Just In
Don't Miss!
- Sports
'ಭಾರತ-ಇಂಗ್ಲೆಂಡ್ 4ನೇ ಟೆಸ್ಟ್ನಲ್ಲಿ ನಾನು ಇಂಗ್ಲೆಂಡ್ಗೆ ಚಿಯರ್ ಮಾಡ್ತೇನೆ'
- News
ಐಟಿ ಅಧಿಕಾರಿಗಳಿಂದ ಅನುರಾಗ್ ಕಶ್ಯಪ್, ತಾಪ್ಸಿ ಪನ್ನು ವಿಚಾರಣೆ
- Automobiles
ಮಾರ್ಚ್ ತಿಂಗಳಿನಲ್ಲಿ ದಟ್ಸನ್ ಕಾರುಗಳ ಮೇಲೆ ಲಭ್ಯವಿರುವ ರಿಯಾಯಿತಿಗಳಿವು
- Finance
ನಿಮ್ಮ ಆಧಾರ್ ಸಂಖ್ಯೆ ಎಲ್ಲೆಲ್ಲಿ ಬಳಕೆಯಾಗುತ್ತಿದೆ? ಪತ್ತೆ ಹಚ್ಚಿ
- Education
Karnataka SSLC Exam 2021 Time Table: ಎಸ್ಎಸ್ಎಲ್ಸಿ ಪರೀಕ್ಷೆಯ ಅಂತಿಮ ವೇಳಾಪಟ್ಟಿ ಪ್ರಕಟ
- Lifestyle
ಮಾರ್ಚ್ ನಲ್ಲಿದೆ ಕಷ್ಟ ನಿವಾರಿಸುವ ಫಾಲ್ಗುಣ ಅಮವಾಸ್ಯೆ, ಯಾಕಿಷ್ಟು ಮಹತ್ವ ಗೊತ್ತಾ?
- Technology
ಒನ್ಪ್ಲಸ್ ನಾರ್ಡ್ ಜುಲೈ 15 ರಿಂದ ಅಮೆಜಾನ್ ತಾಣದಲ್ಲಿ ಪ್ರಿ-ಆರ್ಡರ್ಗೆ ಲಭ್ಯವಿದೆ; ಖರೀದಿಸುವಲ್ಲಿ ಮೊದಲಿಗರಾಗಿರಿ!
- Travel
ಭಾರತದಲ್ಲಿ ಜೂನ್ 1 ರಿಂದ ಚಲಿಸಲಿರುವ ರೈಲುಗಳ ಸಂಪೂರ್ಣ ಪಟ್ಟಿ
ಪ್ರಿಯಾಂಕಾ ಮೌನಕ್ಕೆ ಮಾಜಿ ನೀಲಿ ಚಿತ್ರತಾರೆ ಮಿಯಾ ಖಲೀಫಾ ಅಸಮಾಧಾನ
ಮಾಜಿ ನೀಲಿ ಚಿತ್ರತಾರೆ ಮಿಯಾ ಖಲೀಫ ದೆಹಲಿ ರೈತ ಪ್ರತಿಭಟನೆಗೆ ಬೆಂಬಲ ಸೂಚಿಸಿರುವ ಕಾರಣ ಭಾರತದಲ್ಲಿ ಕೆಲವು ದಿನಗಳಿಂದ ಸಖತ್ ಸುದ್ದಿಯಲ್ಲಿದ್ದಾರೆ.
ರೈತ ಪ್ರತಿಭಟನೆಗೆ ಬೆಂಬಲ ಸೂಚಿಸಿದ ಬಳಿಕ ಮಿಯಾ ಖಲೀಫ ವಿರುದ್ಧ ಹಲವರು ಟ್ರೋಲ್ ಮಾಡಿದರು. ಅದಕ್ಕೆ ದಿಟ್ಟ ಉತ್ತರವನ್ನೇ ಮಿಯಾ ಖಲೀಫಾ ಟ್ವಿಟ್ಟರ್‌ನಲ್ಲಿ ನೀಡಿದರು. ಇದೀಗ ಇದ್ದಕ್ಕಿಂದ್ದಂತೆ ನಟಿ ಪ್ರಿಯಾಂಕಾ ಚೋಪ್ರಾ ವಿರುದ್ಧ ಅಸಮಾಧಾನ ಹೊರಹಾಕಿದ್ದಾರೆ ಮಿಯಾ ಖಲೀಫಾ.
ಕೇಂದ್ರ ಸರ್ಕಾರದ ಪರ ಸೆಲೆಬ್ರಿಟಿಗಳ ಟ್ವೀಟ್: ತನಿಖೆಗೆ ಮಹಾರಾಷ್ಟ್ರ ಸರ್ಕಾರ ಆದೇಶ
ನಟಿ ಪ್ರಿಯಾಂಕಾ ಚೋಪ್ರಾ, ದೆಹಲಿಯ ರೈತ ಪ್ರತಿಭಟನೆ ಬಗ್ಗೆ ತುಟಿ ಬಿಚ್ಚುತ್ತಿಲ್ಲ. ರೈತರಿಗೆ ಬೆಂಬಲ ವ್ಯಕ್ತಪಡಿಸುತ್ತಿಲ್ಲ ಎಂಬುದೇ ಮಿಯಾ ಖಲೀಫಾ ಅಸಮಾಧಾನಕ್ಕೆ ಕಾರಣ.
ಈ ಬಗ್ಗೆ ಟ್ವೀಟ್ ಮಾಡಿರುವ ಮಿಯಾ ಖಲೀಫಾ, 'ಶ್ರೀಮತಿ ಜೋನಸ್ (ಪ್ರಿಯಾಂಕಾ ಚೋಪ್ರಾ ಪತಿ ಹೆಸರು ನಿಕ್ ಜೋನಸ್) ಏನಾದರೂ ಸದ್ದು ಮಾಡುತ್ತಾರೆಯೇ? ಅಥವಾ ಬೈರೋತ್ ದುರಂತ ಆದಾಗ ಶಕೀರಾ ಮಾಡಿದಂತೆ ಸುಮ್ಮನಾಗಿಬಿಡುತ್ತಾರೆಯೇ? ಎಂದು ಮಿಯಾ ಖಲೀಫಾ ಪ್ರಶ್ನೆ ಮಾಡಿದ್ದಾರೆ.
ರೈತರನ್ನು ಭಯೋತ್ಪಾದಕರೆಂದ ಕಂಗನಾ ವಿರುದ್ಧ ಬೆಳಗಾವಿಯಲ್ಲಿ ದೂರು

