ಡಿಂಪಲ್ ಕಪಾಡಿಯಾ, 'ಟೆನೆಟ್' ಸಿನಿಮಾದಲ್ಲಿ ಅವಕಾಶ ಗಿಟ್ಟಿಸಿಕೊಂಡಿದ್ದು ಹೇಗೆ?

ವಿಶ್ವದೆಲ್ಲೆಡೆ ಸದ್ಯಕ್ಕೆ ಚರ್ಚೆಯಲ್ಲಿರುವ ಸಿನಿಮಾ 'ಟೆನೆಟ್' . ಕ್ರಿಸ್ಟೊಫರ್ ನೊಲನ್ ನಿರ್ದೇಶನದ ಈ ಸಿನಿಮಾ ತಮ್ಮ ಅತಿ ಭಿನ್ನ ಕತೆ, ನಿರ್ಮಾಣ, ಬಳಸಲ್ಪಟ್ಟಿರುವ ತಂತ್ರಜ್ಞಾನ ಹಾಗೂ ಬಾಕ್ಸ್‌ ಆಫೀಸ್ ಕಲೆಕ್ಷನ್ ಇನ್ನೂ ಹಲವು ಕಾರಣಗಳಿಂದ ಚರ್ಚೆಯಲ್ಲಿದೆ.

ಈ ವಿಶ್ವವಿಖ್ಯಾತ ಸಿನಿಮಾದಲ್ಲಿ ಭಾರತದ ನಟಿ ಡಿಂಪಲ್ ಕಪಾಡಿಯಾ ಸಹ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ಡಿಂಪಲ್ ಕಪಾಡಿಯಾ ಪಾತ್ರಕ್ಕೆ ಭಾರಿ ಮೆಚ್ಚುಗೆ ಸಹ ವ್ಯಕ್ತವಾಗುತ್ತಿದೆ. ಆದರೆ ಡಿಂಪಲ್ ಕಪಾಡಿಯಾ, ಆ ಪಾತ್ರನನ್ನು ಗಳಿಸಿಕೊಂಡಿದ್ದು ಹೇಗೆ? ಎಂಬ ಬಗ್ಗೆಯೂ ಕೆಲವರಿಗೆ ಕುತೂಹಲ ಇದೆ.

ಸೂಪರ್ ಸ್ಟಾರ್ ರಾಜೇಶ್ ಖನ್ನಾ ಪತ್ನಿ, ಅಕ್ಷಯ್ ಕುಮಾರ್ ನ ಅತ್ತೆ ಆಗಿರುವ ಡಿಂಪಲ್ ಕಪಾಡಿಯಾ, ಹಲವಾರು ಬಾಲಿವುಡ್‌ ಸಿನಿಮಾಗಳಲ್ಲಿ ನಟಿಸಿದ್ದಾರೆ. ಆದರೆ 'ಟೆನೆಟ್' ಅವರ ಮೊದಲ ಹಾಲಿವುಡ್ ಸಿನಿಮಾ.

ಡಿಂಪಲ್‌ ಗೆ ಅವಕಾಶ ಕೊಡಿಸಿದ್ದು ಪೂರ್ವಿ

ಡಿಂಪಲ್‌ ಗೆ ಅವಕಾಶ ಕೊಡಿಸಿದ್ದು ಪೂರ್ವಿ

ಡಿಂಪಲ್ ಕಪಾಡಿಯಾ ಗೆ ಟೆನೆಟ್ ಸಿನಿಮಾದಲ್ಲಿ ಅವಕಾಶ ದೊರೆತಿದ್ದು, ಪೂರ್ವಿ ಲಾವಿಂಗಿಯಾ ಎಂಬ ಕಾಸ್ಟಿಂಗ್ ನಿರ್ದೇಶಕಿಯಿಂದಾಗಿ. ಪೂರ್ವಿ ಲಾವಿಂಗಿಯಾ, ಕ್ರಿಸ್ಟೋಫರ್ ನೋಲನ್‌ ನ ಇಂಟರ್‌ಸ್ಟೆಲ್ಲರ್ ಸಿನಿಮಾಕ್ಕೆ ಪಾತ್ರಧಾರಿಗಳನ್ನು ಆಯ್ಕೆ ಮಾಡಲು ಸಹಾಯ ಮಾಡಿದ್ದರಂತೆ. ಆಗಿನಿಂದಲೂ ಕ್ರಿಸ್ಟೋಫರ್ ತಂಡ, ಪೂರ್ವಿ ಜೊತೆಗೆ ಸಂಪರ್ಕದಲ್ಲಿದೆ.

