»   » ಹಾಲಿವುಡ್ಡಿನಲ್ಲಿ ಭಾರಿ ಪೈರಸಿ, ಬಹು ನಿರೀಕ್ಷಿತ ಚಿತ್ರ ಲೀಕ್

ಹಾಲಿವುಡ್ಡಿನಲ್ಲಿ ಭಾರಿ ಪೈರಸಿ, ಬಹು ನಿರೀಕ್ಷಿತ ಚಿತ್ರ ಲೀಕ್

Posted By: * ಜೇಮ್ಸ್ ಮಾರ್ಟಿನ್
Subscribe to Filmibeat Kannada

ಹಾಲಿವುಡ್ಡಿನ ಬಹು ನಿರೀಕ್ಷಿತ ಚಿತ್ರಗಳಲ್ಲಿ ಒಂದೆನಿಸಿರುವ ಸಿಲ್ವೆಸ್ಟರ್ ಸ್ಟಲೋನ್ ಅಭಿನಯದ ದಿ ಎಕ್ಸ್ ಪೆಂಡಬಲ್ಸ್ 3 ಚಿತ್ರ ಬಿಡುಗಡೆಗೂ ಮೂರು ವಾರ ಮೊದಲೆ ಆನ್ ಲೈನ್ ಕಳ್ಳರ ಪಾಲಾಗಿದೆ. ಆನ್ ಲೈನ್ ನಲ್ಲಿ ಸೋರಿಕೆಯಾಗಿರುವ ಚಿತ್ರದ ಕಾಪಿ ಹಾಟ್ ಕೇಕ್ ನಂತೆ ಡೌನ್ ಲೋಡ್ ಆಗುತ್ತಿದೆ.

ಒಂದು ಮೂಲದ ಪ್ರಕಾರ ಪೈರಸಿಯಾದ ಚಿತ್ರದ ವಿಡಿಯೋ 24 ಗಂಟೆಯೊಳಗೆ ಸುಮಾರು 1,89,000 ಬಾರಿ ಡೌನ್ ಲೋಡ್ ಆಗಿದೆಯಂತೆ. ಬಿಡುಗಡೆಗೆ ಮುನ್ನ ಚಿತ್ರ ಸೋರಿಕೆಯಾಗಿರುವುದರ ಬಗ್ಗೆ ಚಿತ್ರದ ವಿತರಕ ಸಂಸ್ಥೆ ಲಯನ್ಸ್ ಗೇಟ್ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.

ಜು.23 ರಿಂದ ಟೊರೆಂಟ್ ಷೇರಿಂಗ್ ವೆಬ್ ತಾಣಗಳಲ್ಲಿ ದಿ ಎಕ್ಸ್ ಪೆಂಡಬಲ್ಸ್ 3 ಚಿತ್ರ ಡೌನ್ ಲೋಡ್ ಆಗುತ್ತಲೇ ಇದೆ. ಒಳ್ಳೆ ಗುಣಮಟ್ಟದ ಕಾಪಿ ಇದ್ದು, ಬಿಟ್ ಟೊರೆಂಟ್ ಎಣಿಕೆ ಪ್ರಕಾರ ಇದುವರೆವಿಗೂ 2,40,000 ಬಾರಿ ಡೌನ್ ಲೋಡ್ ಆಗಿದೆಯಂತೆ. ಇದರಿಂದ ಚಿತ್ರಕ್ಕೆ ಭಾರಿ ನಷ್ಟ ಉಂಟಾಗಲಿದೆ ಎಂದು ಎಣಿಸಲಾಗಿದೆ.ಆಗಸ್ಟ್ 5 ರಂದು ಹಲವೆಡೆ ಚಿತ್ರ ಬಿಡುಗಡೆಯಾಗಲಿದ್ದು, ಚಿತ್ರದ ಗತಿ ಏನಾಗಲಿದೆ ಕಾದು ನೋಡಬೇಕಿದೆ.

The Expendables 3 leaked online three weeks before release

ಬಹು ತಾರಾಗಣ: ಹಾಲಿವುಡ್ ನ ಸಾಹಸಿ ನಟರ ದೊಡ್ಡ ದಂಡೇ ಈ ಚಿತ್ರದಲ್ಲಿದೆ. ಈ ಚಿತ್ರ ಸಿಲ್ವೆಸ್ಟರ್ ಸ್ಟಲೋನ್ ಅವರ ಕನಸಾಗಿದ್ದು, ಜಾಸನ್ ಸ್ಟಾಥಮ್, ಅಂಟೋನಿಯೋ ಬಂಡಾರಸ್, ಜೆಟ್ ಲಿ, ಅರ್ನಾಲ್ಡ್ ಸ್ವಾರ್ಜೆನೆಗ್ಗರ್, ಡಾಲ್ಫ್ ಲುಂಡ್ಗ್ ರೆನ್, ಕೆಲ್ಸೆ ಗ್ರಾಮರ್, ಟೆರಿ ಕ್ರೂಸ್, ಮೆಲ್ ಗಿಬ್ಸನ್, ವೆಸ್ಲಿ ಸೈಪ್ಸ್ ಹಾಗೂ ಹಾರಿಸನ್ ಫೋರ್ಡ್ ರಂಥ ದಿಗ್ಗಜರ ದಂಡೆ ಇದೆ. ಮೊದಲೆರಡು ಆವೃತ್ತಿ ಭರ್ಜರಿ ಹಿಟ್ ಆಗಿರುವ ಕಾರಣ ಈ ಚಿತ್ರ ಭಾರಿ ನಿರೀಕ್ಷೆ ಹುಟ್ಟಿಸಿದೆ.

ಈ ಮುಂಚೆ ಸೆಂಚುರಿ ಫಾಕ್ಸ್ ಪ್ರೊಡೆಕ್ಷನ್ ನ ಎಕ್ಸ್ ಮೆನ್ ಸರಣಿಯ ವೋಲ್ವೆರಿನ್ ಚಿತ್ರ ಬಿಡುಗಡೆಗೂ ಒಂದು ತಿಂಗಳು ಮೊದಲೇ ಆನ್ ಲೈನ್ ನಲ್ಲಿ ಲೀಕ್ ಆಗಿತ್ತು.

<iframe width="640" height="360" src="//www.youtube.com/embed/4xD0junWlFc" frameborder="0" allowfullscreen></iframe>
English summary
Sylvester Stallone-starrer The Expendables 3 has leaked online three weeks ahead of its US release. The online copy of the film has been downloaded through piracy sites more than 189,000 times over a 24-hour period,

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada