For Quick Alerts
  ALLOW NOTIFICATIONS  
  For Daily Alerts

  ಶಾಂತಿ ಕದಡಿದ ಹಿಲ್ಟನ್ ನೋಟು ಪೀಸ್ ಪೀಸ್

  By Mahesh
  |

  ಭಾರತಕ್ಕೆ ಬಂದಿರುವ ಹಾಲಿವುಡ್ ಬೆಡಗಿ ಪ್ಯಾರಿಸ್ ಹಿಲ್ಟನ್, ಮುಂಬೈನ 22 ವರ್ಷದ ಭಿಕ್ಷುಕಿ ಇಶಿಕಾ ಉದಾರತೆಯಿಂದ ನೀಡಿದ ನೂರು ಡಾಲರ್ (ಸುಮಾರು 4,900 ರೂ ) ನೋಟು, ಶಾಂತಿ ಕದಡಿದೆ.

  ನೋಟು ಹಂಚಿಕೆ ಜಗಳದಲ್ಲಿ ಇಶಿಕಾ ಸೋದರ ಸಂಬಂಧಿ ಗೃಹಶಾಂತಿ ಕದಡುವ ಈ ನೋಟು ಯಾರಿಗೂ ಬೇಡ ಎಂದು ಹೇಳಿ ಕೋಪದಿಂದ ನೋಟನ್ನು ಹರಿದು ಚಿಂದಿ ಚಿಂದಿ ಮಾಡಿದ್ದಾನೆ.

  ಕೈ ಬಂದ ತುತ್ತು ಬಾಯಿಗೆ ಬರದಂತಾಗಿ ಇಶಿಕಾ ಹ್ಯಾಪ್ ಮೋರೆ ಹಾಕಿಕೊಂಡು ಮತ್ತದೇ ರಸ್ತೆಗೆ ಬಂದು ಭಿಕ್ಷೆ ಎತ್ತುತ್ತಿದ್ದಾಳೆ.

  ಡಾಲರ್ ನೋಟು ಸಿಕ್ಕ ಕ್ಷಣ: ಇಶಿಕಾ ಎಂದಿನಂತೆ ರವಿವಾರದಂದು ಸಂಜೆ ಹೋಟೆಲ್ ಮುಂದೆ ಭಿಕ್ಷೆ ಬೇಡುತ್ತಾ ನಿಂತಿದ್ದಳು. ಅಲ್ಲಿಗೆ ಬಂದ ಪ್ಯಾರಿಸ್ ಹಿಲ್ಟನ್, ಭಿಕ್ಷುಕಿಗೆ 100 ಡಾಲರ್ ಮೊತ್ತ ದ ನೋಟು ನೀಡಿದಳು.

  ಗೊರೆಗಾಂವ್ ರೈಲ್ವೆನಿಲ್ದಾಣದ ಬಳಿಯಿರುವ ನಿವಾಸಕ್ಕೆ ತೆರಳಿ ತನ್ನ ಕುಟುಂಬಕ್ಕೆ ನೋಟು ತೋರಿಸಿದ್ದಾಳೆ.

  ನೋಟನ್ನು ವಿನಿಮಯ ಮಾಡಿಕೊಂಡು ತರುವಂತೆ ಮೈದುನನಿಗೆ ಕೊಟ್ಟಿದ್ದಾಳೆ. ಆದರೆ, ಯಾರಿಗೆ ಎಷ್ಟು ಪಾಲು ಸಿಗಬೇಕು ಎಂದು ಆಕೆ ಸಂಸಾರದಲ್ಲಿ ಕಿತ್ತಾಟ ಶುರುವಾಗಿದೆ. ನೋಟಿನ ದೆಸೆಯಿಂದ ನಮ್ಮ ನಮ್ಮಲೇ ಏಕೆ ಕಿತ್ತಾಟ ಎಂದು ಯೋಚಿಸಿ ಕೊನೆಗೆ ಅವಳ ಮೈದುನ ನೋಟು ಹರಿದು ಚಿಂದಿ ಮಾಡಿ ಎಸೆದಿದ್ದಾನೆ.

  English summary
  Hollywood celebrity Paris Hilton, generous present to 22-year-old beggar, Ishika turned ugly and useless. Brother-in-law of beggar woman IshikaI has torn $100 note into pieces as money was destroying the peace of the household.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X