twitter
    For Quick Alerts
    ALLOW NOTIFICATIONS  
    For Daily Alerts

    ಖ್ಯಾತ ಗಾಯಕ ಜಸ್ಟಿನ್ ಬೀಬರ್ ಗಂಭೀರ ಖಾಯಿಲೆ: ಹಾಡು ನಿಲ್ಲಿಸಿದ ಬೀಬರ್!

    |

    ಖ್ಯಾತ ಪಾಪ್ ಗಾಯಕ ಜಸ್ಟಿನ್ ಬೀಬರ್ ಇತ್ತೀಚೆಗೆ ಕೆಲವು ಕಾರ್ಯಕ್ರಮಗಳನ್ನು ರದ್ದುಗೊಳಿಸಿದ್ದರು. ಹಾಗಾಗಿ ಜಸ್ಟಿನ್ ಅಭಿಮಾನಿಗಳಿಗೆ ನಿರಾಸೆ ಆಗಿತ್ತು. ಆದರೆ ಜಸ್ಟಿನ್ ಬೀಬರ್ ಕಾರ್ಯಕ್ರಮ ರದ್ದು ಮಾಡಿದ್ದು ಯಾಕೆ ಎನ್ನುವುದಕ್ಕೆ ಈಗ ಸ್ವತಃ ಜಸ್ಟಿನ್ ಬೀಬರ್ ಹಂಚಿಕೊಂಡಿದ್ದಾರೆ.

    ಜಸ್ಟಿನ್ ಬೀಬರ್ ಗಂಭೀರವಾದ ಆರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದಾರೆ. ಹಾಗಾಗಿ ಅವರು ತಾತ್ಕಾಲಿಕವಾಗಿ ಹಾಡುವುದನ್ನು ನಿಲ್ಲಿಸಿದ್ದಾರೆ. ಈ ಬಗ್ಗೆ ಜಸ್ಟಿನ್ ಬೀಬರ್ ಇನ್‌ಸ್ಟಾಗ್ರಾಂನಲ್ಲಿ ವಿಡಿಯೋ ಮಾಡುವ ಮೂಲಕ ಪೋಸ್ಟ್ ಹಂಚಿಕೊಂಡಿದ್ದಾರೆ.

    'ಜುರಾಸಿಕ್ ಪಾರ್ಕ್' ಸರಣಿಯ ಕಡೆಯ ಚಿತ್ರ ಆನ್‌ಲೈನ್‌ನಲ್ಲಿ ಲೀಕ್!'ಜುರಾಸಿಕ್ ಪಾರ್ಕ್' ಸರಣಿಯ ಕಡೆಯ ಚಿತ್ರ ಆನ್‌ಲೈನ್‌ನಲ್ಲಿ ಲೀಕ್!

    28 ವರ್ಷದ ಕೆನಡಾ ಮೂಲದ ಜಸ್ಟಿನ್ ಬೀಬರ್ ಮುಖಕ್ಕೆ ಪಾರ್ಶ್ವವಾಯು ಆಗಿದೆ. ಗ್ರ್ಯಾಮಿ ಪ್ರಶಸ್ತಿ ಪಡೆದ ಈ ಗಾಯಕ ತನ್ನ ಆರೋಗ್ಯ ಸ್ಥಿತಿ ಹೇಗಿದೆ ಎಂಬುದನ್ನು ವಿಡಿಯೋ ಮಾಡಿ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.

    ಆರೋಗ್ಯ ಸ್ಥಿತಿ ಬಗ್ಗೆ ವಿವರಿಸಿದ ಬೀಬರ್!

    ಜಸ್ಟಿನ್ ಬೀಬರ್ ತಮ್ಮ ಶೋಗಳು ಯಾಕೆ ರದ್ದುಗೊಳಿಸಿದರು ಎಂಬುದನ್ನು ವಿವರಿಸುತ್ತಾ "ನನ್ನ ಮುಖದ ಒಂದು ಬದಿಯಲ್ಲಿ ಸಂಪೂರ್ಣ ಪಾರ್ಶ್ವವಾಯು ಉಂಟಾಗಿ ಈ ರೀತಿ ಆಗಿದೆ. ಆದ್ದರಿಂದ ಮುಂದಿನ ಪ್ರದರ್ಶನಗಳ ರದ್ದತಿಯಿಂದ ಹತಾಶೆಗೊಂಡ ನನ್ನ ಅಭಿಮಾನಿಗಳಿಗೆ, ನಾನು ದೈಹಿಕವಾಗಿ ಕಾರ್ಯಕ್ರಮಗಳನ್ನು ನಡೆಸಲು ಸಮರ್ಥನಲ್ಲ ಎಂದು ತಿಳಿಸಲು ಬಯಸುತ್ತೇನೆ. ನೀವು ನೋಡುವಂತೆ ಇದು ತುಂಬಾ ಗಂಭೀರವಾದ ಸಮಸ್ಯೆ ಆಗಿದೆ." ಎಂದು ಜಸ್ಟಿನ್ ಬೀಬರ್ ಈ ವೀಡಿಯೋದಲ್ಲಿ ಹೇಳಿದ್ದಾರೆ.

    ಗೆಲುವಷ್ಟೆ ಮುಖ್ಯ ಹಣವಲ್ಲ: ಪತ್ನಿಯಿಂದ ಬರಬೇಕಿದ್ದ 100 ಕೋಟಿ ಕೈಬಿಟ್ಟ ಜಾನಿ ಡೆಪ್!?ಗೆಲುವಷ್ಟೆ ಮುಖ್ಯ ಹಣವಲ್ಲ: ಪತ್ನಿಯಿಂದ ಬರಬೇಕಿದ್ದ 100 ಕೋಟಿ ಕೈಬಿಟ್ಟ ಜಾನಿ ಡೆಪ್!?

