Don't Miss!
- News
ಮಾನ್ವಿ: ಮಂಜೂರಾದ ಬಡವರ ಭೂಮಿಗೆ ಕಣ್ಣು ಹಾಕಿದ ಪ್ರಭಾವಿಗಳು, ಜನಾಕ್ರೋಶ
- Sports
LLC 2023: ಲೆಜೆಂಡ್ಸ್ ಲೀಗ್ನಲ್ಲಿ ಕೈಫ್, ಗೇಲ್, ಗಂಭೀರ್ ಸೇರಿದಂತೆ ಹಲವು ಸ್ಟಾರ್ಗಳು
- Lifestyle
ಆರೋಗ್ಯವಾಗಿರಬೇಕೆ? ಹಾಗಾದರೆ ನೀವು 3 ವಿಷಯಗಳಲ್ಲಿ ನಂಬಿಕೆ ಇಡಲೇಬೇಕು
- Finance
Jio 5G services: ಇಂದಿನಿಂದ ಮತ್ತೆ 34 ನಗರಗಳಲ್ಲಿ ಪ್ರಾರಂಭ- ಮಧ್ಯ ಕರ್ನಾಟಕದ ಯಾವ ನಗರಕ್ಕೆ ಕೊಡುಗೆ? ಮಾಹಿತಿ ಪಡೆಯಿರಿ
- Automobiles
ಪೆಟ್ರೋಲ್ ಬೆಲೆ ಏರಿಕೆ ಚಿಂತೆ ಬಿಡಿ: ರೂ.1 ಲಕ್ಷ ಇದ್ರೆ ಆಕ್ಟಿವಾವನ್ನು ಎಲೆಕ್ಟ್ರಿಕ್ ಸ್ಕೂಟರ್ ಆಗಿ ಪರಿವರ್ತಿಸಬ
- Technology
ಆಂಡ್ರಾಯ್ಡ್ ಬಳಕೆದಾರರಿಗಾಗಿ 'ಕಿಡ್ಸ್ ಮಿಸ್ಟರಿ ಬಾಕ್ಸ್' ಫೀಚರ್ಸ್ ಪರಿಚಯಿಸಿದ ನೆಟ್ಫ್ಲಿಕ್ಸ್!
- Education
KVS Recruitment 2022 : ಕೇಂದ್ರೀಯ ವಿದ್ಯಾಲಯ ಸಂಗತನ್ ದಲ್ಲಿ 13404 ಹುದ್ದೆಗಳ ನೇಮಕಾತಿ
- Travel
ಯಾವುದೇ ಚಿಂತೆ ಇಲ್ಲದೆ ಸುಖಕರ ಪ್ರಯಾಣ ಅನುಭವಿಸಲು ಇಲ್ಲಿದೆ ಸಲಹೆಗಳು
ಹುಟ್ಟುಹಬ್ಬದಂದು ಅಭಿಮಾನಿಗಳಿಗೆ 'ಉಡುಗೊರೆ': ಬೆತ್ತಲೆ ಚಿತ್ರ ಹಂಚಿಕೊಂಡ ನಟಿ
ಹುಟ್ಟುಹಬ್ಬದಂದು ಸ್ಟಾರ್‌ಗಳಿಗೆ ಅಭಿಮಾನಿಗಳು ಶುಭಾಶಯ ತಿಳಿಸುವುದು ಉಡುಗೊರೆ ನೀಡುವುದು ಸಾಮಾನ್ಯ ಆದರೆ ನಟಿಯೊಬ್ಬಾಕೆ ಹುಟ್ಟುಹಬ್ಬದಂದು ಅಭಿಮಾನಿಗಳಿಗೆ 'ಉಡುಗೊರೆ' ನೀಡಿದ್ದಾರೆ.
ಹಾಲಿವುಡ್‌ನ ಜನಪ್ರಿಯ ನಟಿ, ಗಾಯಕಿ, ನೃತ್ಯಗಾರ್ತಿ ಜೆನ್ನಿಫರ್ ಲೊಪೇಜ್ ನಿನ್ನೆ (ಜುಲೈ 24)ಕ್ಕೆ ತಮ್ಮ 53ನೇ ಹುಟ್ಟುಹಬ್ಬ ಆಚರಿಸಿಕೊಂಡಿದ್ದಾರೆ. ಇದೇ ಖುಷಿಯಲ್ಲಿ ತಮ್ಮ ಇನ್‌ಸ್ಟಾಗ್ರಾಂನಲ್ಲಿ ತಮ್ಮದೇ ಬೆತ್ತಲೇ ಚಿತ್ರವುಳ್ಳ ವಿಡಿಯೋ ಹಂಚಿಕೊಂಡಿದ್ದಾರೆ ನಟಿ.
