For Quick Alerts
  ALLOW NOTIFICATIONS  
  For Daily Alerts

  ಕಾನ್ ಫಿಲ್ಮ್ ಫೆಸ್ಟಿವಲ್‌ನಲ್ಲಿ ಬಟ್ಟೆ-ಬರೆ ಕಳೆದುಕೊಂಡು ಪೂಜಾ ಹೆಗ್ಡೆ ಕಕ್ಕಾಬಿಕ್ಕಿ!

  |

  ಸದ್ಯ ಕಾನ್ ಫಿಲ್ಮ್ ಫೆಸ್ಟಿವಲ್ ರಂಗೇರಿದೆ. ಈ ಚಿತ್ರೋತ್ಸವದಲ್ಲಿ ಭಾರತದ ಹಲವು ಸಿನಿಮಾ ತಾರೆಯರು ಮಿಂಚುತ್ತಿದ್ದಾರೆ. ಅದರಲ್ಲೂ ನಟಿ ಮಣಿಯರು ಭಿನ್ನ, ವಿಭಿನ್ನ ವಿನ್ಯಾಸದ ಉಡುಪುಗಳನ್ನು ತೊಟ್ಟು ಮಿಂಚುತ್ತಾ ಇದ್ದಾರೆ. ಇಲ್ಲಿ ಹೆಚ್ಚಾಗಿ ಗಮನ ಸೆಳೆಯುವುದೇ ನಟಿಯರ ಉಡುಪುಗಳು. ಪ್ರತೀ ಬಾರಿ ಯಾರು ಯಾವ ರೀತಿಯ ಭಿನ್ನ ಉಡುಪು ಧರಿಸಿದ್ದಾರೆ ಎನ್ನುವುದೇ ಪ್ರಮುಖ ವಿಚಾರಗಳಲ್ಲಿ ಒಂದಾಗಿರುತ್ತಾದೆ.

  ಇನ್ನು ಈ ಬಾರಿ ಹಲವು ಸಿನಿಮಾ ತಾರೆಯರು ಕಾನ್ ಚಿತ್ರೋತ್ಸವದಲ್ಲಿ ಭಾಗಿ ಆಗಿದ್ದಾರೆ. ನಟಿ ದೀಪಿಕಾ ಪಡುಕೋಣೆ, ಐಶ್ವರ್ಯ ರೈ, ಊರ್ವಶಿ ರೌಟೇಲಾ, ಪೂಜಾ ಹೆಗ್ಡೆ, ತಮನ್ನಾ ಸೇರಿದಂತೆ ಹಲವು ಕಲಾವಿದರು ಚಿತ್ರೋತ್ಸವದಲ್ಲಿ ಮಿಂಚುತ್ತಿದ್ದಾರೆ.

  ಕಾನ್ ಚಿತ್ರೋತ್ಸವ: ಆರಂಭ ಯಾವಾಗ? ನೋಡುವುದು ಎಲ್ಲಿ? ಭಾಗವಹಿಸುವವರು ಯಾರು? ಇಲ್ಲಿದೆ ಮಾಹಿತಿಕಾನ್ ಚಿತ್ರೋತ್ಸವ: ಆರಂಭ ಯಾವಾಗ? ನೋಡುವುದು ಎಲ್ಲಿ? ಭಾಗವಹಿಸುವವರು ಯಾರು? ಇಲ್ಲಿದೆ ಮಾಹಿತಿ

  ಈ ಎಲ್ಲಾ ನಟಿಯರ ವಸ್ತ್ರ ವಿನ್ಯಾಸ ಬಹಳ ವಿಭಿನ್ನವಾಗಿ ಇದೆ. ದಿನಕ್ಕೊಂದು ವಿಭಿನ್ನ ಉಡುಪಿನ ಮೂಲಕ ಈ ನಟಿಯರು ಸುದ್ದಿ ಆಗುತ್ತಾ ಇದ್ದಾರೆ. ಆದರೆ ನಟಿ ಪೂಜಾ ಹೆಗ್ಡೆ ಸಿಂಪಲ್ ಆಗಿ ಕಾಣಿಸಿಕೊಂಡಿದ್ದು ಕೂಡ ಚರ್ಚೆ ಆಗುತ್ತಿದೆ. ಇದಕ್ಕೆ ಕಾರಣ ಪೂಜಾ ಹೆಗ್ಡೆ ರೆಡ್ ಕಾರ್ಪೆಟ್ ನಲ್ಲಿ ಮೊದಲ ಬಾರಿಗೆ ಹೆಜ್ಜೆ ಹಾಕುವ ಮುನ್ನ ತಮ್ಮ ಎಲ್ಲಾ ಬಟ್ಟೆ, ಮೇಕಪ್ ಸಾಮಗ್ರಿಗಳನ್ನು ಕಳೆದುಕೊಂಡರಂತೆ.