    ಭರವಸೆ ನೀಡಿದ ಜಸ್ಟಿನ್ ಬೀಬರ್!

    "ನಾನಗೆ ನಗಲೂ ಆಗುತ್ತಿಲ್ಲ, ನನ್ನ ಮುಖದ ಒಂದು ಬದಿ ತಟಸ್ಥವಾಗಿದೆ. ಅಲ್ಲಾಡಿಸಲು ಆಗುತ್ತಿಲ್ಲ. ನನ್ನ ಮುಖದ ಒಂದು ಭಾಗಕ್ಕೆ ಸಂಪೂರ್ಣ ಪಾರ್ಶ್ವವಾಯು ಆಗಿದೆ. ನಾನು ಈ ಸಮಯದಲ್ಲಿ ವಿಶ್ರಾಂತಿ ಪಡೆಯುವೆ. ಸಂಪೂರ್ಣ ಗುಣಮುಖನಾಗಿ ಮತ್ತೆ ನಿಮ್ಮ ಮುಂದೆ ಬರುವೆ. ನಾನು ಏನು ಮಾಡಲಿಕ್ಕಾಗಿ ಹುಟ್ಟಿದ್ದೆನೋ ಅದನ್ನು ನಾನು ಮಾಡುವೆ." ಎಂದು ಜಸ್ಟಿನ್ ಹೇಳಿದ್ದಾರೆ.

    ರಾಮ್ಸೆ ಹಂಟ್ ಸಿಂಡ್ರೋಮ್ ಎಂದರೇನು?

    ಜಸ್ಟಿನ್ ಬೀಬರ್‌ಗೆ 'ರಾಮ್ಸೆ ಹಂಟ್ ಸಿಂಡ್ರೋಮ್' ಬಂದಿದೆ. ಈ ಸೋಂಕು ವೆರಿಸೆಲ್ಲಾ, ಜೋಸ್ಟರ್ ವೈರಸ್ ಸೋಂಕಿನಿಂದ ಬರಲಿದೆ. ಇದು ಕಪಾಳದ ನರ ಜೆನೆಕ್ಯುಲೇಟ್ ಗ್ಯಾಂಗ್ಲಿಯ ಉರಿಯೂತಕ್ಕೆ ಕಾರಣವಾಗುತ್ತದೆ ಎಂದು ತಿಳಿದು ಬಂದಿದೆ. ಸಾಮಾನ್ಯವಾಗಿ ರಾಮ್ಸೆ ಹಂಟ್ ಸಿಂಡ್ರೋಮ್ ಎಂಬುದು ಕಿವಿಯ ಸುತ್ತ, ಮುಖದ ಮೇಲೆ ಅಥವಾ ಬಾಯಿಯ ಮೇಲೆ ನೋವಿನಿಂದ ಕೂಡಿರುತ್ತದೆ. ವೆರಿಸೆಲ್ಲಾ ಜೋಸ್ಟನ್ ವೈರಸ್ ತಲೆಯ ನರಕ್ಕೆ ಸೋಂಕು ಉಂಟು ಮಾಡಿದಾಗ ಇದು ಸಂಭವಿಸುತ್ತದೆ.

    'ವಾರಣಾಸಿ' ರೆಸ್ಟಾರೆಂಟ್‌ನಲ್ಲಿ ಒಂದೇ ರಾತ್ರಿಗೆ 48 ಲಕ್ಷ ಖರ್ಚು ಮಾಡಿದ ಜಾನಿ ಡೆಪ್'ವಾರಣಾಸಿ' ರೆಸ್ಟಾರೆಂಟ್‌ನಲ್ಲಿ ಒಂದೇ ರಾತ್ರಿಗೆ 48 ಲಕ್ಷ ಖರ್ಚು ಮಾಡಿದ ಜಾನಿ ಡೆಪ್

    ಪ್ರತಿಷ್ಟಿತ ಪ್ರಶಸ್ತಿ ವಿಜೇತ ಜಸ್ಟಿನ್!

    ಜಸ್ಟಿನ್ ಬೀಬರ್ 13 ವರ್ಷದವರಿದ್ದಾಗಲೇ ಖ್ಯಾತಿ ಗಳಿಸಿದ್ದಾರೆ. ಚಿಕ್ಕ ವಯಸ್ಸಿನಲ್ಲಿ ಹಾಡುತ್ತಿದ್ದ ವಿಡಿಯೋಗಳು ವೈರಲ್ ಆಗುತ್ತಿದ್ದವು. 'ಬಿಲೀವರ್' ಹಾಡು ಜಸ್ಟಿನ್‌ಗೆ ಅಪಾರ ಕೀರ್ತಿ ತಂದುಕೊಟ್ಟಿತು. ಅಲ್ಲದೇ ಜಸ್ಟಿನ್ ಬೀಬರ್‌ಗೆ 2 ಗ್ರ್ಯಾಮಿ ಪ್ರಶಸ್ತಿ ಸಂದಿವೆ. ಸದ್ಯ ತಾತ್ಕಾಲಿಕವಾಗಿ ಬ್ರೇಕ್‌ ತೆಗೆದುಕೊಂಡ ಬೀಬರ್ ಆದಷ್ಟು ಬೇಗ ಗುಣಮುಖರಾಗಲಿ ಎಂದು ಅಭಿಮಾನಿಗಳು ಆಶಿಸುತ್ತಿದ್ದಾರೆ.

    English summary
    Justin Bieber Diagnosed With Ramsay Hunt Syndrome which causes facial paralysis, Reveal In Vedio, Know More,
    Saturday, June 11, 2022, 18:20
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X