ಮೊದಲ ಟ್ವೀಟ್ ಮಾಡಿದ್ದು ಪ್ರಿಯಾಂಕಾ ಚೋಪ್ರಾ
ಸತ್ಯವೆಂದರೆ, ದೆಹಲಿ ರೈತ ಪ್ರತಿಭಟನೆ ಬಗ್ಗೆ ಮೊದಲು ಟ್ವೀಟ್ ಮಾಡಿದ ಬಾಲಿವುಡ್ ನಟಿ ಪ್ರಿಯಾಂಕಾ ಚೋಪ್ರಾ. ರೈತರ ಪ್ರತಿಭಟನೆ ವಿರುದ್ಧವಿದ್ದ ನಟಿ ಕಂಗನಾ ರಣೌತ್ ಪ್ರಿಯಾಂಕಾ ವಿರುದ್ಧ ಸರಣಿ ಟ್ವೀಟ್‌ಗಳನ್ನು ಆಗ ಮಾಡಿದ್ದರು.

ರೈತರ ಬಗ್ಗೆ ಟ್ವೀಟ್ ಮಾಡಿದ್ದ ಪ್ರಿಯಾಂಕಾ ಚೋಪ್ರಾ
'ನಮ್ಮ ರೈತರು ಭಾರತದ ಆಹಾರ ಸೈನಿಕರು. ಅವರ ಭಯವನ್ನು ಹೋಗಲಾಡಿಸಬೇಕಾಗಿದೆ. ಅವರ ಆಶಯಗಳನ್ನು ಈಡೇರಿಸಬೇಕಾಗಿದೆ. ಪ್ರವರ್ಧಮಾನಕ್ಕೆ ಬರುತ್ತಿರುವ ಪ್ರಜಾಪ್ರಭುತ್ವವಾಗಿ, ಈ ಬಿಕ್ಕಟ್ಟುಗಳನ್ನು ಶೀಘ್ರದಲ್ಲಿಯೇ ಪರಿಹರಿಸಿಕೊಳ್ಳಬೇಕಿದೆ' ಎಂದು ಪ್ರಿಯಾಂಕಾ ಚೋಪ್ರಾ, ರೈತರ ಬೆಂಬಲದಲ್ಲಿ ಟ್ವೀಟ್ ಮಾಡಿದ್ದರು.

ಪ್ರಿಯಾಂಕಾ ಚೋಪ್ರಾ ವಿರುದ್ಧ ಹರಿಹಾಯ್ದಿದ್ದ ಕಂಗನಾ
ನಟಿ ಪ್ರಿಯಾಂಕಾ ಚೋಪ್ರಾ ಮತ್ತು ದಿಲ್ಜಿತ್ ದುಸ್ಸಾಂಜ್ ಅವರುಗಳು ರೈತರನ್ನು ಪ್ರಚೋದಿಸುವ, ಕೆರಳಿಸುವ ಯತ್ನವನ್ನು ಮಾಡುತ್ತಿದ್ದಾರೆ ಎಂದು ನಟಿ ಕಂಗನಾ ರಣೌತ್ ಆರೋಪ ಮಾಡಿದ್ದರು. ಆ ನಂತರ ನಟ ದಿಲ್ಜಿತ್ ದುಸ್ಸಾಂಜ್ ಹಾಗೂ ಕಂಗನಾ ನಡುವೆ ಟ್ವೀಟ್ ವಾರ್ ನಡೆದಿತ್ತು.
ಬೆನ್ನುಮೂಳೆ ಇಲ್ಲದ ಬಾಲಿವುಡ್ ಎಂದ ನಟಿ ರಮ್ಯಾ

ಹಲವರಿಂದ ಬೆಂಬಲ ದೊರಕಿದೆ
ನಟಿ ಮಿಯಾ ಖಲೀಫಾ, ಪಾಪ್ ತಾರೆ ರಿಹಾನ್ನ, ಯೂಟ್ಯೂಬ್ ತಾರೆ ಅಮಂಡಾ ಕೆರ್ನಿ, ಪರಿಸರ ಹೋರಾಟಗಾರ್ತಿ ಗ್ರೆಟಾ ಥೆನ್‌ಬರ್ಗ್, ಅಮೆರಿಕದ ಉಪಾಧ್ಯಕ್ಷೆ ಕಮಲಾ ಹ್ಯಾರಿಸ್ ಸಂಬಂಧಿ ಮೀನಾ ಹ್ಯಾರಿಸ್ ಇನ್ನೂ ಹಲವಾರು ಅಂತರಾಷ್ಟ್ರಿಯ ಸೆಲೆಬ್ರಿಟಿಗಳು ರೈತರ ಪ್ರತಿಭಟನೆಗೆ ಬೆಂಬಲ ಸೂಚಿಸಿದ್ದಾರೆ.