»   » 'ನನ್ನ ಮೇಲಿನ ರೇಪ್ ಗೆ ನಾನೇ ಕಾರಣ' ಎಂದ ಪಾಪ್ ಗಾಯಕಿ ಯಾರು?

'ನನ್ನ ಮೇಲಿನ ರೇಪ್ ಗೆ ನಾನೇ ಕಾರಣ' ಎಂದ ಪಾಪ್ ಗಾಯಕಿ ಯಾರು?

By: ಸುನಿ
Subscribe to Filmibeat Kannada

ಅಮೇರಿಕದ ಜನಪ್ರಿಯ ಪಾಪ್ ಗಾಯಕಿ ಲೇಡಿ ಗಾಗಾ ಅವರು ತಮ್ಮ 19ನೇ ವಯಸ್ಸಿನಲ್ಲಿರುವಾಗ ನಿರ್ಮಾಪಕನಿಂದ ಅತ್ಯಾಚಾರಕ್ಕೆ ಒಳಗಾಗಿ ದೈಹಿಕ ಮತ್ತು ಮಾನಸಿಕ ವೇದನೆಗೆ ಗುರಿಯಾಗಿ ಸುಮಾರು ವರ್ಷಗಳ ನಂತರ ಇದೀಗ ಸ್ವಲ್ಪ ಮಟ್ಟಿಗೆ ಸುಧಾರಿಸಿಕೊಂಡಿದ್ದಾರೆ.

ಈ ಬಗ್ಗೆ 29 ವರ್ಷ ವಯಸ್ಸಿನ ಪಾಪ್ ಸಿಂಗರ್ ಲೇಡಿ ಗಾಗಾ ಅವರು ಸೆನ್ಸೇಷನಲ್ ಹೇಳಿಕೆ ನೀಡಿದ್ದಾರೆ. 'ಹಿಂದೊಮ್ಮೆ ತಾನು ಅತ್ಯಾಚಾರಕ್ಕೆ ಒಳಗಾಗಿದ್ದೆ ಎಂದು ಬಹಿರಂಗವಾಗಿ ಹೇಳಿಕೊಂಡಿದ್ದ ಈ ಪಾಪ್ ಗಾಯಕಿ ಇದೀಗ 'ಅಂದು ತಾನು ಅತ್ಯಾಚಾರಕ್ಕೆ ಒಳಗಾಗಲು ತಾನೇ ಕಾರಣವಿರಬಹುದು ಎಂದು ಹೇಳಿಕೆ ನೀಡಿದ್ದಾರೆ.[ಲೇಡಿ ಗಾಗಾ ಜೊತೆ ಮಡೋನ್ನಾ ಹೊಸ ರಾಗ ]

Lady Gaga opens up about being Raped at 19

'ತಾನು ಅಂದು ತೊಟ್ಟ ಉಡುಗೆ-ತೊಡುಗೆ ಅತ್ಯಾಚಾರಿಯನ್ನು ಪ್ರಚೋದಿಸಿರಬಹುದು. ಆದ್ದರಿಂದ ತನ್ನ ಮೇಲೆ ಅತ್ಯಾಚಾರ ನಡೆಯಲು ತನ್ನ ನಡೆ-ನುಡಿ ಮತ್ತು ಉಡುಗೆಗಳು ಕಾರಣವಾಗಿರಬಹುದು ಎಂದು ಲೇಡಿ ಗಾಗಾ ಅವರು 'ಟೈಮ್ಸ್ ಟಾಕ್ ಪ್ಯಾನಲ್ ಡಿಸ್ಕಷನ್' ನಲ್ಲಿ ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದಾರೆ.[ಇಷ್ಟಕ್ಕೂ ಪಾಪ್ ತಾರೆ ಲೇಡಿ ಗಾಗಾ ಗಂಡೋ ಹೆಣ್ಣೋ]

Lady Gaga opens up about being Raped at 19

ಇನ್ನು ಹರೆಯದ ವಯಸ್ಸಿನಲ್ಲಿ ರೇಪ್ ಗೊಳಗಾದ ಬಳಿಕ ನನ್ನಲ್ಲಿ ದೈಹಿಕವಾಗಿ ಮಾತ್ರವಲ್ಲದೇ ಮಾನಸಿಕವಾಗಿಯೂ ತನ್ನಲ್ಲಿ ಬಹಳಷ್ಟು ಬದಲಾವಣೆಗಳಾದವು. ಆಲೋಚನಾ ವಿಧಾನ ಬದಲಾಯ್ತು. ಖಿನ್ನತೆಗೆ ಒಳಗಾಗದೇ ಇರಲು ಬಹಳ ಕಷ್ಟಪಟ್ಟೆ ಎಂದು ಪಾಪ್ ಗಾಯಕಿ ಕೂಲ್ ಆಗಿ ಜೊತೆಗೆ ಸಖತ್ ಬೋಲ್ಡ್ ಆಗಿ ಎಲ್ಲರೆದುರು ಹಂಚಿಕೊಂಡಿದ್ದಾರೆ.

English summary
Lady Gaga who recorded the emotional song 'Til It Happens to You' for The Hunting Ground, a documentary on campus rape-has opened up about her own struggle in the aftermath of being raped as a teenager.
Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada