twitter
    For Quick Alerts
    ALLOW NOTIFICATIONS  
    For Daily Alerts

    ಅಂತರಿಕ್ಷದಲ್ಲೂ ಅಮೆರಿಕ-ರಷ್ಯಾ ಯುದ್ಧ! ಮೊದಲ 'ಬಾಹ್ಯಾಕಾಶ ಸಿನಿಮಾ' ಯಾರದ್ದು?

    |

    ರಷ್ಯಾ-ಅಮೆರಿಕ ನಡುವಿನ ವೈಷಮ್ಯಕ್ಕೆ ನೂರು ವರ್ಷಗಳಿಗೂ ಅಧಿಕ ಇತಿಹಾಸವಿದೆ. 1900 ರ ಆರಂಭದಲ್ಲಿ ಪ್ರಾರಂಭವಾದ ಈ ದೇಶಗಳ ನಡುವಿನ ವೈಷಮ್ಯ ಈಗಲೂ ಚಾಲ್ತಿಯಲ್ಲಿದೆ.

    ಶಸ್ತ್ರ ಸಜ್ಜಿತ ಯುದ್ಧ ಬಳಿಕ ಪ್ರಾರಂಭವಾದ ಶೀಥಲ ಸಮರ ಈಗಲೂ ಮುಂದುರೆದಿದೆ. ಕ್ರೀಡೆ, ವಿಜ್ಞಾನ, ಚುನಾವಣೆ, ಶಿಕ್ಷಣ, ಸೈನ್ಯ, ಆರ್ಥಿಕತೆ ಎಲ್ಲ ವಿಷಯಗಳಲ್ಲೂ ಈ ಎರಡೂ ದೇಶಗಳು ಸ್ಪರ್ಧೆಗೆ ಬಿದ್ದಿವೆ ಮಾತ್ರವಲ್ಲ ಗುಪ್ತಚರ ಇಲಾಖೆಗಳು, ಗೂಢಚಾರಿಗಳನ್ನು ಬಳಸಿಕೊಂಡು ಪರಸ್ಪರರ ವಿರುದ್ಧ ಪರೋಕ್ಷ ತಂತ್ರ, ಪ್ರತಿತಂತ್ರಗಳನ್ನು ಮಾಡುತ್ತಲೇ ಬಂದಿರುವುದು ಗುಟ್ಟಲ್ಲ.

    ಅಂತರಿಕ್ಷದಲ್ಲಿ ಸಿನಿಮಾ: ಸಾಹಸಕ್ಕೆ ಮುಂದಾದ ರಷ್ಯಾ, ಅಮೆರಿಕದ ಜೊತೆ ಸ್ಪರ್ಧೆಅಂತರಿಕ್ಷದಲ್ಲಿ ಸಿನಿಮಾ: ಸಾಹಸಕ್ಕೆ ಮುಂದಾದ ರಷ್ಯಾ, ಅಮೆರಿಕದ ಜೊತೆ ಸ್ಪರ್ಧೆ

    1968-69 ರ ಸಮಯದಲ್ಲಿ ಅಮೆರಿಕವು ತಮ್ಮ ಮೊದಲ ಅಂತರಿಕ್ಷ ಯಾನದ ಘೋಷಣೆ ಮಾಡಿದಾಗ ರಷ್ಯಾ ಸಹ ಅಂತರಿಕ್ಷ ಯಾನಕ್ಕೆ ತರಾತುರಿಯ ಯತ್ನ ಆರಂಭಿಸಿತು. ಅಮೆರಿಕಕ್ಕಿಂತಲೂ ಮೊದಲು ನಾವು ಚಂದ್ರನ ಮೇಲೆ ಹೆಜ್ಜೆ ಇಡಲಿದ್ದೇವೆ ಎಂದು ರಷ್ಯಾ ಹೇಳಿಕೊಂಡಿತ್ತು. ಆದರೆ ಅದು ಸಾಧ್ಯವಾಗಲಿಲ್ಲ. 1969 ಜುಲೈ 20 ಕ್ಕೆ ನೀಲ್ ಆರ್ಮ್ ಸ್ಟ್ರಾಂಗ್ ಚಂದ್ರನ ಮೇಲೆ ಮೊದಲ ಹೆಜ್ಜೆ ಇಟ್ಟರು. ಇದೊಂದು ಸುಳ್ಳು ಮಿಷನ್, ಅಮೆರಿಕ ಸರ್ಕಾರ ಜನರ ಕಣ್ಣಿಗೆ ಮಣ್ಣೆರಿಚಿದೆ ಎಂದು ರಷ್ಯಾ ದೊಡ್ಡ ಮಟ್ಟದಲ್ಲಿ ವಾದಿಸಿತು.

