For Quick Alerts
  ALLOW NOTIFICATIONS  
  For Daily Alerts

  ನಿಕ್ ಹೆಗಲ ಮೇಲೆ ಕೈ ಹಾಕಿರುವ ಪ್ರಿಯಾಂಕಾ ಫೋಟೋ ಒರಿಜಿನಲ್ ಅಲ್ಲವೇ ಅಲ್ಲ.!

  By Harshitha
  |

  ಕೆಲವೊಂದು ಫೋಟೋಗಳೇ ಹಾಗೆ... ನಿಜವಾದ ಫೋಟೋಗಳಿಗೂ, ಫೋಟೋಶಾಪ್ ನಿಂದ ಕ್ರಿಯೇಟ್ ಆದ ಇಮೇಜ್ ಗಳಿಗೂ ವ್ಯತ್ಯಾಸವೇ ಗೊತ್ತಾಗುವುದಿಲ್ಲ.

  ಸದ್ಯ ಪ್ರಿಯಾಂಕಾ ಛೋಪ್ರಾ ಹಾಗೂ ನಿಕ್ ಜೊನಾಸ್ ಒಟ್ಟಿಗೆ ಇರುವ ಫೋಟೋವನ್ನೇ ತೆಗೆದುಕೊಳ್ಳಿ.. ಆ ಫೋಟೋ ನೋಡಿದ ಕೂಡಲೆ, ಡ್ರೆಸ್ಸಿಂಗ್ ರೂಮ್ ನಲ್ಲಿ ಪ್ರಿಯಾಂಕಾ ಹಾಗೂ ನಿಕ್ ಒಟ್ಟಿಗೆ ಫೋಟೋ ತೆಗೆದುಕೊಂಡಿರುವ ಹಾಗೆ ಕಾಣುತ್ತೆ.

  ನಿಕ್ ಜೊನಾಸ್ ಹೆಗಲ ಮೇಲೆ ಕೈ ಹಾಕಿ ಪ್ರಿಯಾಂಕಾ ಛೋಪ್ರಾ ಫೋಟೋ ಕ್ಲಿಕ್ ಮಾಡಿಕೊಂಡಿರುವ ಹಾಗೆ ಗೋಚರಿಸುತ್ತೆ. ಆದ್ರೆ, ವಾಸ್ತವ ಇದಲ್ಲ. ಅಸಲಿಗೆ, ಡ್ರೆಸ್ಸಿಂಗ್ ರೂಮ್ ನಲ್ಲಿ ಪ್ರಿಯಾಂಕಾ ಹಾಗೂ ನಿಕ್ ಒಟ್ಟಿಗೆ ಫೋಟೋ ತೆಗೆಸಿಕೊಂಡಿಲ್ಲ. ಫೋಟೋಶಾಪ್ ನಿಂದ ಇಬ್ಬರನ್ನ ಅಕ್ಕ-ಪಕ್ಕ ನಿಲ್ಲಿಸಲಾಗಿದೆ ಅಷ್ಟೇ.!

  ನಿಮ್ಮ ಕಣ್ಣುಗಳನ್ನೇ ನೀವು ನಂಬಲ್ಲ ಅಂದ್ರೆ, ನಿಜವಾದ ಫೋಟೋ ತೋರಿಸ್ತೀವಿ ನೋಡಿ....

  ಇದೇ ನಿಜವಾದ ಫೋಟೋ.!

  ಇದೇ ನಿಜವಾದ ಫೋಟೋ.!

  ನಿಕ್ ಜೊನಾಸ್ ಕಾನ್ಸರ್ಟ್ ನಲ್ಲಿ ಪಾಲ್ಗೊಳ್ಳಲು ಪ್ರಿಯಾಂಕಾ ಛೋಪ್ರಾ ಸಿಂಗಾಪುರ್ ಗೆ ಹೋಗಿದ್ದಾಗ, ಇಂಡೋನೇಷಿಯಾದ ಸಿಂಗರ್ Afgansyah Reza ಜೊತೆ ಡ್ರೆಸ್ಸಿಂಗ್ ರೂಮ್ ನಲ್ಲಿ ಫೋಟೋ ಕ್ಲಿಕ್ ಮಾಡಿಕೊಂಡಿದ್ದರು.

  ಅಂತೂ ನಟಿ ಪ್ರಿಯಾಂಕಾ ಸಿಹಿ ಸುದ್ದಿ ಕೊಡುವ ಸಮಯ ಹತ್ತಿರ ಬಂತು.!ಅಂತೂ ನಟಿ ಪ್ರಿಯಾಂಕಾ ಸಿಹಿ ಸುದ್ದಿ ಕೊಡುವ ಸಮಯ ಹತ್ತಿರ ಬಂತು.!

  ಇನ್ನೊಂದು ಫೋಟೋ

  ಇನ್ನೊಂದು ಫೋಟೋ

  ಇಂಡೋನೇಷಿಯಾದ ಸಿಂಗರ್ Afgansyah Reza ಜೊತೆಗೆ ನಿಕ್ ಜೊನಾಸ್ ಕೂಡ ಫೋಟೋ ಕ್ಲಿಕ್ ಮಾಡಿಸಿಕೊಂಡಿದ್ದರು. ಈ ಎರಡು ಫೋಟೋ ಮರ್ಜ್ ಆಗಿದ್ದು ಫೋಟೋಶಾಪ್ ನಿಂದ.

  ನಟಿ ಪ್ರಿಯಾಂಕಾ ಛೋಪ್ರಾ ಬಾಯ್ ಫ್ರೆಂಡ್ ಇವರೇನಾ.?ನಟಿ ಪ್ರಿಯಾಂಕಾ ಛೋಪ್ರಾ ಬಾಯ್ ಫ್ರೆಂಡ್ ಇವರೇನಾ.?

  ಫೋಟೋಶಾಪ್ ಟ್ರಿಕ್

  ಫೋಟೋಶಾಪ್ ಟ್ರಿಕ್

  ಎರಡು ಫೋಟೋಗಳನ್ನು ಕ್ರಾಪ್ ಮಾಡಿ, ಇಂಡೋನೇಷಿಯಾದ ಸಿಂಗರ್ Afgansyah Reza ರನ್ನ ಕಟ್ ಮಾಡಿ ಪ್ರಿಯಾಂಕಾ ಹಾಗೂ ನಿಕ್ ರನ್ನ ಅಕ್ಕ-ಪಕ್ಕ ನಿಲ್ಲಿಸಲು ಸಾಧ್ಯವಾಗಿದ್ದು ಫೋಟೋಶಾಪ್ ನಿಂದ. ಇದು ಗೊತ್ತಾಗದೆ, ಪ್ರಿಯಾಂಕಾ-ನಿಕ್ ಕ್ಲೋಸ್ ಆಗಿ ನಿಂತಿರುವ ಫೋಟೋ ಇದೇ ಎಂದುಕೊಂಡು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿತ್ತು.

  ಮದುವೆ ಆಗ್ತಾರಾ ಪ್ರಿಯಾಂಕಾ-ನಿಕ್.?

  ಮದುವೆ ಆಗ್ತಾರಾ ಪ್ರಿಯಾಂಕಾ-ನಿಕ್.?

  ವರದಿಗಳ ಪ್ರಕಾರ, ಪ್ರಿಯಾಂಕಾ ಛೋಪ್ರಾ-ನಿಕ್ ಜೊನಾಸ್ ನಿಶ್ಚಿತಾರ್ಥ ಮುಗಿದು ಹೋಗಿದೆ. ಇನ್ನೆರಡು ಮೂರು ತಿಂಗಳಲ್ಲಿ ಮದುವೆ ನಡೆಯುವ ಸಾಧ್ಯತೆ ಇದೆ. ಮದುವೆಗಾಗಿಯೇ ಸಲ್ಮಾನ್ ಖಾನ್ ಅಭಿನಯದ 'ಭಾರತ್' ಚಿತ್ರದಿಂದ ಪ್ರಿಯಾಂಕಾ ಹೊರಬಂದರು ಎನ್ನಲಾಗಿದೆ. ಅತ್ತ ಪ್ರಿಯಾಂಕಾ ಒಪ್ಪಿಕೊಂಡಿದ್ದ ಹಾಲಿವುಡ್ ಚಿತ್ರವೂ ಮುಂದಕ್ಕೆ ಹೋಗಿದೆ.

  English summary
  Bollywood Actress Priyanka Chopra and Nick Jonas's trending image is fake. Read the details here.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X