twitter
    For Quick Alerts
    ALLOW NOTIFICATIONS  
    For Daily Alerts

    ಪ್ರತಿಷ್ಠಿತ ಪ್ರಶಸ್ತಿಗೆ RRR ಆಯ್ಕೆ: ಐದು ವಿಭಾಗದಲ್ಲಿ ನಾಮಿನೇಟ್

    By ಫಿಲ್ಮಿಬೀಟ್ ಡೆಸ್ಕ್
    |

    RRR ಸಿನಿಮಾ ತಂಡ ಈಗಾಗಲೇ ಆಸ್ಕರ್ ಕನಸು ಕಾಣುತ್ತಿದೆ. 2023 ರ ಆಸ್ಕರ್‌ ಪ್ರಶಸ್ತಿ ಪ್ರಧಾನ ಸಮಾರಂಭದಲ್ಲಿ ಕನಿಷ್ಟ ಮೂರು ಪ್ರಶಸ್ತಿಗಳನ್ನಾದರೂ 'RRR' ಪಡೆದೇ ತೀರುತ್ತದೆ ಎಂದು ಹಲವು ಹಾಲಿವುಡ್ ದಿಗ್ಗಜರೇ ಭವಿಷ್ಯ ನುಡಿದಿದ್ದಾರೆ. ಆಸ್ಕರ್‌ಗೆ ಮುನ್ನ ಹಲವು ಪ್ರತಿಷ್ಠಿತ ಪ್ರಶಸ್ತಿಗಳನ್ನು RRR ಬಾಚಿಕೊಳ್ಳುತ್ತಿದ್ದು, ದಿನೇ-ದಿನೇ ಆಸ್ಕರ್‌ಗೆ ಹತ್ತಿರವಾಗುತ್ತಾ ಸಾಗುತ್ತಿದೆ.

    ಕೆಲವು ದಿನಗಳ ಹಿಂದಷ್ಟೆ ಹಾಲಿವುಡ್ ಕ್ರಿಟಿಕ್ ಅಸೋಸಿಯೇಷನ್ ಪ್ರಶಸ್ತಿಗೆ ಭಾಜನವಾದ RRR ಸಿನಿಮಾ ಇದೀಗ ಇನ್ನಷ್ಟು ಕಠಿಣವಾದ ಕ್ರಿಟಿಕ್ ಅಸೋಸಿಯೇಷನ್‌ ಪ್ರಶಸ್ತಿಗೆ ಐದು ವಿಭಾಗದಲ್ಲಿ ನಾಮಿನೇಟ್ ಆಗಿದೆ.

    ಪ್ರತಿಷ್ಠಿತ ಗೋಲ್ಡನ್ ಗ್ಲೋಬ್ ಪ್ರಶಸ್ತಿಗೆ ಆಯ್ಕೆಯಾದ RRR: ಯಾವ ವಿಭಾಗದಲ್ಲಿ ಸ್ಪರ್ಧೆಪ್ರತಿಷ್ಠಿತ ಗೋಲ್ಡನ್ ಗ್ಲೋಬ್ ಪ್ರಶಸ್ತಿಗೆ ಆಯ್ಕೆಯಾದ RRR: ಯಾವ ವಿಭಾಗದಲ್ಲಿ ಸ್ಪರ್ಧೆ

    ಕೆನಡಾದ 'ದಿ ಕ್ರಿಟಿಕ್ ಚಾಯ್ಸ್ ಅಸೋಸಿಯೇಷನ್' ನೀಡುವ ಪ್ರಶಸ್ತಿಗೆ ಐದು ವಿವಿಧ ವಿಭಾಗಗಳಲ್ಲಿ RRR ಆಯ್ಕೆ ಆಗಿದೆ. ಕೆನಡಾದ 'ದಿ ಕ್ರಿಟಿಕ್ ಚಾಯ್ಸ್ ಅಸೋಸಿಯೇಷನ್' ಕಠಿಣವಾದ ಕ್ರಿಟಿಕ್ ಅಸೋಸಿಯೇಷನ್ ಎಂದು ಹೆಸರಾಗಿದ್ದು, ಈ ಅಸೋಸಿಯೇಷನ್‌ನಲ್ಲಿ 600 ವಿಮರ್ಶಕರು ಹಾಗೂ ಸಿನಿಮಾ ಪತ್ರಕರ್ತರು ಸದಸ್ಯರಾಗಿದ್ದಾರೆ. ಇವರ ಮತಗಳ ಆಧಾರದ ಮೇಲೆ ಸಿನಿಮಾವನ್ನು ಪ್ರಶಸ್ತಿಗೆ ಆಯ್ಕೆ ಮಾಡಲಾಗುತ್ತದೆ.

    ಐದು ವಿಭಾಗದಲ್ಲಿ ನಾಮಿನೇಶನ್

    ಐದು ವಿಭಾಗದಲ್ಲಿ ನಾಮಿನೇಶನ್

    'ದಿ ಕ್ರಿಟಿಕ್ ಚಾಯ್ಸ್ ಅಸೋಸಿಯೇಷನ್' ನಲ್ಲಿ RRR ಸಿನಿಮಾವು ಅತ್ಯುತ್ತಮ ಸಿನಿಮಾ, ಅತ್ಯುತ್ತಮ ನಿರ್ದೇಶಕ, ಅತ್ಯುತ್ತಮ ವಿಶ್ಯುಲ್ ಎಫೆಕ್ಟ್, ಅತ್ಯುತ್ತಮ ವಿದೇಶಿ ಭಾಷಾ ಸಿನಿಮಾ, ಅತ್ಯುತ್ತಮ ಹಾಡು ವಿಭಾಗದಲ್ಲಿ ಪ್ರಶಸ್ತಿಗೆ ನಾಮನಿರ್ದೇಶನಗೊಂಡಿದ್ದು, ಕನಿಷ್ಟ ಮೂರು ವಿಭಾಗದಲ್ಲಿಯಾದರೂ ಸಿನಿಮಾಕ್ಕೆ ಪ್ರಶಸ್ತಿ ಬರುವ ನಿರೀಕ್ಷೆ ಇದೆ.

    ಗೋಲ್ಡನ್ ಗ್ಲೋಬ್‌ಗೂ ನಾಮಿನೇಟ್ ಆಗಿದೆ

    ಗೋಲ್ಡನ್ ಗ್ಲೋಬ್‌ಗೂ ನಾಮಿನೇಟ್ ಆಗಿದೆ

    ಇದು ಮಾತ್ರವೇ ಅಲ್ಲದೆ, ಆಸ್ಕರ್‌ನಷ್ಟೆ ಪ್ರಾಮುಖ್ಯತೆಯುಳ್ಳ ಮತ್ತೊಂದು ಸಿನಿಮಾ ಪ್ರಶಸ್ತಿಯಾದ ಗೋಲ್ಡನ್ ಗ್ಲೋಬ್‌ಗೂ 'RRR' ಸಿನಿಮಾ ಎರಡು ವಿಭಾಗದಲ್ಲಿ ನಾಮನಿರ್ದೇಶನಗೊಂಡಿದೆ. ಅತ್ಯುತ್ತಮ ವಿದೇಶಿ ಭಾಷಾ ಸಿನಿಮಾ ಹಾಗೂ ಅತ್ಯುತ್ತಮ ಹಾಡು ವಿಭಾಗದಲ್ಲಿ RRR ಸಿನಿಮಾ ಗೋಲ್ಡನ್ ಗ್ಲೋಬ್‌ನಲ್ಲಿ ನಾಮಿನೇಟ್ ಆಗಿದೆ.

    ಹಲವು ಪ್ರಶಸ್ತಿಗೆ ಭಾಜನವಾಗಿರುವ ಸಿನಿಮಾ

    ಹಲವು ಪ್ರಶಸ್ತಿಗೆ ಭಾಜನವಾಗಿರುವ ಸಿನಿಮಾ

    RRR ಸಿನಿಮಾವು ಈಗಾಗಲೇ ಕೆಲವು ವಿದೇಶಿ ಪ್ರಶಸ್ತಿಗಳಿಗೆ ಭಾಜವಾಗಿದೆ. ಅಟ್ಲಾಂಟಾ ಫಿಲಂ ಸಿಟಿ ಸರ್ಕಲ್‌ನ ಪ್ರಶಸ್ತಿ, ಬಾಸ್ಟನ್ ಸೊಸೈಟಿ ಆಫ್ ಫಿಲಂ ಕ್ರಿಟಿಕ್ಸ್, ಹಾಲಿವುಡ್ ಕ್ರಿಟಿಕ್ ಅಸೋಸಿಯೇಷನ್ ಅವಾರ್ಡ್ಸ್, ಲಾಸ್ ಏಂಜಲಿಸ್ ಫಿಲಂ ಕ್ರಿಟಿಕ್ ಅವಾರ್ಡ್ಸ್, ನ್ಯಾಷನಲ್ ಬೋರ್ಡ್ ಆಫ್ ರಿವ್ಯೂ, ನ್ಯೂಯಾರ್ಕ್ ಫಿಲಂ ಕ್ರಿಟಿಕ್ ಸರ್ಕಲ್, ಇವುಗಳ ಜೊತೆಗೆ ಸ್ಯಾಟರನ್ ಅವಾರ್ಡ್ಸ್‌ ಅನ್ನು RRR ಪಡೆದುಕೊಂಡಿದೆ. 'ದಿ ಕ್ರಿಟಿಕ್ ಚಾಯ್ಸ್ ಅಸೋಸಿಯೇಷನ್', ಗೋಲ್ಡನ್ ಗ್ಲೋಬ್ ಹಾಗೂ ಆಸ್ಕರ್‌ ಗೆಲ್ಲುವ ನಿರೀಕ್ಷೆಯಲ್ಲಿದೆ.

    ಕೋಮರಂ ಭೀಮ್-ಅಲ್ಲೂರಿ ಸೀತಾರಾಮ್ ಕತೆ

    ಕೋಮರಂ ಭೀಮ್-ಅಲ್ಲೂರಿ ಸೀತಾರಾಮ್ ಕತೆ

    RRR ಸಿನಿಮಾವು ಭಾರತ ಮಾತ್ರವೇ ಅಲ್ಲದೆ ವಿದೇಶಿ ಪ್ರೇಕ್ಷಕರ ಮೆಚ್ಚುಗೆಯನ್ನು ಗಳಿಸಿ ಬಹುದೊಡ್ಡ ಹಿಟ್ ಸಿನಿಮಾ ಎನಿಸಿಕೊಂಡಿದೆ. ಸುಮಾರು 1200 ಕೋಟಿ ಹಣವನ್ನು ಬಾಕ್ಸ್ ಆಫೀಸ್‌ನಲ್ಲಿ ಗಳಿಸಿದೆ. ಸಿನಿಮಾವು ಅವಿಭಜಿತ ಆಂಧ್ರಪ್ರದೇಶದ ಹೊರಾಟಗಾರರಾದ ಕೋಮರಂ ಭೀಮ್ ಹಾಗೂ ಅಲ್ಲೂರಿ ಸೀತಾರಾಮ ರಾಜು ಅವರ ಕುರಿತಾದ ಕಾಲ್ಪನಿಕ ಕತೆಯಾಗಿದೆ. ಸಿನಿಮಾದಲ್ಲಿ ಕೋಮರಂ ಭೀಮ್ ಆಗಿ ಜೂ ಎನ್‌ಟಿಆರ್, ಅಲ್ಲೂರಿ ಸೀತಾರಾಮ ರಾಜು ಪಾತ್ರದಲ್ಲಿ ರಾಮ್ ಚರಣ್ ನಟಿಸಿದ್ದಾರೆ. ನಾಯಕಿಯಾಗಿ ಆಲಿಯಾ ಭಟ್ ಇದ್ದಾರೆ. ಅತಿಥಿ ಪಾತ್ರದಲ್ಲಿ ಅಜಯ್ ದೇವಗನ್ ನಟಿಸಿದ್ದಾರೆ. ಸಿನಿಮಾವನ್ನು ರಾಜಮೌಳಿ ನಿರ್ದೇಶಿಸಿದ್ದು, ಸಂಗೀತ ನೀಡಿರುವುದು ಎಂಎಂ ಕೀರವಾಣಿ.

    English summary
    RRR movie bags five nominations in critic choice awards. RRR also bagged two nominations in Golden Globe awards.
    Thursday, December 15, 2022, 14:51
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X