    Russias The Challenger Is The First Movie Shot On Space

    ಅಂತರಿಕ್ಷ ಯಾನದ ಕುರಿತು ರಷ್ಯಾ ಹಾಗೂ ಅಮೆರಿಕ ನಡುವಿನ ಸ್ಪರ್ಧೆ ಇಂದಿಗೂ ಮುಂದುವರೆದಿದೆ. ನಟ ಟಾಮ್ ಕ್ರೂಸ್ ತಾವು ಅಂತರಿಕ್ಷದಲ್ಲಿ ತಮ್ಮ ಸಿನಿಮಾದ ಚಿತ್ರೀಕರಣ ಮಾಡಲಿದ್ದೇವೆ ಎಂದು 2021 ರಲ್ಲಿ ಘೋಷಿಸಿದರು. ಬಳಿಕ ಕೊರೊನಾ ಕಾರಣಕ್ಕೆ ಈ ಯೋಜನೆ ತಡವಾಯಿತು. ಕೂಡಲೆ ಎಚ್ಚೆತ್ತುಕೊಂಡ ರಷ್ಯಾ ಈ ಸಾಹಸಕ್ಕೆ ಕೈ ಹಾಕಿತು ಮತ್ತು ಯಶಸ್ವಿಯೂ ಆಯಿತು.

    'ದಿ ಚಾಲೆಂಜ್' ಹೆಸರಿನ ರಷ್ಯನ್ ಸಿನಿಮಾವನ್ನು ಅಂತರಿಕ್ಷದಲ್ಲಿ ಚಿತ್ರೀಕರಣ ಮಾಡಲಾಯಿತು. ಭಾರತೀಯ ಕಾಲಮಾನ ಅಕ್ಟೋಬರ್ 05, 2021ರ ಮಧ್ಯಾಹ್ನ 2:25ಕ್ಕೆ ಚಿತ್ರತಂಡವು ಕಝಕಿಸ್ತಾನದಿಂದ ಅಂತರಿಕ್ಷಕ್ಕೆ ಹಾರಿತು. ಸಿನಿಮಾದ ನಿರ್ದೇಶಕ ಕ್ಲಿಮ್ ಶಿಫ್ನೆಕೊ ಹಾಗೂ ನಟಿ ಯುಲಿಯಾ ಪೆರಿಸಿಲ್ಡ್ ಚಿತ್ರೀಕರಣಕ್ಕಾಗಿ ಅಂತರಿಕ್ಷಕ್ಕೆ ಹೋದ ಮೊದಲಿಗರು ಎಂಬ ಖ್ಯಾತಿಗೆ ಪಾತ್ರರಾದರು. ಆದರೆ ಈಗ ರಷ್ಯಾದಲ್ಲಿ ತಲೆದೂರಿರುವ ಯುದ್ಧ ಸ್ಥಿತಿಯ ಕಾರಣ ಸಿನಿಮಾ ಬಿಡುಗಡೆ ತಡವಾಗುತ್ತಿದೆ.

    ಬಾಹ್ಯಾಕಾಶದಲ್ಲಿ ಮೊದಲು ಚಿತ್ರೀಕರಣಗೊಂಡ ಸಿನಿಮಾ ಎಂಬ ಖ್ಯಾತಿಗೆ ರಷ್ಯಾದ ಸಿನಿಮಾ ಪಾತ್ರವಾಗಿದೆ. 'ಮಿಷನ್ ಇಂಪಾಸಿಬಲ್' ಸರಣಿಯ ಏಳನೇ ಸಿನಿಮಾವನ್ನು ಅಂತರಿಕ್ಷದಲ್ಲಿ ಚಿತ್ರೀಕರಣ ಮಾಡುವುದಾಗಿ ಘೋಷಣೆ ಮಾಡಿದ್ದ ಟಾಮ್ ಕ್ರೂಸ್ ವಿವಿಧ ಕಾರಣಗಳಿಂದಾಗಿ ಯೋಜನೆಯನ್ನು ಮುಂದೂಡಿದ್ದಾರೆ. ಆದರೆ ರಷ್ಯಾದ 'ದಿ ಚಾಲೆಂಜರ್' ಸಿನಿಮಾ ಬಿಡುಗಡೆ ತಡವಾಗುತ್ತಿರುವ ಕಾರಣ 'ಮಿಷನ್ ಇಂಪಾಸಿಬಲ್' ಸಿನಿಮಾಕ್ಕೆ ಇನ್ನೂ ಸಮಯವಿದೆ.

