For Quick Alerts
  ALLOW NOTIFICATIONS  
  For Daily Alerts

  ಜಾನಿ ಡೆಪ್ ಬೆಂಬಲಕ್ಕೆ ಮಾಜಿ ಪ್ರೇಯಸಿಯರು, ಅಂಬರ್‌ಗೆ ಭಾರಿ ಹಿನ್ನಡೆ

  |

  ಹಾಲಿವುಡ್‌ನ ಜನಪ್ರಿಯ ನಟ ಜಾನಿ ಡೆಪ್ ಹಾಗೂ ಆತನ ಮಾಜಿ ಪತ್ನಿ ಅಂಬರ್ ಹರ್ಡ್ ನಡುವಿನ ನ್ಯಾಯಾಲಯ ಪ್ರಕರಣ ವಿಶ್ವದ ಗಮನ ಸೆಳೆದಿದೆ.

  ಮಾಜಿ ಪತಿ ಜಾನಿ ಡೆಪ್ ವಿರುದ್ಧ ಲೈಂಗಿಕ ದೌರ್ಜನ್ಯ, ಕೊಲೆ ಬೆದರಿಕೆ, ಅವಹೇಳನ ಇನ್ನಿತರೆ ಗುರುತರ ಆರೋಪಗಳನ್ನು ನಟಿ ಅಂಬರ್ ಹರ್ಡ್ ಮಾಡಿದ್ದು, ಈ ಕುರಿತು ಹಲವು ದಿನಗಳಿಂದಲೂ ಸತತವಾಗಿ ವಿಚಾರಣೆ ಜಾರಿಯಲ್ಲಿದೆ.

  ವಿಚಾರಣೆಯ ವಿಡಿಯೋ ತುಣುಕುಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದು, ಜಾನಿ ಡೆಪ್ ಪರವಾಗಿ ಕೋಟ್ಯಂತರ ಮಂದಿ ನೆಟ್ಟಿಗರು ಬೆಂಬಲ ಸೂಚಿಸಿದ್ದಾರೆ. ಅಂಬರ್ ಹರ್ಡ್ ಸುಖಾ ಸುಮ್ಮನೆ ಆರೋಪ ಮಾಡುತ್ತಿದ್ದಾರೆ ಎಂದು ದೂರಿದ್ದಾರೆ.

  ಜಾನಿ ಡೆಪ್‌ ಸ್ವಭಾತಃ ಹಿಂಸಾತ್ಮಕ ಪ್ರವೃತ್ತಿ ಉಳ್ಳವ ಎಂದು ಅಂಬರ್ ಹರ್ಡ್ ಹಾಗೂ ಆಕೆಯ ಪರ ವಕೀಲರು ನ್ಯಾಯಾಲಯದಲ್ಲಿ ಹೇಳಿದ ಬಳಿಕ ಇದೀಗ ಜಾನಿ ಡೆಪ್‌ನ ಮಾಜಿ ಪ್ರೇಯಸಿಯರು ರಂಗಕ್ಕೆ ಇಳಿದಿದ್ದು, ಜಾನಿ ಡೆಪ್ ಪರವಾಗಿ ಟ್ವೀಟ್‌ಗಳನ್ನು ಮಾಡಿದ್ದಾರೆ.

  ಜಾನಿ ಡೆಪ್ ಮಾಜಿ ಪ್ರೇಯಸಿ ಡಿಡಿ ಗ್ರುನೆವಾಲ್ಡಾ, ಜಾನಿ ಡೆಪ್ ಪರವಾಗಿ ಟ್ವೀಟ್ ಮಾಡಿದ್ದು, ''ನಾನು 90 ರ ದಶಕದಲ್ಲಿ ಜಾನಿ ಡೆಪ್‌ ಜೊತೆ ಡೇಟಿಂಗ್ ನಡೆಸಿದ್ದೆ ಎಂಬ ಬಗ್ಗೆ ಪತ್ರಿಕೆಗಳಲ್ಲಿ ಲೇಖನ ಪ್ರಟಕವಾಗಿರುವ ಕಾರಣ ಈ ಮಾತುಗಳನ್ನು ಹೇಳುತ್ತಿದ್ದೇನೆ. ನಾನು, ಜಾನಿ ಡೆಪ್‌ ಜೊತೆಗೆ ಕೆಲವು ಸಂತೋಶದ ಕ್ಷಣಗಳನ್ನು ಕಳೆದಿದ್ದೇನೆ. ಹಲವು ಕಡೆ ನಾವು ಸುತ್ತಾಡಿದ್ದೇವೆ. ಹಲವು ಹಗಲು-ರಾತ್ರಿಗಳನ್ನು ಕಳೆದಿದ್ದೇವೆ. ಆತ ಅದ್ಭುತ ಮನುಷ್ಯ. ನನ್ನೊಂದಿಗೆ ಬಹಳ ಕರುಣೆಯಿಂದಲೇ ವ್ಯವಹರಿಸಿದ್ದರು'' ಎಂದಿದ್ದಾರೆ.

