For Quick Alerts
  ALLOW NOTIFICATIONS  
  For Daily Alerts

  ಕ್ರೇಗ್ ಜೇಬು ತುಂಬಿಸಿದ ಬಾಂಡ್ ಚಿತ್ರಗಳು

  By Mahesh
  |

  'ಕ್ಯಾಸಿನೋ ರಾಯಲ್, ಕ್ವಾಂಟಮ್ ಆಫ್ ಸೋಲಾಸ್ ಹಾಗೂ ಸ್ಕೈ ಫಾಲ್ ಚಿತ್ರದಲ್ಲಿ ಅದ್ಭುತ ಸಾಹಸ ದೃಶ್ಯಗಳಲ್ಲಿ ಕಾಣಿಸಿಕೊಂಡಿದ್ದ ನಟ ಡೇನಿಯಲ್ ಕ್ರೇಗ್ ಬಾಂಡ್ ಪಾತ್ರಕ್ಕೆ ಗುಡ್ ಬೈ ಹೇಳಿರಬಹುದು. ಆದರೆ, ಅವರಿಗೆ ಬಾಂಡ್ ಪಾತ್ರ ಅವರ ಜೇಬು ತುಂಬಿಸಿದ್ದಂತೂ ನಿಜ.

  ಈ ವರೆಗಿನ 23 ಬಾಂಡ್ ಚಿತ್ರಗಳಲ್ಲಿ ನಟಿಸಿದ ಬಾಂಡ್ ಗಳಿಗಿಂತ ಕ್ರೇಗ್ ಒಂದು ಕೈ ಮೇಲೆನಿಸಿದ್ದಾರೆ. ಈ ಹಿಂದಿನ ಚಿತ್ರಗಳಲ್ಲಿನ ಜೇಮ್ಸ್ ಬಾಂಡ್ ಗಳು ಪಡೆದ ಸಂಭಾವನೆಗಿಂತ ಹೆಚ್ಚು ಸಂಭಾವನೆ ಡೆನಿಯಲ್ ಕ್ರೇಗ್ ಗೆ ಸಂದಾಯವಾಗಿದೆ.

  ಸುಮಾರು 31 ಮಿಲಿಯನ್ ಪೌಂಡ್ ದುಡ್ಡು ಸಲೀಸಾಗಿ ಕ್ರೇಗ್ ಜೇಬಿಗಿಳಿದಿದೆ. ಹೀಗಾಗಿ ಅತ್ಯಂತ ಶ್ರೀಮಂತ ಸೂಪರ್ ಸ್ಪೈ ಎನ್ನಬಹುದು.

  44 ವರ್ಷದ ಕ್ರೇಗ್ ಇತ್ತೀಚಿನ ಸ್ಕೈ ಫಾಲ್ ನಂತರ ಇನ್ನೆರಡು ಮುಂದುವರೆದ ಭಾಗದಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎಂಬ ಸುದ್ದಿ ಇದೆ. 2014ರಲ್ಲಿ ಅದು ಕೊನೆಗೊಳ್ಳಲಿದ್ದು, ನಂತರ 2016ರಲ್ಲಿ ಇನ್ನೊಂದು ಚಿತ್ರ ತೆರೆ ಕಾಣಲಿದೆಯಂತೆ ಆ ನಂತರ ಬಾಂಡ್ ಚಿತ್ರಗಳಲ್ಲಿ ಕ್ರೇಗ್ ನಟಿಸುವುದಿಲ್ಲ ಎಂದು ಸನ್ ಪತ್ರಿಕೆ ವರದಿ ಮಾಡಿದೆ.

  2006ರಲ್ಲಿ ತೆರೆ ಕಂಡ ಕ್ಯಾಸಿನೋ ರಾಯಲ್ ಚಿತ್ರಕ್ಕೆ 1.9 ಮಿಲಿಯನ್ ಪೌಂಡ್ ಪಡೆದಿದ್ದ ಕ್ರೇಗ್ ನಂತರ 2008ರಲ್ಲಿ ಕ್ವಾಂಟಮ್ ಆಫ್ ಸೊಲಾಸ್ ಚಿತ್ರಕ್ಕೆ 4.4 ಮಿಲಿಯನ್ ಪೌಂಡ್ ಗಳಿಸಿದ್ದರು.

  ಹೀಗಾಗಿ ಡೇನಿಯಲ್ ಕ್ರೇಗ್ ಈಗ ಹಾಲಿವುಡ್ ನ 'ಎ ' ಲಿಸ್ಟ್ ನಟ ಪಟ್ಟಿಗೆ ಸೇರಿದ್ದಾರೆ. ಕಳೆದ ವರ್ಷ ಟಾಮ್ ಕ್ರೂಸ್ ಹಾಗೂ ಲಿಯಾನಾರ್ಡೊ ಡಿ'ಕಾಪ್ರಿಯೋ ಇಬ್ಬರು ಕ್ರಮವಾಗಿ 47 ಮಿಲಿಯನ್ ಪೌಂಡ್ ಹಾಗೂ 23.3 ಮಿಲಿಯನ್ ಪೌಂಡ್ ಗಳಿಸಿ ಅತ್ಯಧಿಕ ಸಂಭಾವನೆ ಪಡೆಯುವ ನಟರ ಪಟ್ಟಿಯಲ್ಲಿ ಅಗ್ರಸ್ಥಾನಕ್ಕೇರಿದ್ದರು.

  ಈ ಹಿಂದಿನ ಬಾಂಡ್ ನಟ ಪಿಯರ್ಸ್ ಬ್ರೊಸ್ನನ್ ಗೆ ಹೋಲಿಸಿದರೆ ಕ್ರೇಗ್ 'ಪೇ ಚೆಕ್' ಮೂರುಪಟ್ಟು ಅಧಿಕವಾಗಿದೆ. 2002ರ ಚಿತ್ರ ಡೈ ಅನದರ್ ಡೇ ನಲ್ಲಿನ ಅಭಿನಯಕ್ಕಾಗಿ ಬ್ರೊಸ್ನನ್ ಸುಮಾರು 10.4 ಮಿಲಿಯನ್ ಪೌಂಡ್ ಗಳಿಸಿದ್ದರು.

  ಉಳಿದಂತೆ ಬ್ರಿಟಿಷ್ ನಟರ ಪೈಕಿ ಸಾಚಾ ಬರೋನ್ ಕೊಹೆನ್ ಅವರು ಸಾಹಿತ್ಯ ಹಾಗೂ ಚಿತ್ರ ನಿರ್ಮಾಣಗಾರರಾಗಿ 18.9 ಮಿಲಿಯನ್ ಪೌಂಡ್ ಹಾಗೂ ಟ್ವಿಲೈಟ್ ತಾರೆ ರಾಬರ್ಟ್ ಪ್ಯಾಟಿಸನ್ 16.3 ಮಿಲಿಯನ್ ಪೌಂಡ್ ಗಳಿಸಿದ್ದರು.

  English summary
  Daniel Craig is said to have received 31 million pounds for two new James Bond movies and it makes him the highest-paid British actor, as well as the best paid 007 superspy.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X