ಬ್ಯಾಟ್‌ಮ್ಯಾನ್‌ಗೆ
ಪತ್ನಿಯಾದ
ಜೆನ್ನಿಫರ್
ಲೊಪೇಜ್:
ನಾಲ್ಕನೇ
ಮದುವೆ
ಜೆನಿಫರ್ ಲೊಪೇಜ್ ತಮ್ಮದೇ ಆದ ಸೌಂದರ್ಯವರ್ಧಕ ಬ್ರ್ಯಾಂಡ್ ಅನ್ನು ಹೊಂದಿದ್ದು ಅದರ ಜಾಹಿರಾತಿನ ವಿಡಿಯೋ ಅನ್ನು ಹಂಚಿಕೊಂಡಿದ್ದಾರೆ. ಆದರೆ ವಿಡಿಯೋದ ಆರಂಭದಲ್ಲಿ ಅದರ ತಂಬ್‌ನೈಲ್ (ವಿಡಿಯೋ ಪ್ರಾರಂಭವಾಗುವ ಮುನ್ನ ಕಾಣುವ ಚಿತ್ರ) ಆಗಿ ತಮ್ಮ ಬೆತ್ತಲೆ ಚಿತ್ರವನ್ನು ಹಾಕಿದ್ದಾರೆ.

ವಿಡಿಯೋ ಹಂಚಿಕೊಂಡಿರುವ ನಟಿ
ತಮ್ಮ ಜೆಲೊ (J Lo) ಬ್ರ್ಯಾಂಡ್‌ನಿಂದ ಪೂರ್ಣ ದೇಹಕ್ಕೆ ಹಚ್ಚಿಕೊಳ್ಳುವ ಹೊಸ ಲೋಷನ್ ಒಂದನ್ನು ಬಿಡುಗಡೆ ಮಾಡಿದ್ದು, ಅದಕ್ಕೆಂದು ವಿಶೇಷ ಜಾಹೀರಾತು ವಿಡಿಯೋದಲ್ಲಿ ಜೆನಿಫರ್ ಕಾಣಿಸಿಕೊಂಡಿದ್ದಾರೆ. ವಿಡಿಯೋದಲ್ಲಿ ಬಹುತೇಕ ದೇಹ ಕಾಣುವಂತೆ ತಂಡುಡುಗೆ ತೊಟ್ಟು ತಮ್ಮ ಸಂಸ್ಥೆಯ ಲೋಷನ್ ಅನ್ನು ದೇಹಕ್ಕೆ ಹಚ್ಚಿಕೊಂಡಿದ್ದಾರೆ. ಅದಕ್ಕೆ ತುಸು ಮಾದಕತೆಯನ್ನೂ ಸೇರಿಸಿದ್ದಾರೆ. ಈ ವಿಡಿಯೋ ಇದೀಗ ವೈರಲ್ ಆಗಿದೆ.

53ರ ವಯಸ್ಸಿನಲ್ಲೂ ಹಾಟ್ ಜೆನ್ನಿಫರ್ ಲೊಪೇಜ್
ಇನ್ನು ಜೆನಿಫರ್ ಲೊಪೇಜ್‌ರ ಬೆತ್ತಲೇ ಚಿತ್ರವೂ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗಿದೆ. ಜೆನಿಫರ್ ಹಂಚಿಕೊಂಡಿರುವ ವಿಡಿಯೋದಲ್ಲಿ ಬೆತ್ತಲೆ ಚಿತ್ರವನ್ನು ಕೇವಲ ತಂಬ್‌ನೈಲ್ ಆಗಿ ಮಾತ್ರವೇ ಬಳಸಲಾಗಿದೆಯಾದರೂ ಬೇರೆ ಖಾತೆಗಳಲ್ಲಿ ಅವರ ಬೆತ್ತಲೇ ಚಿತ್ರವನ್ನು ಪ್ರತ್ಯೇಕವಾಗಿ ಹಂಚಿಕೊಂಡು ವೈರಲ್ ಮಾಡಲಾಗಿದೆ. 53ರ ವಯಸ್ಸಲ್ಲೂ ಲೊಪೇಜ್‌ರ ಮಾದಕ ದೇಹ ಸೌಂದರ್ಯ ಕಂಡು ಅಭಿಮಾನಿಗಳು ವಾವ್ ಎಂದಿದ್ದಾರೆ.

