»   » 'ಅವತಾರ್ 2' ಬಿಡುಗಡೆ ದಿನಾಂಕ ಫಿಕ್ಸ್: ರಿಲೀಸ್ ಯಾವಾಗ?

'ಅವತಾರ್ 2' ಬಿಡುಗಡೆ ದಿನಾಂಕ ಫಿಕ್ಸ್: ರಿಲೀಸ್ ಯಾವಾಗ?

Posted By:
Subscribe to Filmibeat Kannada

ಪ್ರಖ್ಯಾತ ಹಾಲಿವುಡ್ ಚಿತ್ರ ನಿರ್ದೇಶಕ ಜೇಮ್ಸ್ ಕ್ಯಾಮೆರಾನ್ ರವರ 'ಟೈಟಾನಿಕ್' ಚಿತ್ರದ ನಂತರ ಬಂದ ಬಿಗ್ ಬಜೆಟ್ ಸಿನಿಮಾ 'ಅವತಾರ್'. 2010 ರಲ್ಲಿ ಗೋಲ್ಡನ್ ಗ್ಲೋಬ್ ಪ್ರಶಸ್ತಿ ಮುಡಿಗೇರಿಸಿಕೊಂಡ ಈ ಚಿತ್ರದ ಎರಡನೇ ಭಾಗ 'ಅವತಾರ್ 2' ಈಗ ಬಿಡುಗಡೆಗೆ ಸಜ್ಜಾಗಿದೆ.[ಗೋಲ್ಡನ್ ಗ್ಲೋಬ್ ಅತ್ಯುತ್ತಮ ಚಿತ್ರ 'ಅವತಾರ್']

ಹಾಲಿವುಡ್ ಸಿನಿ ಪ್ರಿಯರಲ್ಲಿ ಅತಿ ಹೆಚ್ಚು ಕುತೂಹಲ ಮೂಡಿಸಿರುವ 'ಅವತಾರ್' ಚಿತ್ರದ ಸೀಕ್ವೆಲ್ 2, 2020 ಡಿಸೆಂಬರ್ 18 ರಂದು ಪ್ರಪಂಚದಾದ್ಯಂತ ತೆರೆಕಾಣಲಿದೆ ಎಂದು 'ಅವತಾರ್' ಚಿತ್ರದ ಅಧಿಕೃತ ಫೇಸ್ ಬುಕ್ ಪೇಜ್ ನಲ್ಲಿ ಪ್ರಕಟಿಸಲಾಗಿದೆ.

James Cameron sets release dates for Avatars 2, 3, 4, and 5

ನಿರ್ದೇಶಕ ಜೇಮ್ಸ್ ಕ್ಯಾಮೆರಾನ್ ಹಾಗೂ ಅವರ ಜತೆ ಕಾರ್ಯನಿರ್ವಹಿಸುತ್ತಿರುವವರ ಫೋಟೋದೊಂದಿಗೆ ಪ್ರೇಕ್ಷಕರಿಗೆ 'ಅವತಾರ್ 2' ಬಿಡುಗಡೆ ದಿನಾಂಕ ತಿಳಿಸಿರುವ ಚಿತ್ರತಂಡ, 'ಅವತಾರ್' ಚಿತ್ರದ ಭಾಗ 3, ಭಾಗ 4, ಭಾಗ 5 ಸಿನಿಮಾಗಳ ಬಿಡುಗಡೆ ದಿನಾಂಕವನ್ನು ಫೇಸ್ ಬುಕ್ ಪೇಜ್ ನಲ್ಲಿ ತಿಳಿಸಿದೆ. 'ಅವತಾರ್ 2' ಡಿಸೆಂಬರ್ 18, 2020 ಕ್ಕೆ, 'ಅವತಾರ್' ಸೀಕ್ವೆಲ್ 3 ಡಿಸೆಂಬರ್ 17, 2021 ಕ್ಕೆ, 'ಅವತಾರ್ 4' ಡಿಸೆಂಬರ್ 20, 2024 ರಲ್ಲಿ ಮತ್ತು 'ಅವತಾರ್ 5' ಡಿಸೆಂಬರ್ 19 2025 ರಂದು ತೆರೆಕಾಣಲಿವೆ.

James Cameron sets release dates for Avatars 2, 3, 4, and 5

ಡಿಸೆಂಬರ್ 10, 2009 ರಲ್ಲಿ ಬಿಡುಗಡೆ ಆಗಿದ್ದ 'ಅವತಾರ್' ಚಿತ್ರ ಅಂದಾಜು 17 ಸಾವಿರ ಕೋಟಿ ರೂಪಾಯಿ (2.7 ಬಿಲಿಯನ್ ಡಾಲರ್) ಗಳಿಸಿತ್ತು. ಅಲ್ಲದೇ 2010 ರ ಗೋಲ್ಡನ್ ಗ್ಲೋಬ್ ಪ್ರಶಸ್ತಿ ಸಮಾರಂಭದಲ್ಲಿಲ್ಲಿ ಅತ್ಯುತ್ತಮ ಚಿತ್ರ, ಅತ್ಯುತ್ತಮ ನಿರ್ದೇಶನ ವಿಭಾಗಗಳಲ್ಲಿ ಎರಡು ಪ್ರಶಸ್ತಿಗಳನ್ನು 'ಅವತಾರ್' ಚಿತ್ರ ತನ್ನದಾಗಿಸಿಕೊಂಡಿತ್ತು.

English summary
After being delayed multiple times, James Cameron's Avatar sequels now have new release dates. Announced on the film's Facebook page, Avatar 2 will hit theaters December 18, 2020 followed by Avatar 3 on December 17, 2021, then three years later with Avatar 4 opening December 20, 2024, and, finally, Avatar 5 will hit theaters December 19, 2025.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada