ಕೊರೊನಾ ಸೋಂಕು: 'ನಾನು ಆರೋಗ್ಯವಾಗಿದ್ದೇನೆ' ಎಂದ ಜಾಕಿ ಚಾನ್
ಮಾರಣಾಂತಿಕ ಕೊರೊನಾ ವೈರಸ್ ಇಡೀ ವಿಶ್ವವನ್ನೇ ಬೆಚ್ಚಿ ಬೀಳಿಸಿದೆ. ಡೆಡ್ಲಿ ಕೊರೊನಾ ವೈರಸ್ ಸೋಂಕು ಹಾಂಗ್ ಕಾಂಗ್ ಸೂಪರ್ ಸ್ಟಾರ್ ಜಾಕಿ ಚಾನ್ ಗೂ ತಗುಲಿದೆ ಎಂಬ ಸುದ್ದಿ ಇತ್ತೀಚೆಗಷ್ಟೇ ಹಬ್ಬಿತ್ತು. ಇದೀಗ ಇದೇ ವಿಚಾರದ ಬಗ್ಗೆ ನಟ ಜಾಕಿ ಚಾನ್ ಸ್ಪಷ್ಟನೆ ನೀಡಿದ್ದಾರೆ.
Recommended Video
ವಿಶ್ವದ ಅತಿ ಹೆಚ್ಚು ಸಂಭಾವನೆ ಪಡೆಯುವ ನಟರ ಪಟ್ಟಿಯಲ್ಲಿ ಆಕ್ಷಯ್ ಕುಮಾರ್ | Akshay Kumar
ತಮ್ಮ ಆರೋಗ್ಯದ ಕುರಿತು ನಟ ಜಾಕಿ ಚಾನ್ ಇನ್ಸ್ಟಾಗ್ರಾಮ್ ಅಕೌಂಟ್ ನಲ್ಲಿ ಬರೆದುಕೊಳ್ಳುವ ಮೂಲಕ ಕ್ಲಾರಿಟಿ ಕೊಟ್ಟಿದ್ದಾರೆ.

''ಎಲ್ಲರ ಕಾಳಜಿ ಮತ್ತು ಪ್ರೀತಿಗೆ ನನ್ನ ಧನ್ಯವಾದಗಳು. ನಾನು ಆರೋಗ್ಯವಾಗಿದ್ದೇನೆ ಮತ್ತು ಸುರಕ್ಷಿತವಾಗಿದ್ದೇನೆ. ನನ್ನ ಆರೋಗ್ಯದಲ್ಲಿ ಯಾವುದೇ ಸಮಸ್ಯೆ ಕಂಡುಬಂದಿಲ್ಲ. ಎಲ್ಲರೂ ಸುರಕ್ಷಿತವಾಗಿ ಮತ್ತು ಆರೋಗ್ಯವಾಗಿರಲಿ ಎಂಬುದೇ ನನ್ನ ಆಶಯ'' ಎಂದು 65 ವರ್ಷದ ನಟ ಜಾಕಿ ಚಾನ್ ಇನ್ಸ್ಟಾಗ್ರಾಮ್ ಅಕೌಂಟ್ ನಲ್ಲಿ ಪೋಸ್ಟ್ ಮಾಡಿದ್ದಾರೆ.
ಅಂದ್ಹಾಗೆ, ಹಾಂಗ್ ಕಾಂಗ್ ನಲ್ಲಿ 94 ಮಂದಿಗೆ ಕೊರೊನಾ ವೈರಸ್ ಸೋಂಕು ತಗುಲಿದೆ. ಇಲ್ಲಿಯವರೆಗೂ ಕೊರೊನಾ ವೈರಸ್ ನಿಂದಾಗಿ 2800ಕ್ಕೂ ಅಧಿಕ ಮಂದಿ ಸಾವನ್ನಪ್ಪಿದ್ದಾರೆ.
English summary
Jackie Chan Denies He's Been Quarantined For Coronavirus.


Click it and Unblock the Notifications