  ನಟಿ ಪೂಜಾ ಹೆಗ್ಡೆ ಕನ್ ಚಿತ್ರೋತ್ಸವಕ್ಕಾಗಿ ಹಲವು ಭಿನ್ನ ಕಾಸ್ಟ್ಯೂಂಗಳನ್ನು ಆಯ್ಕೆ ಮಾಡಿಕೊಂಡಿದ್ದರು. ಆದರೆ ಅವಸರದಲ್ಲಿ ಬರುವಾಗ ಎಲ್ಲಾ ಕಾಸ್ಟ್ಯೂಂ ಜೊತೆಗೆ ತಮ್ಮ ಮೇಕಪ್ ಮತ್ತು ಹೇರ್ ಕಿಟ್ ಕಳೆದುಕೊಂಡರಂತೆ. ಆದರೆ ರೆಡ್ ಕಾರ್ಪೆಟ್‌ಗೆ ಹೋಗಲೇ ಬೇಕಾಗಿರುವುದರಿಂದ ಅವರಸದಲ್ಲಿ ಹೊಸ ಕಾಸ್ಟ್ಯೂಂ, ಮೇಕಪ್ ಎಲ್ಲವನ್ನೂ ಖರೀದಿಸಿದರಂತೆ. ಈ ವಿಚಾರವನ್ನು ಖಾಸಗಿ ಪತ್ರಿಕೆಯ ಜೊತೆಗೆ ಪೂಜಾ ಹೆಗ್ಡೆ ಹಂಚಿಕೊಂಡಿದ್ದಾರೆ.

  ಕಾನ್‌ ಚಿತ್ರೋತ್ಸವದಲ್ಲಿ ಮಿಂಚಿದ ಭಾರತೀಯರುಕಾನ್‌ ಚಿತ್ರೋತ್ಸವದಲ್ಲಿ ಮಿಂಚಿದ ಭಾರತೀಯರು

  ಇನ್ನು ಪೂಜಾ ಹೆಗ್ಡೆಗೆ ಹೊಸದಾಗಿ ಎಲ್ಲವನ್ನು ವ್ಯವಸ್ಥೆ ಮಾಡಿಕೊಡುವ ತನಕ, ಆಕೆಯ ಟೀಂ ಊಟ ಕೂಡ ಮಾಡಿರಲಿಲ್ಲವಂತೆ. ನಟಿ ಪೂಜಾ ಹೆಗ್ಡೆ ಮೊದಲ ದಿನದ ರೆಡ್ ಕಾರ್ಪೆಟ್ ಎಂಟ್ರಿ ದಿನ ತಿಂಡಿ, ಊಟ ಏನು ಮಾಡಿರಲಿಲ್ಲವಂತೆ. ಅಂದು ಪೂಜಾ ಹೆಗ್ಡೆ ಊಟ ಮಾಡಿದ್ದೇ ರಾತ್ರಿ ಅಂತೆ. ಈ ವಿಚಾರವನ್ನು ಪೂಜಾ ಹೆಗ್ಡೆ ಹಂಚಿಕೊಂಡಿದ್ದಾರೆ.

  Cannes Film Festival 2022: Pooja Hegde lost all her outfits, makeup before red carpet debut

  ನಟಿ ಪೂಜಾ ಹೆಗ್ಡೆ ಮೊದಲ ದಿನ ಗೌನ್ ತೊಟ್ಟು ಮಿಂಚಿದ್ದರು. ದೊಡ್ಡ ಫೆದರ್ ಗೌನ್ ತೊಟ್ಟು ಕ್ಯಾಮೆರಾಗೆ ಪೋಸ್ ಕೊಟ್ಟರು. ಸಿಂಪಲ್ ಮತ್ತು ಎಲಿಗೆಂಟ್ ಅಗಿ ಕಾಣಿಸಿಕೊಂಡರು. ಇನ್ನು ಎರಡನೇ ದಿನವೂ ಸ್ಟೈಲಿಶ್ ಲುಕ್‌ನಲ್ಲಿ ಮಿಂಚಿದ್ದಾರೆ. ಬಿಳಿ ಬಣ್ಣದ ಫ್ಲೋಲರ್ ಡ್ರೆಸ್‌ನಲ್ಲಿ ಪೂಜಾ ಕಾಣಿಸಿಕೊಂಡಿದ್ದಾರೆ.

  English summary
  Cannes Film Festival 2022: Pooja Hegde lost all her outfits, makeup before red carpet debut.
  Saturday, May 21, 2022, 12:32
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X