For Quick Alerts
  ALLOW NOTIFICATIONS  
  For Daily Alerts

  'ಗಾಡ್ ಫಾದರ್' ಆಸ್ಕರ್ ತಿರಸ್ಕಾರದ ಭಾಷಣ ಮಾಡಿದ್ದ ಲಿಟಲ್‌ಫೆದರ್ ನಿಧನ

  |

  'ಗಾಡ್ ಫಾದರ್' ಹೆಸರಲ್ಲಿ ಹಲವು ಸಿನಿಮಾಗಳು ಹಲವು ಭಾಷೆಗಳಲ್ಲಿ ತೆರೆಗೆ ಬಂದಿವೆ. ಕನ್ನಡದಲ್ಲಿ ಉಪೇಂದ್ರ 'ಗಾಡ್ ಫಾದರ್' ಹೆಸರಲ್ಲಿ ಸಿನಿಮಾ ಮಾಡಿದ್ದರೆ, ತೆಲುಗಿನಲ್ಲಿ ಚಿರಂಜೀವಿ ನಟಿಸಿರುವ 'ಗಾಡ್ ಫಾದರ್' ಇದೇ ಶುಕ್ರವಾರ ತೆರೆಗೆ ಬರುತ್ತಿದೆ.

  ಆದರೆ ಅಸಲಿ 'ಗಾಡ್ ಫಾದರ್' ಸಿನಿಮಾ ಬಿಡುಗಡೆ ಆಗಿದ್ದಿದ್ದು 1972 ರಲ್ಲಿ. ಸಿನಿಮಾದಲ್ಲಿ 'ಗಾಡ್ ಫಾದರ್' ಅಥವಾ ಡಾನ್ ವಿಟೊ ಕಾರ್ಲಿಯೋನೆ ಪಾತ್ರದಲ್ಲಿ ನಟಿಸಿದ್ದಿದ್ದು ಮರ್ಲೊನ್ ಬ್ರಾಂಡೊ. ಅವರ ನಟನೆ ಅದೆಷ್ಟು ಅದ್ಭುತವಾಗಿತ್ತೆಂದರೆ ಸಿನಿಮಾದ ನಾಯಕನಾಗಿದ್ದ ಅಲ್ ಪ್ಯಾಚಿನೋ ಸಹ ಮಂಕಾಗಿ ಹೋಗಿದ್ದರು.

  ಡಾನ್ ವಿಟೊ ಕಾರ್ಲಿಯೋನೆ ಪಾತ್ರದಲ್ಲಿನ ಅದ್ಭುತ ನಟನೆಗೆ ಮರ್ಲೊನ್ ಬ್ರಾಂಡೊಗೆ ಆಸ್ಕರ್‌ ಘೋಷಿಸಲಾಯ್ತು. ಆದರೆ ಮರ್ಲೊನ್ ಬ್ರಾಂಡೊ ಆಸ್ಕರ್ ಪಡೆಯಲಿಲ್ಲ. ಅವರ ಬದಲಿಗೆ ಯುವತಿಯೊಬ್ಬಾಕೆ ವೇದಿಕೆ ಏರಿ, ನಯವಾಗಿ ಆಸ್ಕರ್ ಅನ್ನು ನಿರಾಕರಿಸಿ ಭಾಷಣವೊಂದನ್ನು ಮರ್ಲೊನ್ ಬ್ರಾಂಡೊ ಪರವಾಗಿ ಮಾಡಿದ್ದರು. ಆ ಭಾಷಣ ಭಾರಿ ಚರ್ಚೆ ಹುಟ್ಟುಹಾಕಿತ್ತು. ಆ ಯುವತಿ ನಿನ್ನೆ (ಅಕ್ಟೋಬರ್ 2) ನಿಧನರಾಗಿದ್ದಾರೆ.

  1973 ಆಸ್ಕರ್‌ನಲ್ಲಿ ಮರ್ಲೊನ್ ಬ್ರಾಂಡೊಗೆ 'ಗಾಡ್ ಫಾದರ್' ಸಿನಿಮಾದ ಪಾತ್ರಕ್ಕಾಗಿ ಆಸ್ಕರ್‌ ಧಕ್ಕಿತ್ತು. ಆದರೆ ಮರ್ಲೊನ್ ಬ್ರಾಂಡೊ ಬದಲು ಪ್ರಶಸ್ತಿ ಸ್ವೀಕರಿಸಲು ವೇದಿಕೆಗೆ ಬಂದಿದ್ದು 26ರ ಹರೆಯದ ಯುವತಿ ಸಾಶಿ ಲಿಟಲ್‌ಫೆದರ್.

