರೀಕ್ಷೆಯ ವರದಿಯಲ್ಲಿ ಜಾಕ್ಸನ್ ತಲೆಕೂದಲೆಲ್ಲಾ ಉದುರಿ ಹೋಗಿ ಬೊಕ್ಕವಾಗಿದ್ದರು. ಅದನ್ನ್ನು ವಿಗ್ ನಿಂದ ಮುಚ್ಚಿಕೊಂಡಿದ್ದರು. ಹೃದಯಾಘಾತಕ್ಕೆ ಒಳಗಾಗಿ ಉಸಿರಾಟಕ್ಕೆ ಅನುವು ಮಾಡಿಕೊಡುವಾಗ ಜೋರಾಗಿ ಎದೆಯ ಭಾಗವನ್ನು ಒತ್ತಿದ್ದರಿಂದ ಎದೆಯ ಮೂಳೆಗಳು ಮುರಿದಿವೆ ಎಂದು ಹೇಳಿದೆ.

ಭುಜ ಮತ್ತು ಮೊಣಕಾಲುಗಳ ಮೇಲಿನ ಗಾಯಗಳಿಗೆ ಸೂಕ್ತ ಕಾರಣ ತಿಳಿದುಬಂದಿಲ್ಲ. ಬರೀ ಮಾತ್ರೆಗಳನ್ನು ತೆಗೆದುಕೊಳ್ಳುತ್ತಿದ್ದ ಜಾಕ್ಸನ್ ಅವರಿಗೆ ಖಾಲಿ ಹೊಟ್ಟೆಯಲ್ಲಿ ನೋವು ನಿವಾರಕ ಚುಚ್ಚು ಮದ್ದು ನೀಡಿದ್ದರ ಪರಿಣಾಮ ಹೃದಯಾಘಾತವಾಗಿರಬಹುದು ಎಂದು ವೈದ್ಯರು ಶಂಕಿಸಿದ್ದಾರೆ. ಈ ವರದಿಯ ಆಧಾರದ ಮೇಲೆ ಜಾಕ್ಸನ್ ಕುಟುಂಬದವರು ಕಾನೂನು ಸಮರಕ್ಕೆ ಸಜ್ಜಾಗಿದ್ದಾರೆ.

(ದಟ್ಸ್ ಕನ್ನಡ ಚಿತ್ರವಾರ್ತೆ)

Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada