For Quick Alerts
  ALLOW NOTIFICATIONS  
  For Daily Alerts

  ಆಸ್ಕರ್‌ಗೆ ಮುನ್ನ ಮತ್ತೊಂದು ಪ್ರತಿಷ್ಠಿತ ಪ್ರಶಸ್ತಿಗೆ ಭಾಜನವಾದ RRR

  By ಫಿಲ್ಮಿಬೀಟ್ ಡೆಸ್ಕ್
  |

  ಆಸ್ಕರ್‌ ಗೆಲ್ಲುವ ನಿರೀಕ್ಷೆ ಹುಟ್ಟಿಸಿರುವ 'RRR' ಸಿನಿಮಾ ಗೆಲುವು ದಿನಗಳ ಹಿಂದಷ್ಟೆ ಗೋಲ್ಡನ್ ಗ್ಲೋಬ್ ಪ್ರಶಸ್ತಿ ಗೆದ್ದು ನಿರೀಕ್ಷೆಯನ್ನು ಬಲಪಡಿಸಿತ್ತು. ಇದೀಗ ಮತ್ತೊಂದು ಪ್ರತಿಷ್ಠಿತ ಅಂತರಾಷ್ಟ್ರೀಯ ಪ್ರಶಸ್ತಿಯನ್ನು RRR ಬಾಚಿಕೊಂಡಿದೆ.

  'RRR' ಸಿನಿಮಾವು ಕ್ರಿಟಿಕ್ ಚಾಯ್ಸ್ ಅವಾರ್ಡ್‌ 2023 ರ ಎರಡು ವಿಭಾಗಗಳಲ್ಲಿ ಪ್ರಶಸ್ತಿ ತನ್ನದಾಗಿಸಿಕೊಂಡಿದೆ. ಗೋಲ್ಡನ್ ಗ್ಲೋಬ್‌ನಲ್ಲಿ ಕೇವಲ ಒಂದು ಪ್ರಶಸ್ತಿಯನ್ನು ಮಾತ್ರವೇ ಗೆದ್ದಿದ್ದ RRR ಕ್ರಿಟಿಕ್ ಚಾಯ್ಸ್‌ನಲ್ಲಿ ಎರಡು ಪ್ರಶಸ್ತಿಗಳನ್ನು ಗೆದ್ದಿದೆ.

  ಕ್ರಿಟಿಕ್ ಚಾಯ್ಸ್ 2023 ರಲ್ಲಿ RRR ಸಿನಿಮಾದ 'ನಾಟು ನಾಟು' ಹಾಡು ಅತ್ಯುತ್ತಮ ಹಾಡು ವಿಭಾಗದಲ್ಲಿ ಪ್ರಶಸ್ತಿ ಗೆದ್ದರೆ, RRR ಸಿನಿಮಾ, 'ಅತ್ಯುತ್ತಮ ವಿದೇಶಿ ಭಾಷಾ ಸಿನಿಮಾ' ವಿಭಾಗದಲ್ಲಿ ಪ್ರಶಸ್ತಿ ಗೆದ್ದಿದೆ. ಗೋಲ್ಡನ್ ಗ್ಲೋಬ್‌ನಲ್ಲಿ ಕೇವಲ ಒರಿಜಿನಲ್ ಸಾಂಗ್ ವಿಭಾಗದಲ್ಲಿ ಮಾತ್ರವೇ RRR ಪ್ರಶಸ್ತಿ ಗೆದ್ದಿತ್ತು.

  ಅಮೆರಿಕ ಹಾಗೂ ಕೆನಡಾದ ಸಿನಿಮಾ ವಿಮರ್ಶಕರು, ಪಂಡಿತರು ಒಟ್ಟಿಗೆ ಸೇರಿ ಸಿನಿಮಾಗಳನ್ನು ನೊಡಿ ಮತ ಚಲಾಯಿಸಿ ಪ್ರಶಸ್ತಿಗೆ ಆಯ್ಕೆ ಮಾಡುತ್ತಾರೆ. ಕ್ರಿಟಿಕ್ ಚಾಯ್ಸ್ ಅವಾರ್ಡ್‌ಗೆ ತನ್ನದೇ ಆದ ಪ್ರಾಧಾನ್ಯತೆ, ಪ್ರತಿಷ್ಠೆ ಇದೆ.

  RRR ಸಿನಿಮಾವು ಈಗಾಗಲೇ ಕೆಲವು ವಿದೇಶಿ ಪ್ರಶಸ್ತಿಗಳನ್ನು ಪಡೆದುಕೊಂಡಿದೆ. ಅಲಿಯನ್ಸ್ ಆಫ್ ವಿಮೆನ್ ಜರ್ನಲಿಸ್ಟ್ಸ್ ನ ಅತ್ಯುತ್ತಮ ವಿದೇಶಿ ಸಿನಿಮಾ ಪ್ರಶಸ್ತಿ. ಅಟ್ಲಾಂಟಾ ಫಿಲಂ ಕ್ರಿಟಿಕ್ ಪ್ರಶಸ್ತಿ, ಬೋಸ್ಟನ್ ಸೊಸೈಟಿ ಫಿಲಂ ಕ್ರಿಟಿಕ್ ಪ್ರಶಸ್ತಿ, ಗಾರ್ಜಿಯಾ ಫಿಲಂ ಕ್ರಿಟಿಕ್ ಅಸೋಸಿಯೇಷನ್, ಹಾಲಿವುಡ್ ಕ್ರಿಟಿಕ್ ಅಸೋಸಿಯೇಷನ್ ಪ್ರಶಸ್ತಿ, ನ್ಯೂಯಾರ್ಕ್ ಫಿಲಂ ಕ್ರಿಟಿಕ್ ಪ್ರಶಸ್ತಿ, ಸ್ಟಾಟರ್ನ್ ಅವಾರ್ಡ್, ಸೌಥರ್ನ್ ಫಿಲಂ ಕ್ರಿಟಿಕ್ ಅವಾರ್ಡ್ ಇನ್ನು ಕೆಲವು ಪ್ರಶಸ್ತಿಗಳನ್ನು ಪಡೆದುಕೊಂಡಿದ್ದು, ಇದೀಗ ಆಸ್ಕರ್‌ನತ್ತ ಮುಖ ಮಾಡಿದೆ.

  'RRR' ಸಿನಿಮಾವು ತೆಲುಗು ರಾಜ್ಯಗಳ ಹೋರಾಟಗಾರರಾದ ಅಲ್ಲೂರಿ ಸೀತಾರಾಮ ರಾಜು ಹಾಗೂ ಕೋಮರಂ ಭೀಮ್ ಅವರುಗಳ ಕುರಿತಾದ ಕಾಲ್ಪನಿಕ ಕತೆಯಾಗಿದೆ. ಸಿನಿಮಾದಲ್ಲಿ ಅಲ್ಲೂರಿ ಸೀತಾರಾಮ ರಾಜು ಪಾತ್ರದಲ್ಲಿ ರಾಮ್ ಚರಣ್ ಹಾಗೂ ಕೋಮರಂ ಭೀಮ್ ಪಾತ್ರದಲ್ಲಿ ಜೂ ಎನ್‌ಟಿಆರ್ ನಟಿಸಿದ್ದಾರೆ. ಸಿನಿಮಾದಲ್ಲಿ ಆಲಿಯಾ ಭಟ್, ಅಜಯ್ ದೇವಗನ್ ಹಾಗೂ ಇತರರು ಸಹ ಇದ್ದಾರೆ. ಸಿನಿಮಾವನ್ನು ರಾಜಮೌಳಿ ನಿರ್ದೇಶನ ಮಾಡಿದ್ದು, ದಾನಯ್ಯ ನಿರ್ಮಾಣ ಮಾಡಿದ್ದಾರೆ. ಸಂಗೀತ ನೀಡಿರುವುದು ಎಂ ಎಂ ಕೀರವಾಣಿ.

  English summary
  SS Rajamouli's RRR movie won two awards in Critic Choice award 2023. RRR won Best song and best foreign language movie award.
  Monday, January 16, 2023, 12:57
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X