ಪೂರ್ವಿಯನ್ನು ಸಂಪರ್ಕಿಸಿದ್ದ ನೋಲನ್ ತಂಡ

ಪೂರ್ವಿಯನ್ನು ಸಂಪರ್ಕಿಸಿದ್ದ ನೋಲನ್ ತಂಡ

ಟೆನೆಟ್, ಸಿನಿಮಾಕ್ಕೆ ಭಾರತೀಯ ನಟಿಯೊಬ್ಬರು ಬೇಕು ಎನಿಸಿದಾಗ ಪೂರ್ವಿ ಲಾವಿಂಗಿಯಾ ಅನ್ನು ನೋಲನ್ ತಂಡ ಸಂಪರ್ಕಿಸಿದೆ. ಪಾತ್ರ ಮಾಡುವವರಿಗೆ ಇರಬೇಕಾದ ಚಹರೆ, ಗುಣಗಳ ಪಟ್ಟಿಯನ್ನು ಕಳಿಸಿದ್ದ ನೋಲನ್ ತಂಡ, ಜೊತೆಗೆ ಕೆಲವು ಸಂಭಾಷಣೆಗಳು ದೃಶ್ಯಗಳನ್ನು ಕಳಿಸಿ, ಆಡಿಷನ್ ವಿಡಿಯೋ ಕಳಿಸುವಂತೆ ಕೇಳಿದೆ.

'ದಿಲ್ ಚಹ್ತಾ ಹೈ' ಸಿನಿಮಾ ದೃಶ್ಯಗಳನ್ನು ಕಳಿಸಿದ್ದ ಪೂರ್ವಿ

'ದಿಲ್ ಚಹ್ತಾ ಹೈ' ಸಿನಿಮಾ ದೃಶ್ಯಗಳನ್ನು ಕಳಿಸಿದ್ದ ಪೂರ್ವಿ

ಪೂರ್ವಿಗೆ ಮೊದಲು ನೆನಪಿಗೆ ಬಂದಿದ್ದು ಡಿಂಪಲ್ ಕಪಾಡಿಯಾ ಅಂತೆ, ಬೇರೆ ಕೆಲವು ನಟಿಯರನ್ನು ಸಂಪರ್ಕಿಸಿದರಾದರೂ, ಡಿಂಪಲ್ ಕಪಾಡಿಯಾ ಳೆ ಸ್ಮೃತಿಯಲ್ಲಿದ್ದರು ಎಂದಿದ್ದಾರೆ ಪೂರ್ವಿ. ಡಿಂಪಲ್ ಅವರ ಕೆಲವು ಚಿತ್ರಗಳು ಹಾಗೂ ಡಿಂಪಲ್ ನಟಿಸಿದ್ದ 'ದಿಲ್ ಚಹ್ತಾ ಹೈ' ಸಿನಿಮಾದ ಕೆಲವು ದೃಶ್ಯಗಳನ್ನು ನೋಲನ್‌ ಗೆ ಕಳಿಸಿದರು ಪೂರ್ವಿ. ಆ ನಂತರ ಆಡಿಷನ್ ವಿಡಿಯೋವನ್ನು ಸಹ ಕಳಿಸಿದರಂತೆ.

