»   » ರೊಮೆಡಿ ನೌನಲ್ಲಿ ಸ್ವಾದಿಷ್ಟ ಹಾಸ್ಯಮಯ 'ಚೆಫ್' ಆಸ್ವಾದಿಸಿ

ರೊಮೆಡಿ ನೌನಲ್ಲಿ ಸ್ವಾದಿಷ್ಟ ಹಾಸ್ಯಮಯ 'ಚೆಫ್' ಆಸ್ವಾದಿಸಿ

Posted By:
Subscribe to Filmibeat Kannada

2014ರ ಜನಪ್ರಿಯ ಚಿತ್ರಗಳಲ್ಲಿ ಒಂದಾಗಿರುವ, ಬಹು ಪಾತ್ರ ವರ್ಗದ ಕಾಮಿಡಿ ಡ್ರಾಮಾ ಚಿತ್ರ 'ಚೆಫ್', ಭಾರತೀಯ ಟಿ.ವಿ.ಯಲ್ಲಿ ಭಾನುವಾರ, 26ನೇ ಜುಲೈ 2015ರಂದು ರೊಮೆಡಿ ನೌ ವಾಹಿನಿಯಲ್ಲಿ ಪ್ರದರ್ಶನವಾಗಲಿದೆ.

ರಾಬರ್ಟ್ ಡೌನಿ ಜೂನಿಯರ್, ಕೊಲಂಬಿಯಾದ ನಟಿ ಸೋಫಿಯಾ ವರ್ಗೆರಾ, ಸ್ಕ್ರಾರ್ಲೆರ್ಟ್ ಜಾನ್ಸನ್, ಪ್ರತಿಭಾವಂತ ಜಾನ್ ಫೆವ್ರೆರೋ, ಬಾಲ ನಟಿ ಎಮ್‍ಜಾಯ್ ಅಂತೋನಿ, ಆಸ್ಕರ್ ಪ್ರಶಸ್ತಿ ವಿಜೇತ ಡಸ್ಟಿನ್ ಹಾಫ್‍ಮನ್ ನಟಿಸಿರುವ ಚಿತ್ರ ಹಾಸ್ಯಮಯವಾಗಿದ್ದು, ಇಡೀ ಕುಟುಂಬಕ್ಕೆ ಮನರಂಜನೆ ನೀಡಲಿದೆ.

ಚೆಫ್ ಚಿತ್ರದಲ್ಲಿ ವೃತ್ತಿಪರ ಚೆಫ್ ಆಗಿ ಫೆವ್ರೆರೊ ನಟಿಸಿದ್ದು, ಸಾರ್ವಜನಿಕವಾಗಿ ಆಡುಗೆ ಕುರಿತು ಟೀಕೆ ವ್ಯಕ್ತವಾದಾಗ ಕೆಲಸವನ್ನು ಬಿಟ್ಟು ತನ್ನೂರು ಮಿಯಾಮಿಗೆ ಮರಳುತ್ತಾನೆ. ಮತ್ತೆ ತನ್ನ ಮಾಜಿ ಪತ್ನಿ ಜೊತೆಗೆ ಸೇರಲಿದ್ದು, ಮಗನನ್ನು ಸೇರಲು ಕೋರುತ್ತಾನೆ. ಟ್ರಕ್ ನಲ್ಲಿ ಎ ಲ್‍ಎ ಗೆ ಪ್ರಯಾಣಿಸಲಿದ್ದು, ವಿವಿಧ ನಗರಗಳಲ್ಲಿ ಕ್ಯುಬಾನೋಸ್ ಮಾರಾಟ ಮಾಡಲು ಒತ್ತು ನೀಡುತ್ತಾರೆ.