    ಬಾಹ್ಯಾಕಾಶದಲ್ಲಿ ಶೂಟಿಂಗ್ ಕಂಪ್ಲೀಟ್ ಮಾಡಿದ ಬಾಹ್ಯಾಕಾಶದಲ್ಲಿ ಶೂಟಿಂಗ್ ಕಂಪ್ಲೀಟ್ ಮಾಡಿದ "ದಿ ಚಾಲೆಂಜ್"

    ಈ ನಡುವೆ ಬ್ರಿಟನ್ ಹೊಸದೊಂದು ಸಾಹಸಕ್ಕೆ ಮುಂದಾಗಿದೆ. ರಷ್ಯಾದವರು ಅಂತರಿಕ್ಷದಲ್ಲಿ ಸಿನಿಮಾ ಚಿತ್ರೀಕರಣ ಮಾತ್ರ ಮಾಡಿದ್ದಾರೆ. ಈಗ ಅಮೆರಿಕದ ಸಂಸ್ಥೆಯೊಂದು ಬಾಹ್ಯಾಕಾಶದಲ್ಲಿ ಪೂರ್ಣ ಪ್ರಮಾಣದ ಸಿನಿಮಾ ಸ್ಟುಡಿಯೋ ಒಂದನ್ನು ನಿರ್ಮಾಣ ಮಾಡಲು ಸಜ್ಜಾಗಿದೆ.

    ಬ್ರಿಟನ್‌ನ ಸ್ಪೇಸ್‌ ಎಂಟರ್ಟೈನ್‌ಮೆಂಟ್ ಎಂಟರ್‌ಪ್ರೈಸಸ್ ಹೆಸರಿನ ಸಂಸ್ಥೆ ಬಾಹ್ಯಾಕಾಶದಲ್ಲಿ ಸಿನಿಮಾ ಸ್ಟುಡಿಯೋ ನಿರ್ಮಾಣಕ್ಕೆ ಯೋಜನೆ ರೂಪಿಸಿದೆ. ಸ್ಟುಡಿಯೋ ಜೊತೆಗೆ ಸ್ಪೋರ್ಟ್ಸ್ ಅರೆನಾವನ್ನು ಸಹ ನಿರ್ಮಾಣ ಮಾಡಲಿದೆ ಈ ಸಂಸ್ಥೆ. ಆ ಮೂಲಕ ಬಾಹ್ಯಾಕಾಶದಲ್ಲಿ ಸ್ಟುಡಿಯೋ ನಿರ್ಮಾಣ ಮಾಡಿರುವ ಮೊದಲ ಸಂಸ್ಥೆ ಎನಿಸಿಕೊಳ್ಳಲಿದೆ.

    ''ಮನೊರಂಜನಾ ವಿಭಾಗದಲ್ಲಿ ಹೆಚ್ಚಿನ ಅನ್ವೇಷಣೆಗೆ ಆ ಮೂಲಕ ಗಡಿಯೇ ಇಲ್ಲದ ಮನೊರಂಜನೆಯನ್ನು ನೀಡಲು ಅವಕಾಶವನ್ನು ನಮ್ಮ ಈ ವಿಭಿನ್ನವಾದ ಯೋಜನೆ ಕಲ್ಪಿಸಲಿದೆ. ಈ ಯೋಜನೆಯು ಕ್ರಿಯಾಶೀಲತೆಯ ಹೊಸ ಮಜಲನ್ನೇ ತೆರೆಯಲಿದೆ. ಬನ್ನಿ, ಬಾಹ್ಯಾಕಾಶದಲ್ಲಿ ನಿಮ್ಮ ಕ್ರಿಯಾಶೀಲತೆಯ ಪಯಣ ಆರಂಭಿಸಿ'' ಎಂದು ಈ ಯೋಜನೆಯ ಮುಖ್ಯಸ್ಥರಾಗಿರುವ ಡಿಮಿರ್ಟಿ ಹಾಗೂ ಎಲೆನಾ ಲೆಸ್ನಾವೆಸ್ಕಿ ಹೇಳಿದ್ದಾರೆ.

    ಈ ಸ್ಟುಡಿಯೋ ಮೂಲಕ, ಸಿನಿಮಾ, ಟಿವಿ ಶೋ, ಸಂಗೀತ ಶೋ, ವಿಡಿಯೋ ಮತ್ತು ಕ್ರೀಡೆಗಳನ್ನು ಆಯೋಜಿಸಲಾಗುತ್ತದೆ. ಈ ಸ್ಟುಡಿಯೋದ ಮೊದಲ ಸಿನಿಮಾ ಟಾಮ್ ಕ್ರೂಸ್‌ರ 'ಮಿಷನ್ ಇಂಪಾಸಿಬಲ್' ಆಗಿರಲಿದೆ ಎನ್ನಲಾಗುತ್ತಿದೆ. ಈ ಸಂಸ್ಥೆಯ ಸ್ಟುಡಿಯೋ ಯೋಜನೆಗೆ ಅಮೆರಿಕದ ನಾಸಾ ಹಾಗೂ ಎಲಾನ್ ಮಸ್ಕ್‌ರ ಸ್ಪೇಸ್‌ ಎಕ್ಸ್ ನೆರವು ನೀಡಲಿದೆ.

    English summary
    Russia's 'The Challenge' is the first movie shot on space. Tom Cruise first announce he will shoot his movie on space but project got delayed in between Russian movie team went to space and shot the movie.
    Wednesday, March 16, 2022, 17:58
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X