  ಮೂಲ ಅಮೆರಿಕನ್ನರ ಕಡೆಗಣನೆ ಹಾಗೂ ವೂಂಡೆಟ್ ನೀ ಘಟನೆ ವಿರೋಧಿಸಿ ಮೊರ್ಲನ್ ಬ್ರಾಂಡೊ ಪ್ರಶಸ್ತಿಯನ್ನು ನಿರಾಕರಿಸಿದ್ದರು. ತಮ್ಮ ಪರವಾಗಿ ಭಾಷಣ ಮಾಡಲು ವೇದಿಕೆಗೆ ಬಂದಿದ್ದ ಸಾಶಿ ಲಿಟಲ್‌ಫೆದರ್‌ಗೆ ಒಂಬತ್ತು ಪೇಜಿನ ಭಾಷಣವನ್ನು ಮರ್ಲೊನ್ ಬರೆದುಕೊಟ್ಟಿದ್ದರು. ಆದರೆ ಮರ್ಲೊನ್‌ಗೆ ಕೇವಲ 60 ಸೆಕೆಂಡ್‌ ಕಾಲಾವಕಾಶವನ್ನಷ್ಟೆ ಆಸ್ಕರ್‌ ಆಯೋಜಕರು ನೀಡಿದ್ದರು. ಮೂಲ ಅಮೆರಿಕನ್ನರ ವೇಷ ಭೂಷಣದಲ್ಲಿ ವೇದಿಕೆ ಏರಿದ ಸಾಶಿ ಲಿಟಲ್‌ಫೆದರ್, ತಮಗೆ ನೀಡಲು ಬಂದ ಆಸ್ಕರ್‌ ಅನ್ನು ನಯವಾಗಿ ಪಕ್ಕಕ್ಕೆ ತಳ್ಳಿ ಮೂಲ ಅಮೆರಿಕನ್ನರ ಪರವಾಗಿ ಭಾಷಣ ಮಾಡಿದ್ದರು.

  ಆದರೆ ಸಾಶಿಯ ಭಾಷಣಕ್ಕೆ ಆಸ್ಕರ್‌ ಸಭೆಯಲ್ಲಿಯೇ ಮಿಶ್ರ ಪ್ರತಿಕ್ರಿಯೆಗಳು ವ್ಯಕ್ತವಾಗಿದ್ದವು. ಕೆಲವರು ಸಾಶಿಯ ಭಾಷಣಕ್ಕೆ ಚಪ್ಪಾಳೆ ತಟ್ಟಿದರೆ ಕೆಲವರು ವಿರೋಧ ವ್ಯಕ್ತಪಡಿಸಿದ್ದರು. ಆಸ್ಕರ್‌ ಭಾಷಣದ ಬಳಿಕ ಹಲವು ವರ್ಷಗಳು ಕಾಲ ಸಾಶಿ ತಮ್ಮ ಭಾಷಣದ ಕಾರಣಕ್ಕೆ ಸುದ್ದಿಯಲ್ಲಿದ್ದರು. ಕೆಲವು ಮಾಧ್ಯಮಗಳು, ಸಾಶಿ ಮೂಲ ಅಮೆರಿಕ ಸಮುದಾಯದವರೇ ಅಲ್ಲ ಎಂದಿತು. ಭಾಷಣದಂದು ಆಕೆ ತೊಟ್ಟಿದ್ದ ಉಡುಪನ್ನು ಸಾಶಿ ಬಾಡಿಗೆಗೆ ಪಡೆದು ತೊಟ್ಟಿದ್ದರು ಎನ್ನಲಾಯಿತು. ಒಟ್ಟಾರೆ ಸಾಕಷ್ಟು ಮಿಶ್ರ ಪ್ರತಿಕ್ರಿಯೆಗಳು ಸಾಶಾಳ ಭಾಷಣಕ್ಕೆ ಧಕ್ಕಿತ್ತು.

  ಕೊನೆಗೆ ಇದೀಗ ಸಾಶಾ ತನ್ನ 75ನೇ ವಯಸ್ಸಿನಲ್ಲಿ ನಿಧನ ಹೊಂದಿದ್ದಾರೆ. ಕೆಲ ವರ್ಗಳ ಹಿಂದೆ ಅವರಿಗೆ ಕ್ಯಾನ್ಸರ್ ಆಗಿತ್ತು. ಇದೇ ಭಾನುವಾರದಂದು ಅವರು ನಿಧನ ಹೊಂದಿದರು.

  ವಿಶ್ವದ ಶ್ರೇಷ್ಟ ಸಿನಿಮಾಗಳಲ್ಲಿ 'ಗಾಡ್ ಫಾದರ್' ಸಹ ಒಂದು, ಆ ಸಿನಿಮಾಕ್ಕೆ ಸಿಕ್ಕ ಅಭೂತಪೂರ್ವ ಯಶಸ್ಸಿನಿಂದಾಗಿ ಅದೇ ಧಾಟಿಯ ಹಲವು ಸಿನಿಮಾಗಳು ನಿರ್ಮಾಣವಾದವು. ವಿವಿಧ ಭಾಷೆಗಳಲ್ಲಿ ಅದೇ ಹೆಸರಿನ ಹಲವು ಸಿನಿಮಾಗಳು ಹಲವು ಭಾಷೆಗಳಲ್ಲಿ ಬಂದವು ಆದರೆ ಯಾವೊಂದು ಸಿನಿಮಾ ಸಹ ಮೂಲ 'ಗಾಡ್ ಫಾದರ್' ಹಂತಕ್ಕೆ ಏರಲು ಸಾಧ್ಯವಾಗಲಿಲ್ಲ.

  English summary
  Marlon Brando's Oscar rejection speech deliverer activist Sacheen Litlefinger passed away on October 02.
  Monday, October 3, 2022, 18:27
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X