»   » ಆಸ್ಕರ್ ಅಕಾಡೆಮಿಗೆ ಅಮೀರ್, ಬಿಗ್‌ಬಿ, ಐಶೂ, ಪ್ರಿಯಾಂಕಾ'ಗೆ ಆಹ್ವಾನ

ಆಸ್ಕರ್ ಅಕಾಡೆಮಿಗೆ ಅಮೀರ್, ಬಿಗ್‌ಬಿ, ಐಶೂ, ಪ್ರಿಯಾಂಕಾ'ಗೆ ಆಹ್ವಾನ

Posted By:
Subscribe to Filmibeat Kannada

ಪ್ರತಿಷ್ಠಿತ ಆಸ್ಕರ್ ಅಕಾಡೆಮಿಗೆ 57 ದೇಶಗಳ 774 ಚಿತ್ರರಂಗದ ಪ್ರಮುಖರಿಗೆ ಆಹ್ವಾನ ನೀಡಲಾಗಿದೆ. ವಿಶೇಷ ಅಂದ್ರೆ ಅವರುಗಳಲ್ಲಿ ಬಾಲಿವುಡ್ ನ ಪ್ರಮುಖ ನಟ-ನಟಿಯರು ಮತ್ತು ನಿರ್ದೇಶಕರುಗಳು ಇದ್ದಾರೆ.

ಪ್ರಸಕ್ತ ಸಾಲಿನ ಆಸ್ಕರ್ ಅಕಾಡೆಮಿ ಸದಸ್ಯತ್ವಕ್ಕೆ ಅಹ್ವಾನಿತರಾಗಿರುವ ಈ 774 ಪ್ರಮುಖರು ಆಸ್ಕರ್ ಪ್ರಶಸ್ತಿಗಳಿಗೆ ಸಿನಿಮಾ ಆಯ್ಕೆಗೆ ಮತ ಚಲಾಯಿಸುವ ಅವಕಾಶ ಪಡೆಯಲಿದ್ದಾರೆ. ಭಾರತದಿಂದ ಆಸ್ಕರ್ ಅಕಾಡೆಮಿಗೆ ಅಹ್ವಾನಿತರಾದವರ ಡೀಟೆಲ್ಸ್ ಇಲ್ಲಿದೆ ನೋಡಿ

ಆಸ್ಕರ್ ಅಕಾಡೆಮಿಗೆ ಅಹ್ವಾನಿತರಾದ ಬಾಲಿವುಡ್ ಸೆಲೆಬ್ರಿಟಿಗಳು

ಬಾಲಿವುಡ್ ತಾರೆಯರಾದ ಪ್ರಿಯಾಂಕ ಚೋಪ್ರಾ, ಐಶ್ವರ್ಯ ರೈ ಬಚ್ಚನ್, ಅಮೀರ್ ಖಾನ್, ಸಲ್ಮಾನ್ ಖಾನ್, ಅಮಿತಾಬ್ ಬಚ್ಚನ್, ದೀಪಿಕಾ ಪಡುಕೋಣೆ ಮತ್ತು ಇಫ್ರಾನ್ ಖಾನ್ ರವರಿಗೆ ಅಹ್ವಾನ ನೀಡಲಾಗಿದೆ. ಆದರೆ ಮುಖ್ಯವಾಗಿ ಶಾರುಖ್ ಖಾನ್ ರವರಿಗೆ ಅಹ್ವಾನ ನೀಡಿಲ್ಲ.

ನಿರ್ದೇಶಕರು

ಆಸ್ಕರ್ ಅಕಾಡೆಮಿ ಅಹ್ವಾನ ನೀಡಿರುವ ಪಟ್ಟಿಯಲ್ಲಿ ಭಾರತದ ನಿರ್ದೇಶಕರಾದ ಮ್ರಿನಾಲ್ ಸೇನ್, ಬುದ್ಧದೇವ್ ದಾಸ್‌ಗುಪ್ತಾ, ಗೌತಮ್ ಘೋಶ್, ಚಿತ್ರಕತೆಗಾರ ಸೂನಿ ತಾರಾಪೊರಿವಾಲ, ಸಾಕ್ಷ್ಯಚಿತ್ರ ನಿರ್ದೇಶಕ ಆನಂದ ಪಟವರ್ಧನ, ವಸ್ತ್ರ ವಿನ್ಯಾಸಕ ಅರ್ಜುನ್ ಭಾಸಿನ್, ಸೌಂಡ್ ಡಿಸೈನರ್ ಅಮ್ರಿತ್ ದತ್ತ ರವರ ಹೆಸರುಗಳು ಇವೆ.

ಹಾಲಿವುಡ್ ನಲ್ಲಿ ಆಹ್ವಾನ ಪಡೆದ ಪ್ರಮುಖರು

ಹಾಲಿವುಡ್ ಚಿತ್ರರಂಗದ ಕ್ರಿಸ್ ಹೇಮ್ಸ್‌ವರ್ತ್, ಕ್ರಿಸ್ ಎವನ್ಸ್, ಗಾಲ್ ಗ್ಯಾಡೊಟ್, ಡ್ವೇನ್ ಜಾನ್ಸನ್, ರಿಜ್ ಅಹ್ಮೆದ್, ಟರ್ರಿ ಕ್ರಿವ್ಸ್, ಕ್ರಿಸ್ ಪ್ರಟ್ಟ್, Anna Faris, ಡೊನಾಲ್ಡ್ ಗ್ಲೊವರ್ ಮತ್ತು Zoe Kravitz ರವರು ಅಹ್ವಾನ ಪಡೆದಿದ್ದಾರೆ.

ಯಾವ ಎಲ್ಲಾ ವಿಭಾಗದ ಪ್ರಮುಖರಿಗೆ ಅಹ್ವಾನ ನೀಡಲಾಗಿದೆ

ಈ ಹಿಂದಿನ ವರ್ಷದಲ್ಲಿ ಚಿತ್ರರಂಗದ 683 ಪ್ರಮುಖ ವ್ಯಕ್ತಿಗಳಿಗೆ ಆಸ್ಕರ್ ಅಕಾಡೆಮಿ ಸದಸ್ಯತ್ವಕ್ಕೆ ಅಹ್ವಾನ ನೀಡಲಾಗಿತ್ತು. ಆದರೆ ಪ್ರಸಕ್ತ ಸಾಲಿನಲ್ಲಿ ನಟರು, ಕಾಸ್ಟಿಂಗ್ ಡೈರೆಕ್ಟರ್, ಡಿಸೈನರ್, ವಸ್ತ್ರ ವಿನ್ಯಾಸಕಾರರು, ಸಾಕ್ಷ್ಯಚಿತ್ರ ನಿರ್ದೇಶಕರು, ಚಿತ್ರ ಸಂಕಲನಕಾರರು ಮತ್ತು ಕಾರ್ಯನಿರ್ವಾಹಕರು ಸೇರಿದ ಏಳು ವಿವಿಧ ವಿಭಾಗಗಳಲ್ಲಿನ ಪ್ರಮುಖ ವ್ಯಕ್ತಿಗಳಿಗೆ ಅಹ್ವಾನ ನೀಡಲಾಗಿದೆ.

English summary
The prestigious Oscar’s body has invited 774 members for Academy’s class of 2017 and interestingly like previous year, this time around our Bollywood celebs have also joined the list.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada