Don't Miss!
- News
ಸಿದ್ದರಾಮಯ್ಯಗೆ ಅವರ ತಪ್ಪು ಎತ್ತಿ ತೋರಿಸಿದಕ್ಕೆ ಸಿಟ್ಟು ಬಂದಿದೆ- ಸಚಿವ ಡಾ.ಕೆ.ಸುಧಾಕರ್
- Technology
ಸೋನಿ ಸಂಸ್ಥೆಯಿಂದ ಹೊಸ ಮಾದರಿಯ ವಾಕ್ಮ್ಯಾನ್ ಲಾಂಚ್!..ಜಬರ್ದಸ್ತ್ ಫೀಚರ್ಸ್!
- Sports
ಟೀಮ್ ಇಂಡಿಯಾಗೆ ಹೊಸ ತಲೆನೋವು: ಮಂಕಾಗಿದ್ದಾರೆ ಭರವಸೆ ಮೂಡಿಸಿದ್ದ ಆಟಗಾರರು
- Automobiles
130 km ರೇಂಜ್ ನೀಡುವ 'ecoDryft' ಬೈಕ್ ಬಿಡುಗಡೆ... .ರೂ.99,999ಕ್ಕೆ ಸಿಗುತ್ತೆ!
- Lifestyle
ಒಂಟಿಯಾಗಿ ಅಂಟಾರ್ಟಿಕಾ ಯಾತ್ರೆ ಮಾಡಿದ ಮೊದಲ ಮಹಿಳೆ: ಕ್ಯಾಪ್ಟನ್ ಪ್ರೀತ್ ಚಾಂದಿ, ಇವರ ಸ್ಟೋರಿಯೇ ಸ್ಪೂರ್ತಿದಾಯಕ
- Finance
Budget 2023 Expectations: ಸಾಮಾನ್ಯ ಜನರ ಬಜೆಟ್ ನಿರೀಕ್ಷೆಗಳೇನು?
- Education
KVS Recruitment 2022 : ಕೇಂದ್ರೀಯ ವಿದ್ಯಾಲಯ ಸಂಗತನ್ ದಲ್ಲಿ 13404 ಹುದ್ದೆಗಳ ನೇಮಕಾತಿ
- Travel
ಯಾವುದೇ ಚಿಂತೆ ಇಲ್ಲದೆ ಸುಖಕರ ಪ್ರಯಾಣ ಅನುಭವಿಸಲು ಇಲ್ಲಿದೆ ಸಲಹೆಗಳು
ನಿಕ್ ಜೊನಾಸ್-ಪ್ರಿಯಾಂಕಾ ಮದುವೆ ನಡೆಯುವುದು 'ಈ' ದಿನ.?
ಬಾಲಿವುಡ್ ನಿಂದ ಹಿಡಿದು ಹಾಲಿವುಡ್ ವರೆಗೂ ಟಾಪ್ ಟ್ರೆಂಡಿಂಗ್ ನಲ್ಲಿ ಇರುವ ಹೆಸರು ಅಂದ್ರೆ ಅದು ಪ್ರಿಯಾಂಕಾ ಛೋಪ್ರಾ. ವೃತ್ತಿಗಿಂತ ಹೆಚ್ಚಾಗಿ ವೈಯಕ್ತಿಕ ವಿಚಾರಕ್ಕೆ ಸದ್ದು ಮಾಡುತ್ತಿರುವ ಪ್ರಿಯಾಂಕಾ ಛೋಪ್ರಾ ಇದೀಗ ದಿನಕ್ಕೊಂದು ಸುದ್ದಿ ಮೂಲಕ ಎಲ್ಲರ ನಾಲಿಗೆ ಮೇಲೂ ನುಲಿದಾಡುತ್ತಿದ್ದಾರೆ.
ಹಾಗ್ನೋಡಿದ್ರೆ, ಪ್ರಿಯಾಂಕಾ ಛೋಪ್ರಾ ಬಾಲಿವುಡ್ ಬೆಳ್ಳಿತೆರೆ ಮೇಲೆ ಮಿನುಗಿ ಮೂರು ವರ್ಷ ಕಳೆದಿದೆ. ಸಲ್ಮಾನ್ ಖಾನ್ ಅಭಿನಯದ 'ಭಾರತ್' ಸಿನಿಮಾದಲ್ಲಿ ಪ್ರಿಯಾಂಕಾ ಛೋಪ್ರಾ ಅಭಿನಯಿಸಬೇಕಿತ್ತು. ಆದ್ರೆ, ಕೊನೆಯ ಕ್ಷಣದಲ್ಲಿ ಚಿತ್ರತಂಡದಿಂದ ಪ್ರಿಯಾಂಕಾ ಹೊರಬಂದಿದ್ದಾರೆ.
ಅದಕ್ಕೆ ಕಾರಣ 'ತುಂಬಾ ಸ್ಪೆಷಲ್' ಎನ್ನುತ್ತಾ 'ಭಾರತ್' ನಿರ್ದೇಶಕ ಅಲಿ ಅಬ್ಬಾಸ್ ಝಫರ್ ಮಾಡಿರುವ ಟ್ವೀಟ್ ಚರ್ಚೆಗೆ ಗ್ರಾಸವಾಗಿದೆ. ಪ್ರಿಯಾಂಕಾ-ನಿಕ್ ಮದುವೆ ನಿಕ್ಕಿ ಆಗಿರುವ ಕಾರಣಕ್ಕೆ, 'ಭಾರತ್' ಚಿತ್ರದಿಂದ ಔಟ್ ಆಗಿದ್ದಾರೆ ಎನ್ನುವುದು ಕೆಲವರ ವಾದ.
ಹೀಗಿರುವಾಗಲೇ, ಹೊಸ ಸುದ್ದಿಯೊಂದು ಹೊರಬಿದ್ದಿದೆ. ಪ್ರಿಯಾಂಕಾ ಛೋಪ್ರಾ-ನಿಕ್ ಜೊನಾಸ್ ಮದುವೆ ದಿನಾಂಕ ನಿಗದಿ ಆಗಿದ್ಯಂತೆ. ಹಾಗಾದ್ರೆ, ಅವರಿಬ್ಬರ ವಿವಾಹ ಮಹೋತ್ಸವ ನಡೆಯುವುದು ಯಾವಾಗ.? ಇಲ್ಲಿದೆ ನೋಡಿ ಸಂಪೂರ್ಣ ಮಾಹಿತಿ...

ಪ್ರಿಯಾಂಕಾ-ನಿಕ್ ಮದುವೆ ಯಾವಾಗ.?
ವರದಿಗಳ ಪ್ರಕಾರ, ಪ್ರಿಯಾಂಕಾ ಛೋಪ್ರಾ-ನಿಕ್ ಜೊನಾಸ್ ವಿವಾಹ ಮಹೋತ್ಸವ ಸೆಪ್ಟೆಂಬರ್ 16, 2018 ರಂದು ನಡೆಯಲಿದೆ. ಮದುವೆಗಾಗಿ ಈಗಾಗಲೇ ಒಡವೆ-ವಸ್ತ್ರವನ್ನ ಕೊಂಡುಕೊಂಡಿದ್ದಾರಂತೆ ನಟಿ ಪ್ರಿಯಾಂಕಾ ಛೋಪ್ರಾ.
ಅಂತೂ
ನಟಿ
ಪ್ರಿಯಾಂಕಾ
ಸಿಹಿ
ಸುದ್ದಿ
ಕೊಡುವ
ಸಮಯ
ಹತ್ತಿರ
ಬಂತು.!

ದಿನದ ವಿಶೇಷ ಏನು.?
ಸೆಪ್ಟೆಂಬರ್ 16 ರಂದೇ ಯಾಕೆ ಅಂದ್ರೆ, ಅವತ್ತು ನಿಕ್ ಜೊನಾಸ್ ಜನ್ಮದಿನ. ನಿಕ್ ಹುಟ್ಟುಹಬ್ಬದ ದಿನವೇ ಮದುವೆ ಆಗಲು ಇಬ್ಬರೂ ತೀರ್ಮಾನಿಸಿದ್ದಾರಂತೆ. ಮದುವೆಗಾಗಿ ಸಕಲ ತಯಾರಿಯಲ್ಲಿ ಜೋಡಿ ತೊಡಗಿದ್ದಾರೆ ಎನ್ನಲಾಗಿದೆ.
ನಟಿ
ಪ್ರಿಯಾಂಕಾ
ಛೋಪ್ರಾ
ಬಾಯ್
ಫ್ರೆಂಡ್
ಇವರೇನಾ.?

ಪ್ರಿಯಾಂಕಾ ಜನ್ಮದಿನದಂದು ಎಂಗೇಜ್ಮೆಂಟ್ ಆಗ್ಹೋಗಿದೆ.!
ಈ ವರ್ಷದ ಪ್ರಿಯಾಂಕಾ ಛೋಪ್ರಾ ಜನ್ಮದಿನದಂದೇ (ಜುಲೈ 18) ಆಕೆಯ ಕೈಗೆ ಉಂಗುರ ತೊಡಿಸಿ ನಿಕ್ ಜೊನಾಸ್ ಎಂಗೇಜ್ ಆದರು ಎಂದು ಸುದ್ದಿತಾಣವೊಂದು ವರದಿ ಮಾಡಿದೆ. ಪ್ರಿಯಾಂಕಾ ಛೋಪ್ರಾ ಬರ್ತಡೇ ದಿನ ನಿಶ್ಚಿತಾರ್ಥ ಆಗಿರುವ ಕಾರಣ, ನಿಕ್ ಜೊನಾಸ್ ಹುಟ್ಟುಹಬ್ಬದಂದು ಮದುವೆ ನಡೆಯಲಿದೆ ಎನ್ನುವುದು ಹಲವರ ಊಹೆ.
ನಿಕ್
ಜೊನಾಸ್
ಜೊತೆಗೆ
ನಟಿ
ಪ್ರಿಯಾಂಕಾ
ಲಿವ್-ಇನ್
ರಿಲೇಶನ್
ಶಿಪ್.?

ತುಟಿಕ್ ಪಿಟಿಕ್ ಎನ್ನದ ಪ್ರಿಯಾಂಕಾ
ನಿಶ್ಚಿತಾರ್ಥ-ಮದುವೆ ಬಗ್ಗೆ ಇಷ್ಟೆಲ್ಲಾ ಸುದ್ದಿ ಕೇಳಿಬರುತ್ತಿದ್ದರೂ, ನಿಕ್ ಜೊನಾಸ್ ಆಗಲಿ ಪ್ರಿಯಾಂಕಾ ಛೋಪ್ರಾ ಆಗಲಿ ತುಟಿಕ್ ಪಿಟಿಕ್ ಎಂದಿಲ್ಲ. ಮದುವೆ ಬಗ್ಗೆ ಪ್ರಿಯಾಂಕಾ ಕುಟುಂಬದವರೂ ಕೂಡ ಮಾಹಿತಿ ಬಿಟ್ಟು ಕೊಟ್ಟಿಲ್ಲ.

ಯಾರೀ ನಿಕ್ ಜೊನಾಸ್.?
25 ವರ್ಷದ ನಿಕ್ ಜೊನಾಸ್ ಅಮೇರಿಕಾದ ಗಾಯಕ ಹಾಗೂ ನಟ. 'ಕ್ಯಾಂಪ್ ರಾಕ್', 'ಮಿಸ್ಟರ್ ಸನ್ ಶೈನ್', 'ಸ್ಮ್ಯಾಶ್' ಮುಂತಾದ ಟೆಲಿವಿಷನ್ ಫಿಲ್ಮ್ ಗಳಲ್ಲಿ ನಿಕ್ ಜೋನಾಸ್ ಕಾಣಿಸಿಕೊಂಡಿದ್ದಾರೆ. ಗಾಯಕನಾಗಿ ಹಲವಾರು ಆಲ್ಬಂಗಳನ್ನು ನಿಕ್ ಜೋನಾಸ್ ಹೊರತಂದಿದ್ದಾರೆ. ನಟಿ ಪ್ರಿಯಾಂಕಾ ಛೋಪ್ರಾಗಿಂತ ನಿಕ್ ಜೊನಾಸ್ ಹತ್ತು ವರ್ಷ ಕಿರಿಯ.