  ಜಾನಿ ಡೆಪ್‌ರ ಮತ್ತೊಬ್ಬ ಮಾಜಿ ಪ್ರೇಯಸಿ ಜೆನಿಫರ್ ಗ್ರೇ ಸಹ ಜಾನಿ ಡೆಪ್‌ಗೆ ಪರೋಕ್ಷವಾಗಿ ಬೆಂಬಲ ಸೂಚಿಸಿದ್ದಾರೆ. ಜಾನಿ ಡೆಪ್ ಕೆಟ್ಟ ವ್ಯಕ್ತಿ ಅಲ್ಲ ಎಂದು ಹೇಳಿದ್ದಾರೆ.

  ಜಾನಿ ಡೆಪ್‌ರ ಮಾಜಿ ಪತ್ನಿ ಅಂಬರ್ ಹರ್ಡ್, ವಾಷಿಂಗ್ಟನ್ ಪೋಸ್ಟ್‌ನಲ್ಲಿ ತಾವು ಕೌಟುಂಬಿಕ ಹಿಂಸೆಗೆ ಒಳಗಾಗಿರುವ ಬಗ್ಗೆ ಬರೆದಿದ್ದರು. ಅದಕ್ಕೆ ಕಾರಣ ಜಾನಿ ಡೆಪ್ ಎಂದು ಪರೋಕ್ಷವಾಗಿ ಬರೆದಿದ್ದರು. ಈ ಲೇಖನದ ಆಧಾರವಾಗಿ ಜಾನಿ ಡೆಪ್, ಅಂಬರ್ ವಿರುದ್ಧ 390 ಕೋಟಿ ರುಪಾಯಿ ಮಾನನಷ್ಟ ಮೊಕದ್ದಮೆ ಹೂಡಿದರು. ಅದೇ ಪ್ರಕರಣದ ವಿಚಾರಣೆ ನ್ಯಾಯಾಲಯದಲ್ಲಿ ನಡೆಯುತ್ತಿದೆ.

  ಜಾನಿ ಡೆಪ್ ತಮ್ಮ ಮೇಲೆ ಹಲ್ಲೆ ನಡೆಸಿದ್ದಾರೆ. ಮದ್ಯದ ಬಾಟಲಿಯನ್ನು ನನ್ನ ಮರ್ಮಾಂಗದ ಒಳಕ್ಕೆ ತುರುಕಿದ್ದಾರೆ ಎಂದು ನ್ಯಾಯಾಲಯದಲ್ಲಿ ಆರೋಪ ಮಾಡಿದರು. ಮದುವೆಯಾದ ಕೆಲವೇ ದಿನಗಳಲ್ಲಿ ನನಗೆ ಕೊಲೆ ಬೆದರಿಕೆ ಹಾಕಿದರು ಎಂದು ಸಹ ಅಂಬರ್ ಆರೋಪ ಮಾಡಿದರು. ಇದರಿಂದಾಗಿ ಪ್ರಕರಣ ಇನ್ನಷ್ಟು ಜಟಿಲವಾಯ್ತು ಹಾಗೂ ವಿಶ್ವದ ಗಮನ ಸೆಳೆಯಿತು.

  ಇದೀಗ ಪ್ರಕರಣದ ವಿಚಾರಣೆ ಚಾಲ್ತಿಯಲ್ಲಿದ್ದು, ಅಂಬರ್ ಹರ್ಡ್ ನ್ಯಾಯಾಲಯದಲ್ಲಿ ತಮ್ಮ ಬದಿಯ ಹೇಳಿಕೆಗಳನ್ನು ನೀಡುತ್ತಿದ್ದಾರೆ.

  English summary
  Actor Jhonny Depp's ex lovers came in support of Jhonny in case against ex wife Ambar Heard. They say Jhonny is a good man.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X
  Desktop Bottom Promotion