Chef

ಖುಷಿ ಕೊಡುವ ಈ ಚಿತ್ರವು ಅನೇಕ ಅಡುಗೆ ಶೈಲಿಯನ್ನು ಪರಿಚಯಿಸಲಿದೆ. ವಾಸ್ತವವಾಗಿ ಜಾನ್ ಫೆವ್ರೆರೋ ಚಿತ್ರದ ಬಗೆಗೆ ಆಸಕ್ತಿಯನ್ನು ಪ್ರದರ್ಶಿಸಲಿದ್ದು, ಫುಡ್ ಟ್ರಕ್ ಚೆಫ್‍ರಾಯ್ ಜಾಯ್ ಜೊತೆಗೆ ತರಬೇತಿ ಪಡೆದು ಚಿತ್ರದಲ್ಲಿ ಜಾನ್ ಫೆವ್ರೆರೋ ಅವರು ತಮ್ಮದೇ ಆದ ಅಡುಗೆ ಸಿದ್ಧಪಡಿಸಲಿದ್ದಾರೆ.ಇದಕ್ಕಾಗಿ ಫ್ರೆಂಚ್ ಕಲಿನರಿ ಸ್ಕೂಲ್ ಗೆ ತೆರಳಿದ್ದು, ಅಲ್ಲಿ ಅಡುಗೆ ಪರಿಕರ ಬಳಸುವ ಕುರಿತು ತರಬೇತಿ ಪಡೆಯುತ್ತಾರೆ.

ನಟನೆ, ಚಿತ್ರಕತೆಗಾಗಿ ಚೆಫ್‍ಚಿತ್ರಕ್ಕಾಗಿ ಅತ್ಯುತ್ತಮ ವಿಮರ್ಶೆಗಳು ವ್ಯಕ್ತವಾದವು.ಫ್ಲೇವರೆಬಲ್, ಫೀಲ್ ಗುಡ್ ಕಾಮಿಡಿ ಎಂದು ವಿಮರ್ಶಕರ ಮೆಚ್ಚುಗೆಗೆ ಪಾತ್ರವಾಗಿತ್ತು.

ಇಂಡಿಯಾ ಟಿ.ವಿ. ಪ್ರೀಮಿಯರ್ ಅನ್ನು ಪೆಪ್ಪರ್ ಫ್ರೈ ಡಾಟ್ ಕಾಂ ಮತ್ತು ಗಾನಾ ಡಾಟ್ ಕಾಂ ಜಂಟಿಯಾಗಿ ಪ್ರಸ್ತುತ ಪಡಿಸುತ್ತಿದೆ.
ಜಾನ್ ಫೆವ್ರೆರೋ, ರಾಬರ್ಟ್ ಡೌನಿ ಜೂನಿಯರ್, ಸ್ಕಾರ್ಲೆರ್ಟ್ ಜಾನ್ಸನ್ ಒಟ್ಟಿಗೆ ನಟಿಸುತ್ತಿರುವುದು ಇದು ಎರಡನೇ ಬಾರಿ. ಚೆಫ್ ಚಿತ್ರದ ಟ್ರೈಲರ್ ನೋಡಿ:

ಚೆಫ್ ಪೂರ್ಣ ಪ್ರಮಾಣದಲ್ಲಿ ರೊಮೆಡಿ ನೌನ ಧ್ಯೇಯವಾದ ಪ್ರೀತಿ ಮತ್ತು ಮನರಂಜನೆ ಜೊತೆಗೆ ಸಮೀಕರಿಸಲಿದ್ದು, ಹಾಸ್ಯ ಮತ್ತು ಮನರಂಜನೆ ಇರುವಂತೆ ಅತ್ಯುತ್ತಮವಾಗಿ ಸಮೀಕರಿಸಲಾಗಿದೆ.

ಚೆಫ್ ಚಿತ್ರದ ಪ್ರಚಾರಕ್ಕಾಗಿ ರೊಮೆಡಿ ನೌ ಜೊತೆಗೆ ಲಲಿತ್ ಫುಡ್ ಪ್ರಾಡೆಕ್ಟ್, ಕೆಫೆಕಾಫಿಡೇ, ಚೆಫ್‍ ಇನ್‍ಸ್ಪೈಡರ್ ಮೀಲ್ಸೋ ಜೊತೆಗೆ ಒಪ್ಪಂದ ಮಾಡಿಕೊಂಡಿದೆ. ಪ್ರಚಾರಕ್ಕಾಗಿ ನಡೆಸಲಾಗುವ ಸ್ಪರ್ಧೆಗಳ ವಿಜೇತರಿಗೆ ಪಂಚತಾರಾ ಹೋಟೇಲ್ ಗಳಲ್ಲಿ ಭೋಜನ ಕಾದಿರುತ್ತದೆ.

English summary
One of the most popular films of 2014, the multi-starrer feel-good comedy-drama Chef, will premiere first time on Romedy NOW on Sunday, the 26th of July 2015.
Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada