»   » ಪಾಪ್ ಲೋಕಕ್ಕೆ ನವತಾರೆ, ಮೈಕೇಲ್ ಜಾಕ್ಸನ್ ಪುತ್ರ

ಪಾಪ್ ಲೋಕಕ್ಕೆ ನವತಾರೆ, ಮೈಕೇಲ್ ಜಾಕ್ಸನ್ ಪುತ್ರ

By: ಉದಯರವಿ
Subscribe to Filmibeat Kannada

ಪಾಪ್ ಲೋಕದ ನೇಸರ ಮೈಕೇಲ್ ಜಾಕ್ಸನ್ ಮರೆಗೆ ಸರಿದ ಮೇಲೆ ಅವರ ಅಪಾರ ಅಭಿಮಾನಿ ಬಳಕ ಶೋಕಸಾಗರದಲ್ಲಿ ಮುಳುಗಿದ್ದು ಗೊತ್ತೇ ಇದೆ. ಜಾಕ್ಸನ್ ನಿಧನರಾಗಿ ಏಳು ವರ್ಷಗಳು ಕಳೆದರೂ ಅವರ ಅಭಿಮಾನಿಗಳ ಮನಸ್ಸಿನಲ್ಲಿ ಮಾತ್ರ ನೆನಪುಗಳು ಇನ್ನೂ ಜೀವಂತವಾಗಿವೆ.

ಮೈಕೇಲ್ ಜಾಕ್ಸನ್ ಬಗೆಗಿನ ತಾಜಾ ಸುದ್ದಿಯೊಂದು ಅವರ ಅಭಿಮಾನಿಗಳ ಮನಸ್ಸಿನಲ್ಲಿ ಮತ್ತೆ ಚಿತ್ತಾರ ಬಿಡಿಸಿದೆ. ಮೈಕೇಲ್ ಜಾಕ್ಸನ್ ವಾರಸುದಾರ ಪ್ರಿನ್ಸ್ ಮೇಕೇಲ್ ಜಾಕ್ಸನ್ 1 ಸಂಗೀತ ಸಾಗರಕ್ಕೆ ಅಡಿಯಿಡುತ್ತಿದ್ದಾರೆ. ಶೀಘ್ರದಲ್ಲೇ ಮ್ಯೂಸಿಕ್ ಆಲ್ಬಂ ಒಂದರ ಮೂಲಕ ಎಂಟ್ರಿ ಕೊಡುತ್ತಿದ್ದಾರೆ. [ಮದುವೆಗೂ ಮುನ್ನವೆ ಗರ್ಭಿಣಿಯಾದ ಜಾಕ್ಸನ್ ಪುತ್ರಿ]

Prince Michael Jackson's son working with Justin Bieber

ಈಗಾಗಲೆ ಪಾಪ್ ಸಂಗೀತ ಕ್ಷೇತ್ರದಲ್ಲಿ ಗುರುತಿಸಿಕೊಂಡಿರುವ ಯುವ ಗಾಯಕ ಜಸ್ಟೀನ್ ಬೀಬರ್ ಜೊತೆಗೂಡಿ ಪ್ರಿನ್ಸ್ ಒಂದು ಸಂಗೀತ ಆಲ್ಬಂ ಹೊರತರುತ್ತಿದ್ದಾರೆ. ಇದನ್ನು ಸ್ವತಃ ಜಾಕ್ಸನ್ ಕುಟುಂಬ ಮೂಲಗಳು ಖಚಿತಪಡಿಸಿವೆ.

ಇನ್ನೂ ಹದಿನೇಳರ ಹರಿಯದ ಪ್ರಿನ್ಸ್ ಹಾಗೂ ಇಪ್ಪತ್ತರ ಪ್ರಾಯದ ಬೀಬರ್ ಜೊತೆಯಾಗಿ ಒಂದು ಮ್ಯೂಸಿಕ್ ಆಲ್ಬಂ ರೂಪಿಸುವ ಕೆಲಸದಲ್ಲಿ ಬಿಜಿಯಾಗಿದ್ದಾರೆ ಎಂಬ ಮಾಹಿತಿಯನ್ನು ನೀಡಲಾಗಿದೆ. ಮೈಕೇಲ್ ಜಾಕ್ಸನ್ ಅವರ ಜ್ಯೇಷ್ಠ ಪುತ್ರ ಪ್ರಿನ್ಸ್.

ಪ್ರಿನ್ಸ್ ಹಲವಾರು ಟಿವಿ ಕಾರ್ಯಕ್ರಮಗಳಲ್ಲಿ ಕಾಣಿಸಿಕೊಂಡಿದ್ದರೂ ಪಾಪ್ ಲೋಕದಲ್ಲಿ ಎಂದೂ ಅವರ ಕೇಳಿಸಿರಲಿಲ್ಲ. ಈಗ ಇದೇ ಮೊದಲ ಬಾರಿಗೆ ಪ್ರಿನ್ಸ್ ಹೆಸರು ಕೇಳಿಬಂದಿದ್ದು ಜಾಕ್ಸನ್ ಅಭಿಮಾನಿಗಳಿಗೆ ನಿಜಕ್ಕೂ ಕುಣಿದಾಡುವ ಸಮಯ.

English summary
King of Pop Michael Jackson's son Prince is reportedly working on new music with singer friend Justin Bieber. Prince is the eldest child of pop legend Michael Jackson.
Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada