Just In
Don't Miss!
- Automobiles
ಮೊದಲ ವರ್ಷದ ಸಂಭ್ರಮ- ಟಾಟಾ ನೆಕ್ಸಾನ್ ಇವಿ ಖರೀದಿ ಮೇಲೆ ಹೊಸ ಆಫರ್
- News
ಕೆಂಪೇಗೌಡ ಪಾರಂಪರಿಕ ತಾಣಗಳ ಅಭಿವೃದ್ಧಿ ಪ್ರಾಧಿಕಾರಕ್ಕೆ ಸದಸ್ಯರ ನೇಮಕ
- Sports
ಐಪಿಎಲ್ 2021: ಫೆಬ್ರವರಿ 18ಕ್ಕೆ ಐಪಿಎಲ್-14 ಆಟಗಾರರ ಹರಾಜು
- Education
UPSC IES/ISS Exam Result 2020: ಐಇಎಸ್ ಮತ್ತು ಐಎಸ್ಎಸ್ ಪರೀಕ್ಷೆಯ ಫಲಿತಾಂಶ ರಿಲೀಸ್
- Finance
Gold, Silver Rate: ಪ್ರಮುಖ ನಗರಗಳಲ್ಲಿ ಜ. 22ರ ಚಿನ್ನ, ಬೆಳ್ಳಿ ದರ
- Lifestyle
ಶೇವಿಂಗ್ ಟಿಪ್ಸ್: ಹೀಗೆ ಮಾಡಿದರೆ ತ್ವಚೆ ಮೃದುವಾಗಿರುತ್ತೆ, ತುರಿಕೆ ಇರಲ್ಲ
- Technology
ಒನ್ಪ್ಲಸ್ ನಾರ್ಡ್ ಜುಲೈ 15 ರಿಂದ ಅಮೆಜಾನ್ ತಾಣದಲ್ಲಿ ಪ್ರಿ-ಆರ್ಡರ್ಗೆ ಲಭ್ಯವಿದೆ; ಖರೀದಿಸುವಲ್ಲಿ ಮೊದಲಿಗರಾಗಿರಿ!
- Travel
ಭಾರತದಲ್ಲಿ ಜೂನ್ 1 ರಿಂದ ಚಲಿಸಲಿರುವ ರೈಲುಗಳ ಸಂಪೂರ್ಣ ಪಟ್ಟಿ
'ಅವೇಂಜರ್ಸ್' ನಾಯಕನ ಜೊತೆ ತೆರೆ ಹಂಚಿಕೊಳ್ಳಲಿದ್ದಾರೆ ದಕ್ಷಿಣದ ಸ್ಟಾರ್ ನಟ!
ದಕ್ಷಿಣ ಭಾರತದ ನಟ-ನಟಿಯರು ಹಾಲಿವುಡ್ ಸಿನಿಮಾಗಳಲ್ಲಿ ಅವಕಾಶ ಗಿಟ್ಟಿಸಿಕೊಳ್ಳುವುದು ಕಡಿಮೆ. ದೊಡ್ಡ ಪಿಆರ್ ಬಲ ಹೊಂದಿರುವ ಬಾಲಿವುಡ್ಡಿಗರಷ್ಟು ಸುಲಭವಾಗಿ ದಕ್ಷಿಣ ಭಾರತದ ನಟ-ನಟಿಯರಿಗೆ ಈ ಅವಕಾಶ ಸಿಗುವುದಿಲ್ಲ.
ಆದರೆ ಈಗ ದಕ್ಷಿಣ ಭಾರತದ ಸ್ಟಾರ್ ನಟರೊಬ್ಬರು ಬಹು ದೊಡ್ಡದಾಗಿ ಹಾಲಿವುಡ್‌ಗೆ ಪಾದಾರ್ಪಣೆ ಮಾಡುತ್ತಿದ್ದಾರೆ. ಅದೂ ಬಾಲಿವುಡ್‌ನ ನಟರುಗಳೇ ಮೂಗ ಮೇಲೆ ಬೆರಳಿಟ್ಟುಕೊಳ್ಳುವಂಥಹಾ ದೊಡ್ಡ ಆಫರ್ ಅನ್ನು ದಕ್ಷಿಣದ ಖ್ಯಾತ ನಟ ಒಪ್ಪಿಕೊಂಡಿದ್ದಾರೆ.
ದಾಖಲೆ ಪುಟ ಸೇರಿದ 'ರೌಡಿ ಬೇಬಿ': ದಕ್ಷಿಣ ಭಾರತದಲ್ಲೇ ಮೊದಲ ಹಾಡು!
ಹೌದು, ತಮಿಳಿನ ಸೂಪರ್ ಸ್ಟಾರ್ ನಟ ಧನುಷ್ ಹಾಲಿವುಡ್‌ಗೆ ಪಯಣ ಬೆಳೆಸಿದ್ದಾರೆ. ಅದೂ ಸಾಮಾನ್ಯವಾದ ಪ್ರಾಜೆಕ್ಟ್‌ಗಾಗಿ ಅಲ್ಲ, ಅವೇಂಜರ್ಸ್ ಅಂಥಹಾ ವಿಶ್ವವಿಖ್ಯಾತ ಸಿನಿಮಾ ನಿರ್ದೇಶಿಸಿದ ಖ್ಯಾತ ನಿರ್ದೇಶಕರುಗಳ ಸಿನಿಮಾದಲ್ಲಿ ಧನುಷ್‌ಗೆ ಪ್ರಮುಖ ಪಾತ್ರ ದೊರೆತಿದೆ.

ಅವೇಂಜರ್ಸ್, ಕ್ಯಾಪ್ಟನ್ ಅಮೆರಿಕಾ ಖ್ಯಾತಿಯ ನಿರ್ದೇಶಕರು
'ಅವೇಂಜರ್ಸ್;ಎಂಡ್ ಗೇಮ್', 'ಅವೇಂಜರ್ಸ್; ಇನ್‌ಫಿನಿಟಿ ವಾರ್', ಕ್ಯಾಪ್ಟನ್ ಅಮೆರಿಕಾ; ಸಿವಿಲ್ ವಾರ್, ಕ್ಯಾಪ್ಟನ್ ಅಮೆರಿಕಾ; ವಿಂಟರ್ ಸೋಲ್ಜರ್, 'ಎಕ್ಸ್‌ಟ್ರಾಕ್ಷನ್' ಸಿನಿಮಾಗಳನ್ನು ನಿರ್ದೇಶಿಸಿರುವ ಅಂಟೋನಿ ರೊಸ್ಸೊ ಹಾಗೂ ಜೋ ರೊಸ್ಸೊ ನಿರ್ದೇಶಿಸುತ್ತಿರುವ ಹೊಸ ಥ್ರಿಲ್ಲರ್ ಸಿನಿಮಾ 'ದಿ ಗ್ರೇ ಮ್ಯಾನ್' ಸಿನಿಮಾದಲ್ಲಿ ನಟ ಧನುಷ್ ನಟಿಸಲಿದ್ದಾರೆ.

ಕ್ಯಾಪ್ಟನ್ ಅಮೆರಿಕಾ ನಾಯಕ
'ದಿ ಗ್ರೇ ಮ್ಯಾನ್' ಸಿನಿಮಾದಲ್ಲಿ, ಕ್ಯಾಪ್ಟನ್ ಅಮೆರಿಕಾ ಖ್ಯಾತಿಯ ಸೂಪರ್ ಹೀರೊ ನಟ ಕ್ರಿಸ್ ಇವಾನ್ಸ್ ಹಾಗೂ 'ಲಾಲಾ ಲ್ಯಾಂಡ್', ದಿ ಬಿಗ್ ಶಾರ್ಟ್ ಸಿನಿಮಾಗಳಲ್ಲಿ ನಟಿಸಿರುವ ರ್ಯಾನ್ ಗೋಸ್ಲಿಂಗ್ ಅವರುಗಳು ಇರಲಿದ್ದಾರೆ. ಈ ಇಬ್ಬರು ಸ್ಟಾರ್ ನಟರೊಂದಿಗೆ ತೆರೆ ಹಂಚಿಕೊಳ್ಳಲಿದ್ದಾರೆ ನಟ ಧನುಷ್.
ಸೂಪರ್ ಸ್ಟಾರ್ ರಜನಿಕಾಂತ್ ಬಯೋಪಿಕ್ ನಲ್ಲಿ ತಮಿಳು ಸ್ಟಾರ್ ನಟ

ಕಾದಂಬರಿ ಆಧರಿಸಿದ ಸಿನಿಮಾ
'ದಿ ಗ್ರೇ ಮ್ಯಾನ್' ಸಿನಿಮಾ ಅದೇ ಹೆಸರಿನ ಕಾದಂಬರಿ ಆಧರಿಸಿದ್ದಾಗಿದೆ. ಮಾರ್ಕ್ ಗ್ರೀನೆ ಬರೆದಿರುವ ಈ ಕಾದಂಬರಿಯನ್ನು ಸಿನಿಮಾ ಮಾಡಲಿದ್ದಾರೆ ರೊಸ್ಸೊ ಸಹೋದರರು. ಸಿನಿಮಾಕ್ಕೆ ನೆಟ್‌ಫ್ಲಿಕ್ಸ್ ಬಂಡವಾಳ ಹೂಡುತ್ತಿದ್ದು, ನೆಟ್‌ಫ್ಲಿಕ್ಸ್‌ನಲ್ಲಿಯೇ ಬಿಡುಗಡೆ ಕಾಣಲಿದೆ.

ಧನುಷ್ ಹೊರತಾಗಿ ಇನ್ನೂ ಕೆಲವು ನಟರು
ಧನುಷ್, ಕ್ರಿಸ್ ಇವಾನ್ಸ್, ರ್ಯಾನ್ ಗೋಸ್ಲಿಂಗ್ ಅವರುಗಳನ್ನು ಹೊರತುಪಡಿಸಿ ವಿಶ್ವದ ಇನ್ನೂ ಕೆಲವು ಖ್ಯಾತ ನಟ-ನಟಿಯರು ಸಿನಿಮಾದಲ್ಲಿರಲಿದ್ದಾರೆ. ಕ್ಯೂಬಾದ ಆನಾ ಡಿ ಅರ್ಮಾಸ್, ಜೆಸ್ಸಿಕಾ ಹೆನ್‌ವಿಕ್, ವಾಗ್ನರ್ ಮೌರಾ, ಜೂಲಿಯಾ ಬಟರ್ಸ್ ಅವರುಗಳು ಸಿನಿಮಾದಲ್ಲಿ ನಟಿಸಲಿದ್ದಾರೆ. ಚಿತ್ರೀಕರಣ ಶೀಘ್ರದಲ್ಲಿಯೇ ಪ್ರಾರಂಭವಾಗಲಿದೆ.
'ರೌಡಿ ಬೇಬಿ' ಹಾಡಿನ ಬಿಲಿಯನ್ ವೀಕ್ಷಣೆ ಸಂಭ್ರಮಕ್ಕೆ ಸಾಯಿ ಪಲ್ಲವಿ ಅಭಿಮಾನಿಗಳ ಆಕ್ರೋಶ