Don't Miss!
- Lifestyle
Horoscope Today 6 Feb 2023: ಸೋಮವಾರ : ದ್ವಾದಶ ರಾಶಿಗಳ ರಾಶಿಫಲ ಹೇಗಿದೆ?
- Sports
IND VS AUS Test: ಟೆಸ್ಟ್ ಸರಣಿಯಲ್ಲಿ ಕೆಎಲ್ ರಾಹುಲ್ ವಿಕೆಟ್ ಕೀಪರ್ ಅಲ್ಲ: ಪದಾರ್ಪಣೆ ಮಾಡಲು ಸಜ್ಜಾದ ವಿಕೆಟ್ ಕೀಪರ್
- News
ರಾಜ್ಯ ರಾಜಕೀಯದ ಮುಂದಿನ ರಹಸ್ಯವೊಂದನ್ನು ಬೇಧಿಸಿದ ಎಚ್ಡಿಕೆ
- Finance
ಆಧಾರ್ ಕಾರ್ಡ್ ಸಂಖ್ಯೆಯಿಂದ ನಿಮ್ಮ ಬ್ಯಾಂಕ್ ಬ್ಯಾಲೆನ್ಸ್ ಪರಿಶೀಲಿಸಿ, ಹೇಗೆ ಇಲ್ಲಿ ತಿಳಿಯಿರಿ
- Automobiles
ಹೆಚ್ಚಿನ ಮೈಲೇಜ್ ನೀಡುವ ಬಹುನಿರೀಕ್ಷಿತ ಟಾಟಾ ಆಲ್ಟ್ರೊಜ್ iCNG ಕಾರಿನ ವಿಶೇಷತೆಗಳು...
- Technology
ಇನ್ಮುಂದೆ ಟ್ವಿಟ್ಟರ್ನಲ್ಲೂ ಹಣ ಗಳಿಸಬಹುದು; ಮಸ್ಕ್ರ ಹೊಸ ನಿರ್ಧಾರ ಏನು!?
- Education
KVS Recruitment 2022 : ಕೇಂದ್ರೀಯ ವಿದ್ಯಾಲಯ ಸಂಗತನ್ ದಲ್ಲಿ 13404 ಹುದ್ದೆಗಳ ನೇಮಕಾತಿ
- Travel
ಯಾವುದೇ ಚಿಂತೆ ಇಲ್ಲದೆ ಸುಖಕರ ಪ್ರಯಾಣ ಅನುಭವಿಸಲು ಇಲ್ಲಿದೆ ಸಲಹೆಗಳು
ಅವತಾರ್ 2 ಮೊದಲ ದಿನ ಭಾರತದ ಯಾವ ರಾಜ್ಯದಲ್ಲಿ ಹೆಚ್ಚು ಕಲೆಕ್ಷನ್ ಮಾಡಿದೆ?
ಜೇಮ್ಸ್ ಕ್ಯಾಮರೂನ್ ನಿರ್ದೇಶನದ ಬಹು ನಿರೀಕ್ಷಿತ ಚಿತ್ರ ಅವತಾರ್ ದ ವೇ ಆಫ್ ವಾಟರ್ ನಿನ್ನೆಯಷ್ಟೇ ( ಡಿಸೆಂಬರ್ 16 ) ವಿಶ್ವದಾದ್ಯಂತ ಭರ್ಜರಿಯಾಗಿ ಬಿಡುಗಡೆಗೊಂಡಿದೆ. ಹದಿಮೂರು ವರ್ಷಗಳ ನಂತರ ಬಂದ ಅವತಾರ್ ಚಿತ್ರದ ಸೀಕ್ವೆಲ್ ಕೂಡ ಭರ್ಜರಿ ಓಪನಿಂಗ್ ಪಡೆದುಕೊಂಡಿದೆ.
