»   » ಸಾಕ್ಸ್ ಗೆ ಈಕೆ ಖರ್ಚು ಮಾಡಿರುವ ದುಡ್ಡು ಎಷ್ಟು ಅಂತ ಕೇಳಿದ್ರೆ ತಲೆ ತಿರುಗಿ ಬೀಳ್ತೀರಾ.!

ಸಾಕ್ಸ್ ಗೆ ಈಕೆ ಖರ್ಚು ಮಾಡಿರುವ ದುಡ್ಡು ಎಷ್ಟು ಅಂತ ಕೇಳಿದ್ರೆ ತಲೆ ತಿರುಗಿ ಬೀಳ್ತೀರಾ.!

Posted By:
Subscribe to Filmibeat Kannada

ಒಂದು ಜೊತೆ ಸಾಕ್ಸ್ ಬೆಲೆ ಎಷ್ಟಿರಬಹುದು.? 100.? 150.? 500.? ಬ್ರ್ಯಾಂಡೆಡ್ ಅಥವಾ ಇಮ್ಪೋರ್ಟೆಡ್ ಅಂತೆಲ್ಲ ಇದ್ದರೆ 1000.. 2000.. ರೂಪಾಯಿ ಕೊಟ್ಟು ಕೆಲವರು ಖರೀದಿ ಮಾಡಲೂಬಹುದು.?!

1000.. 2000.. ರೂಪಾಯಿ ಕೊಟ್ಟು ಸಾಕ್ಸ್ ಯಾಕೆ.? ಒಳ್ಳೆಯ ಸ್ಯಾಂಡಲ್ಸ್, ಶೂಸ್ ಬರುತ್ತೆ ಅಂತ ಹಲವರು ಲೆಕ್ಕಾಚಾರ ಹಾಕಬಹುದು.!

ಆದ್ರೆ, ಸೆಲೆಬ್ರಿಟಿಗಳಿಗೆ ಏನ್ ಕಮ್ಮಿ ಹೇಳಿ..? ಉಡುಗೆ, ಆಭರಣ, ಸ್ಟೈಲ್, ಫ್ಯಾಶನ್ ಅಂತೆಲ್ಲ ಸಾವಿರಾರು ರೂಪಾಯಿ ಖರ್ಚು ಮಾಡುವ ತಾರೆಯರು ಇದ್ದಾರೆ.

Jennifer Lopez wears Rs 85000 socks

ಮನೆಯೊಳಗೆ ಧರಿಸಲು ಹತ್ತಾರು ಸಾವಿರ ರೂಪಾಯಿ ಕೊಟ್ಟು ಚಪ್ಪಲಿ ಕೊಂಡುಕೊಳ್ಳುವ ಸ್ಟಾರ್ ಗಳು ನಮ್ಮ ಮಧ್ಯೆಯೇ ಇದ್ದಾರೆ. ಹೀಗಿರುವಾಗ, ಇಲ್ಲೋರ್ವ ನಟಿ, ಪಾಪ್ ಗಾಯಕಿ ಕೇವಲ ಸಾಕ್ಸ್ ಆಗಿ ಖರ್ಚು ಮಾಡಿರುವ ಮೊತ್ತ ಎಷ್ಟು ಅಂತ ಕೇಳಿದ್ರೆ ಖಂಡಿತ ಸುಸ್ತಾಗಿ ತಲೆ ತಿರುಗಿ ಬೀಳ್ತೀರಾ.!

ಅಮೇರಿಕಾದ ಖ್ಯಾತ ಗಾಯಕಿ, ನಟಿ, ಡ್ಯಾನ್ಸರ್ ಹಾಗೂ ಫ್ಯಾಶನ್ ಡಿಸೈನರ್ ಆಗಿರುವ ಜೆನ್ನಿಫರ್ ಲೊಪೇಜ್ ಒಂದು ಜೊತೆ ಸಾಕ್ಸ್ ಗಾಗಿ ನೀಡಿರುವ ಬೆಲೆ ಎಷ್ಟು ಗೊತ್ತಾ.? ಬರೋಬ್ಬರಿ 85 ಸಾವಿರ.!

ಹರಳುಗಳು ಹೊಂದಿರುವ ಬಿಳಿ ಬಣ್ಣದ #guccigang ಸಾಕ್ಸ್ ಧರಿಸಿ, ಅದಕ್ಕೆ ಮ್ಯಾಚ್ ಆಗುವಂತಹ ಬಿಳಿ ಬಣ್ಣದ ಉಡುಗೆ ತೊಟ್ಟು ಪೋಸ್ ನೀಡಿರುವ ಜೆನ್ನಿಫರ್ ಲೊಪೇಜ್ ಫೋಟೋ ಸದ್ಯ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

ಸಾಕ್ಸ್ ಗಾಗಿ ಸಾವಿರಾರು ರೂಪಾಯಿ ಖರ್ಚು ಮಾಡಿರುವ ಜೆನ್ನಿಫರ್ ಲೊಪೇಜ್ ಕಂಡು ಕೆಲವರು ನಿಬ್ಬೆರಗಾಗಿದ್ದಾರೆ. ಅದೇ 85 ಸಾವಿರ ಇದ್ದಿದ್ರೆ, ಒಂದು ರೌಂಡ್ ದುಬೈಗೋ, ಮಾಲ್ದೀವ್ಸ್ ಗೋ, ಸಿಂಗಾಪುರ್ ಗೋ ಅಥವಾ ಅಮೇರಿಕಾಗೋ ಫ್ಲೈಟ್ ನಲ್ಲಿ ಹೋಗಿ ಬರಬಹುದಿತ್ತು ಅಂತ ಹಲವರು ಮೂಗು ಮುರಿಯುತ್ತಿದ್ದಾರೆ.

ಅಷ್ಟೆಲ್ಲ ಯಾಕೆ 85 ಸಾವಿರ ಇದ್ದಿದ್ರೆ, ಕೈಗೆ ಆಪಲ್ ಫೋನ್ ಬಂದಿರೋದು ಎಂಬುದು ಆಪಲ್ ಪ್ರಿಯರ ಮಾತು. ಇನ್ನೂ ಆಭರಣ ಪ್ರಿಯರ ಲೆಕ್ಕಾಚಾರವೇ ಬೇರೆ ಬಿಡಿ.

ಒಟ್ನಲ್ಲಿ, ಜೆನ್ನಿಫರ್ ಲೊಪೇಜ್ ಅವರ ಈ ಸಾಕ್ಸ್ ಕ್ರೇಜ್ ಕಂಡು ಎಲ್ಲರ ಕಣ್ಣು ಅರಳಿದೆ. ಜೊತೆಗೆ ತಲೆಯಲ್ಲಿ ಏನೇನೋ ಲೆಕ್ಕಾಚಾರ ಓಡುತ್ತಿದೆ.

English summary
American Singer, Actress, Dancer, Fashion designer Jennifer Lopez wears socks that costs Rs 85,000.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada

X