'ದಿಲ್ ಚಹ್ತಾ ಹೈ' ಸಿನಿಮಾ ದೃಶ್ಯಗಳನ್ನು ಕಳಿಸಿದ್ದ ಪೂರ್ವಿ

'ದಿಲ್ ಚಹ್ತಾ ಹೈ' ಸಿನಿಮಾ ದೃಶ್ಯಗಳನ್ನು ಕಳಿಸಿದ್ದ ಪೂರ್ವಿ

ಪೂರ್ವಿಗೆ ಮೊದಲು ನೆನಪಿಗೆ ಬಂದಿದ್ದು ಡಿಂಪಲ್ ಕಪಾಡಿಯಾ ಅಂತೆ, ಬೇರೆ ಕೆಲವು ನಟಿಯರನ್ನು ಸಂಪರ್ಕಿಸಿದರಾದರೂ, ಡಿಂಪಲ್ ಕಪಾಡಿಯಾ ಳೆ ಸ್ಮೃತಿಯಲ್ಲಿದ್ದರು ಎಂದಿದ್ದಾರೆ ಪೂರ್ವಿ. ಡಿಂಪಲ್ ಅವರ ಕೆಲವು ಚಿತ್ರಗಳು ಹಾಗೂ ಡಿಂಪಲ್ ನಟಿಸಿದ್ದ 'ದಿಲ್ ಚಹ್ತಾ ಹೈ' ಸಿನಿಮಾದ ಕೆಲವು ದೃಶ್ಯಗಳನ್ನು ನೋಲನ್‌ ಗೆ ಕಳಿಸಿದರು ಪೂರ್ವಿ. ಆ ನಂತರ ಆಡಿಷನ್ ವಿಡಿಯೋವನ್ನು ಸಹ ಕಳಿಸಿದರಂತೆ.

ನೇರವಾಗಿ ಭೇಟಿಯಾಗಿ ಆಡಿಷನ್ ನೋಡಿದ ನೋಲನ್

ನೇರವಾಗಿ ಭೇಟಿಯಾಗಿ ಆಡಿಷನ್ ನೋಡಿದ ನೋಲನ್

ನೋಲನ್ ಹಾಗೂ ನೋಲನ್‌ನ ಕಾಸ್ಟಿಂಗ್ ಡೈರೆಕ್ಟರ್ ಜಾನ್ ಇಬ್ಬರೂ ಒಮ್ಮೆ ಡಿಂಪಲ್ ಅನ್ನು ನೇರವಾಗಿ ಭೇಟಿಯಾಗಿ, ನೇರವಾಗಿ ಆಡಿಷನ್ ಮಾಡಿದ ಬಳಿಕವಷ್ಟೆ ಡಿಂಪಲ್ ಅನ್ನು ಪ್ರಿಯಾ ಪಾತ್ರಕ್ಕೆ ಫಿಕ್ಸ್ ಮಾಡಲಾಯಿತಂತೆ. ಆಡಿಷನ್ ವೇಳೆ ಸಹ, ಸಿನಿಮಾದ ಮೂಲ ಸ್ಕ್ರಿಪ್ಟ್ ನೀಡದೆ, ಡಮ್ಮಿ ಸಂಭಾಷಣೆ ನೀಡಿ ಆಡಿಷನ್ ಮಾಡಲಾಯಿಗಿದೆ, ಅಷ್ಟೋಂದು ಗುಟ್ಟನ್ನು ಚಿತ್ರಕತೆಯ ಬಗ್ಗೆ ಕಾಯ್ದುಕೊಂಡಿದ್ದರು ನೋಲನ್.

Recommended Video

Arjun Sarjaಗೆ ಇನ್ನೂ ಮರೆಯಾಗಿಲ್ಲ ಆ ನೋವು | Filmibeat Kannada
ಹಾಲಿವುಡ್‌ನಲ್ಲಿ ಕೆಲಸ ಮಾಡುತ್ತಿದ್ದ ಪೂರ್ವಿ

ಹಾಲಿವುಡ್‌ನಲ್ಲಿ ಕೆಲಸ ಮಾಡುತ್ತಿದ್ದ ಪೂರ್ವಿ

ಇನ್ನು ಪೂರ್ವಿ, ಹಲವು ವರ್ಷಗಳಿಂದ ಹಾಲಿವುಡ್ ನ ಖ್ಯಾತ ನಿರ್ಮಾಣ ಸಂಸ್ಥೆಗಳಿಗೆ ಕಾಸ್ಟಿಂಗ್ ನಿರ್ದೇಶಕಿ ಆಗಿ ಕೆಲಸ ಮಾಡುತ್ತಿದ್ದಾರೆ. 2010 ರಿಂದ ಮುಂಬೈ ಗೆ ವಾಸ್ತವ್ಯ ಬದಲಾಯಿಸಿಕೊಂಡಿರುವ ಪೂರ್ವಿ. ಬಾಲಿವುಡ್‌ನ ಕೆಲವರಿಗೆ ಹಾಲಿವುಡ್‌ನಲ್ಲಿ ಅವಕಾಶ ಕೊಡಿಸಿದ್ದಾರೆ.

More from Filmibeat

English summary
How bollywood actress Dimple Kapadiya get chance to act in Tenet movie. Here is the story.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X