ಅವತಾರ್ ಮುಕ್ತಾಯದ ಬಳಿಕ ಪ್ಯಾಂಡೊರಾ ಜಗತ್ತು ಏನಾಗಿರಬಹುದು, ನಾವಿಗಳು ಮತ್ತೆ ತಮ್ಮ ಪ್ಯಾಂಡೊರಾ ಕಾಡನ್ನು ಕಟ್ಟಿಕೊಳ್ತಾರಾ, ಮತ್ತೆ ಮೊದಲಿನ ಹಾಗೆ ಜೀವನ ಸಾಗಿಸ್ತಾರಾ ಅಥವಾ ಮಾನವರು ಮತ್ತೆ ಪ್ಯಾಂಡೊರಾ ಮೇಲೆ ದಾಳಿ ಮಾಡ್ತಾರಾ ಹಾಗೂ ಜೇಕ್ ಸುಲಿ ಪ್ಯಾಂಡೊರಾವನ್ನು ಹೇಗೆ ರಕ್ಷಿಸುತ್ತಾನೆ, ಮುಂದೆ ಏನು ಮಾಡ್ತಾನೆ ಎಂಬೆಲ್ಲಾ ಪ್ರಶ್ನೆಗಳಿಗಳನ್ನು ತಲೆಯಲ್ಲಿ ಇಟ್ಟುಕೊಂಡು ಬಂದಿದ್ದ ಸಿನಿ ರಸಿಕರಿಗೆ ನಿರ್ದೇಶಕ ಜೇಮ್ಸ್ ಕ್ಯಾಮೆರೂನ್ ಉತ್ತರ ನೀಡುವುದರ ಜೊತೆಗೆ ಮೈನವಿರೇಳಿಸುವ ದೃಶ್ಯಗಳ ರಸದೌತಣ ಬಡಿಸಿದ್ದರು.
ತೆರೆಯ ಮೇಲೆ ಪ್ಯಾಂಡೊರಾದ ಕಾಡು ಹಾಗೂ ಸಮುದ್ರವನ್ನು ಕಂಡ ಸಿನಿ ರಸಿಕರು ತಾವೇ ಪ್ಯಾಂಡೊರಾಗೆ ಹೋದ ಅನುಭವ ಪಡೆದರು. ಚಿತ್ರ ವೀಕ್ಷಿಸಿದ ಬಳಿಕ ಚಿತ್ರತಂಡ ಇಷ್ಟು ವರ್ಷ ಸಮಯ ತೆಗೆದುಕೊಂಡದ್ದಕ್ಕೂ, ನಾವು ಇಷ್ಟು ವರ್ಷಗಳ ಕಾಲ ಕಾದಿದ್ದಕ್ಕೂ ಸಾರ್ಥಕವಾಯಿತು ಎಂದುಕೊಂಡು ಚಿತ್ರಮಂದಿರದಿಂದ ಆಚೆ ಬಂದರು. ಈ ಮಟ್ಟಕ್ಕೆ ಜನರ ಮನಸ್ಸನ್ನು ಗೆದ್ದ ಅವತಾರ್ ದ ವೇ ಆಫ್ ವಾಟರ್ ಬಿಡುಗಡೆಯ ದಿನ ಭರ್ಜರಿ ಕಲೆಕ್ಷನ್ ಮಾಡುವಲ್ಲಿಯೂ ಸಹ ಗೆದ್ದಿದೆ. ವಿಶ್ವದಾದ್ಯಂತ ಬಿಡುಗಡೆ ದಿನ ಸುಮಾರು 136ರಿಂದ 138 ಮಿಲಿಯನ್ ಡಾಲರ್ ಗಳಿಸಿರುವ ಅವತಾರ್ 2 ಚಿತ್ರ ಭಾರತ ಒಂದರಲ್ಲಿಯೇ 58 ಕೋಟಿ ಗ್ರಾಸ್ ಕಲೆಕ್ಷನ್ ಮಾಡಿದೆ. ಹೀಗೆ ಬೃಹತ್ ಕಲೆಕ್ಷನ್ ಮಾಡಿ ಭಾರತದ ನೆಲದಲ್ಲಿ ಅತಿಹೆಚ್ಚು ಕಲೆಕ್ಷನ್ ಮಾಡಿದ ಹಾಲಿವುಡ್‌ನ ಎರಡನೇ ಚಿತ್ರ ಎನಿಸಿಕೊಂಡ ಅವತಾರ್ ದ ವೇ ಆಫ್ ವಾಟರ್ ಮೊದಲ ದಿನ ಭಾರತದ ಯಾವ ರಾಜ್ಯದಲ್ಲಿ ಎಷ್ಟು ಕಲೆಕ್ಷನ್ ಮಾಡಿದೆ ಹಾಗೂ ಹಾಲಿವುಡ್ ಚಿತ್ರಗಳ ಪೈಕಿ ಯಾವ ರಾಜ್ಯಗಳಲ್ಲಿ ಯಾವ ಹಂತದಲ್ಲಿದೆ ಎಂಬ ಮಾಹಿತಿ ಈ ಕೆಳಕಂಡಂತಿದೆ..