ಜನಪ್ರಿಯ ಬ್ರ್ಯಾಂಡ್‌ನ ಒಡತಿ ಜೆನ್ನಿಫರ್
ಜೆನಿಫರ್ ಲೊಪೇಜ್ ಹಾಲಿವುಡ್‌ನಲ್ಲಿ ಈಗಲೂ ಚಾಲ್ತಿಯಲ್ಲಿರುವ ಗಾಯಕಿ ಅದರ ಜತೊಗೆ ಉದ್ಯಮಿ ಸಹ ಹೌದು. ಅವರ ಜೆ ಲೊ ಬ್ರ್ಯಾಂಡ್ ಸಾವಿರಾರು ಕೋಟಿ ಮಾರುಕಟ್ಟೆ ಮೌಲ್ಯ ಹೊಂದಿದೆ. ಸೌಂದರ್ಯಕ್ಕೆ ಸಂಬಂಧಿಸಿದ ಹಲವು ವಸ್ತುಗಳನ್ನು ತಮ್ಮ ಸಂಸ್ಥೆಯಿಂದ ಲೊಪೇಜ್ ಬಿಡುಗಡೆ ಮಾಡಿದ್ದಾರೆ. ತಮ್ಮ ಬ್ರ್ಯಾಂಡ್‌ಗೆ ತಾವೇ ರಾಯಭಾರಿ ಆಗಿದ್ದು ತಮ್ಮ ಬ್ರ್ಯಾಂಡ್‌ನ ಹಲವು ಜಾಹೀರಾತುಗಳಲ್ಲಿ ಲೊಪೇಜ್ ಕಾಣಿಸಿಕೊಂಡಿದ್ದಾರೆ. ಜೆನ್ನಿಫರ್ ಲೊಪೇಜ್‌ರ ಸೌಂದರ್ಯ ವರ್ಧಕಗಳು ದುಬಾರಿಯಾಗಿದ್ದು, 6000 ದಿಂದ ಆರಂಭಿಸಿ 20,000 ದವರೆಗಿನ ಬೆಲೆಗಳಲ್ಲಿ ಆನ್‌ಲೈನ್‌ನಲ್ಲಿ ಲಭ್ಯವಿವೆ.

ನಟ ಬೆನ್ ಅಫ್ಲೆಕ್ ಅನ್ನು ವಿವಾಹವಾದ ನಟಿ
ಜೆನ್ನಿಫರ್ ಲೊಪೇಜ್ ಇತ್ತೀಚೆಗಷ್ಟೆ ಹಾಲಿವುಡ್‌ನ ಖ್ಯಾತ ನಟ ಬೆನ್ ಅಫ್ಲಿಕ್ ಅನ್ನು ವಿವಾಹವಾಗಿ ಸುದ್ದಿಯಾಗಿದ್ದರು. 'ಬ್ಯಾಟ್‌ಮ್ಯಾನ್ v/s ಸೂಪರ್ ಮ್ಯಾನ್', 'ಜಸ್ಟಿಸ್ ಲೀಗ್' ಸಿನಿಮಾಗಳಲ್ಲಿ ಬ್ಯಾಟ್‌ಮ್ಯಾನ್ ಪಾತ್ರದಲ್ಲಿ ನಟಿಸಿರುವ ಬೆನ್ ಅಫ್ಲಿಕ್ ಅನ್ನು ಜೆನ್ನಿಫರ್ ಕೆಲವು ದಿನಗಳ ಹಿಂದಷ್ಟೆ ವಿವಾಹವಾದರು. ಈ ಜೋಡಿ 2004ರಲ್ಲಿಯೇ ವಿವಾಹವಾಗಲು ಮುಂದಾಗಿತ್ತು. ಆದರೆ ಆಗ ಸಂಬಂಧದ ನಡುವೆ ಬಂದ ಕೆಲವು ಸಮಸ್ಯೆಗಳಿಂದ ಬ್ರೇಕ್ ಅಪ್ ಮಾಡಿಕೊಂಡಿದ್ದರು. ಈಗ ಮತ್ತೆ ವಿವಾಹವಾಗಿದ್ದಾರೆ.