For Quick Alerts
  ALLOW NOTIFICATIONS  
  For Daily Alerts

  ಗರ್ಭಿಣಿ ಆಗೋದು ಅಂದ್ರೆ ಈ ನಟಿಗೆ ಭಾರಿ ಇಷ್ಟವಂತೆ

  By Sonu
  |

  ಸಾಮಾನ್ಯವಾಗಿ ಚಿತ್ರರಂಗದ ಕೆಲವು ಸ್ಟಾರ್ ನಟಿಯರಿಗೆ ಮದುವೆಯಾದ ನಂತರ ತಾಯಿಯಾಗೋದು ಅಂದರೆ ಒಂಥರಾ ಹಿಂಸೆ ಹಾಗೂ ಬಹಳ ಕಷ್ಟದ ಕೆಲಸ. ತಾಯಿ ಆಗೋದ್ರಿಂದ ಗ್ಲಾಮರ್ ಹಾಳಾಗುತ್ತದೆ, ನಂತರ ಯಾರೂ ಸಿನಿಮಾದಲ್ಲಿ ನಟಿಸಲು ಅವಕಾಶ ನೀಡುವುದಿಲ್ಲವೋ ಅನ್ನೋ ಅನಾವಶ್ಯಕ ಆತಂಕ ಇರುತ್ತವೆ.

  ಆದರೆ ಇದಕ್ಕೆಲ್ಲಾ ತದ್ವಿರುದ್ಧ ಎನ್ನುವಂತಿದ್ದಾರೆ ಹಾಲಿವುಡ್ ನ ಖ್ಯಾತ ನಟಿ ಮೇಗನಾ ಫಾಕ್ಸ್ ಅವರು. ಹೌದು ಇವರಿಗೆ ತಾಯಿಯಾಗೋದು ಅಂದ್ರೆ ಎಲ್ಲಿಲ್ಲದ ಸಂಭ್ರಮ. ಇವರು ಎಷ್ಟು ಬಾರಿ ಬೇಕಾದರೂ ತಾಯಿ ಆಗಲು ಸಿದ್ಧರಿದ್ದಾರಂತೆ.

  'ಕೆಲವು ಮಹಿಳೆಯರಿಗೆ ಗರ್ಭಿಣಿಯಾಗುವುದೆಂದರೆ ಅಸಮಾಧಾನಕರ ವಿಷಯ, ಅವರು ಗರ್ಭಿಣಿ ಎಂದರೆ ನೋವಿನಿಂದ ಕೂಡಿರುವ ವಿಚಾರ ಎಂದು ಅಂದುಕೊಂಡಿರುತ್ತಾರೆ. ಆದರೆ ನನಗೆ ಆ ಇಡೀ ಪ್ರಕ್ರಿಯೆ ಇಷ್ಟ' ಎನ್ನುತ್ತಾರೆ 30ರ ಹರೆಯದ ನಟಿ ಮೇಗನಾ ಫಾಕ್ಸ್ ಅವರು.

  ಈಗಾಗಲೇ ಇಬ್ಬರು ಮಕ್ಕಳನ್ನು ಹೊಂದಿರುವ ನಟಿ ಮೇಗನಾ ಅವರು ಮೂರನೇ ಮಗುವಿನ ನಿರೀಕ್ಷೆಯಲ್ಲಿದ್ದಾರೆ. 'ನಮ್ಮ ಮನೆಗೆ ಬರಲಿರುವ ಹೊಸ ಸದಸ್ಯನನ್ನು ಬರಮಾಡಿಕೊಳ್ಳಲು ಕಾತರದಿಂದ ಕಾಯುತ್ತಿದ್ದೇನೆ' ಎಂದು ನಟಿ ಮೇಗನಾ ಫಾಕ್ಸ್ ಹೇಳಿಕೊಂಡಿದ್ದಾರೆ.

  English summary
  Hollywood Actress Megan Fox says she loves being pregnant. The 30 year old star actress said she enjoys the whole process of becoming a mother.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X