ಯಾವ ರಾಜ್ಯದಲ್ಲಿ ಹೆಚ್ಚು ಕಲೆಕ್ಷನ್?
ಅವತಾರ್ ದ ವೇ ಆಫರ್ ಚಿತ್ರ ಭಾರತದಲ್ಲಿ ಇಂಗ್ಲಿಷ್ ಮಾತ್ರವಲ್ಲದೆ ಕನ್ನಡ, ತೆಲುಗು, ತಮಿಳು, ಮಲಯಾಳಂ ಹಾಗೂ ಹಿಂದಿ ಭಾಷೆಗಳಲ್ಲಿಯೂ ದೊಡ್ಡ ಮಟ್ಟದಲ್ಲಿ ಬಿಡುಗಡೆಯಾಗಿತ್ತು. ಹೀಗಾಗಿ ಅವತಾರ್ ದೇಶದಲ್ಲಿ ಒಳ್ಳೆಯ ಕಲೆಕ್ಷನ್ ಅನ್ನೇ ಮಾಡಿದ್ದು, ತೆಲಂಗಾಣ ಹಾಗೂ ಆಂಧ್ರ ಪ್ರದೇಶ ರಾಜ್ಯಗಳಲ್ಲಿ ಅತಿಹೆಚ್ಚು ಗಳಿಸಿದೆ. ಭಾರತದಲ್ಲಿ ಅವತಾರ್ 2 ಗಳಿಸಿದ ಹಣದಲ್ಲಿ ಶೇಕಡಾ 20%ಗೂ ಹೆಚ್ಚು ಕಲೆಕ್ಷನ್ ಈ ರಾಜ್ಯಗಳಿಂದಲೇ ಬಂದಿದೆ. ಈ ರಾಜ್ಯಗಳಲ್ಲಿ ಅವತಾರ್ ದ ವೇ ಆಫ್ ವಾಟರ್ ಮೊದಲ ದಿನ 15.36 ಕೋಟಿ ಗ್ರಾಸ್ ಕಲೆಕ್ಷನ್ ಮಾಡಿದೆ. ಈ ಮೂಲಕ ತೆಲುಗು ಜನತೆ ಮತ್ತೊಮ್ಮೆ ತಮ್ಮ ಸಿನಿಮಾ ಪ್ರೇಮವನ್ನು ತೋರಿಸಿದ್ದಾರೆ. ಚಿತ್ರ ಈ ರಾಜ್ಯಗಳಲ್ಲಿ ಅತಿಹೆಚ್ಚು ಕಲೆಕ್ಷನ್ ಮಾಡಿದ ಹಾಲಿವುಡ್ ಸಿನಿಮಾ ಎನಿಸಿಕೊಂಡಿತು.

ಕರ್ನಾಟಕ ಹಾಗೂ ಉಳಿದೆಡೆ ಎಷ್ಟು?
ಅವತಾರ್
ದ
ವೇ
ಆಫ್
ವಾಟರ್
ದೇಶದ
ಯಾವ
ಭಾಗದಲ್ಲಿ
ಎಷ್ಟು
ಕಲೆಕ್ಷನ್
ಮಾಡಿದೆ
ಹಾಗೂ
ಅಲ್ಲಿ
ಯಾವ
ಸಾಧನೆಗಳನ್ನು
ಮಾಡಿದೆ
ಎಂಬ
ಮಾಹಿತಿ
ಈ
ಕೆಳಕಂಡಂತಿದೆ..
ಆಂಧ್ರ ಪ್ರದೇಶ ಹಾಗೂ ತೆಲಂಗಾಣ ರಾಜ್ಯ: 15.36 ಕೋಟಿ ಗ್ರಾಸ್ - ರಾಜ್ಯದಲ್ಲಿ ಅತಿಹೆಚ್ಚು ಕಲೆಕ್ಷನ್ ಮಾಡಿದ ಹಾಲಿವುಡ್ ಚಿತ್ರ ಎಂಬ ದಾಖಲೆ
ಕರ್ನಾಟಕ: 7.38 ಕೋಟಿ ಗ್ರಾಸ್ - ರಾಜ್ಯದಲ್ಲಿ ಅತಿಹೆಚ್ಚು ಕಲೆಕ್ಷನ್ ಮಾಡಿದ ಹಾಲಿವುಡ್‌ನ ಎರಡನೇ ಚಿತ್ರ ಎಂಬ ಸಾಧನೆ, ಮೊದಲ ಸ್ಥಾನದಲ್ಲಿ ಅವೆಂಜರ್ಸ್ ಎಂಡ್‌ಗೇಮ್ ಇದೆ.
ತಮಿಳುನಾಡಿನಲ್ಲಿ: 5.26 ಕೋಟಿ ಗ್ರಾಸ್ - ರಾಜ್ಯದಲ್ಲಿ ಅತಿಹೆಚ್ಚು ಗಳಿಸಿದ ಹಾಲಿವುಡ್‌ನ ಎರಡನೇ ಚಿತ್ರ ಎಂಬ ಸಾಧನೆ, ಮೊದಲ ಸ್ಥಾನದಲ್ಲಿ ಅವೆಂಜರ್ಸ್ ಎಂಡ್‌ಗೇಮ್ ಇದೆ
ಕೇರಳದಲ್ಲಿ: 3.41 ಕೋಟಿ ಗ್ರಾಸ್ - ರಾಜ್ಯದಲ್ಲಿ ಅತಿಹೆಚ್ಚು ಕಲೆಕ್ಷನ್ ಮಾಡಿದ ಹಾಲಿವುಡ್ ಚಿತ್ರ ಎಂಬ ದಾಖಲೆ
ದೇಶದ ಉಳಿದ ರಾಜ್ಯಗಳೆಲ್ಲಾ ಸೇರಿ - 26.70 ಕೋಟಿ ಗ್ರಾಸ್
ಒಟ್ಟಾರೆ ಭಾರತದಲ್ಲಿ 58.11 ಕೋಟಿ ಗ್ರಾಸ್ ಕಲೆಕ್ಷನ್

ಅವೆಂಜರ್ಸ್ ಎಂಡ್‌ಗೇಮ್ ದಾಖಲೆ ಮುರಿಯುವಲ್ಲಿ ವಿಫಲ
ಇನ್ನು ಭಾರತದಲ್ಲಿ ಅತಿಹೆಚ್ಚು ಕಲೆಕ್ಷನ್ ಮಾಡಿರುವ ಹಾಲಿವುಡ್ ಚಿತ್ರಗಳ ಪಟ್ಟಿಯಲ್ಲಿ 63 ಕೋಟಿ ಗಳಿಸಿ ಅಗ್ರಸ್ಥಾನದಲ್ಲಿರುವ ಅವೆಂಜರ್ಸ್ ದ ಎಂಡ್ ಗೇಮ್ ದಾಖಲೆಯನ್ನು ಮುರಿಯುವಲ್ಲಿ ಅವತಾರ್ ದ ವೇ ಆಫ್ ವಾಟರ್ ವಿಫಲವಾಗಿದ್ದು, 58.11 ಕೋಟಿ ಗ್ರಾಸ್ ಕಲೆಕ್ಷನ್ ಮಾಡುವ ಮೂಲಕ ಈ ಪಟ್ಟಿಯಲ್ಲಿ ಎರಡನೇ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿದೆ.