Don't Miss!
- News
ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿರುವ ಪತ್ರ ನಕಲಿ ಎಂದ ಸಿದ್ದರಾಮಯ್ಯ.! ಆ ಪತ್ರದಲ್ಲಿ ಏನಿದೆ.?
- Sports
IND-W vs SA-W T20 Tri-series Final: ಭಾರತ ವನಿತೆಯರ ವಿರುದ್ಧ ದಕ್ಷಿಣ ಆಫ್ರಿಕಾಗೆ ಜಯ
- Lifestyle
ಮಗುವಿಗೆ ತುಂಬಾ ಜ್ವರ ಇದ್ದಾಗ ಏನು ಮಾಡಬೇಕು?
- Finance
6 ತಿಂಗಳಲ್ಲಿ 2ನೇ ಬಾರಿಗೆ ಉದ್ಯೋಗಿಗಳನ್ನು ವಜಾಗೊಳಿಸಿದ Byju's: ಈ ಬಾರಿ ಎಷ್ಟು ನೌಕರರು?
- Automobiles
ಭಾರತದಲ್ಲಿ ಮಾರುತಿ ಜಿಮ್ನಿ ಎಸ್ಯುವಿಗೆ ಭಾರೀ ಡಿಮ್ಯಾಂಡ್: ಪ್ರತಿಸ್ಪರ್ಧಿಗಳಿಗೆ ಹೆಚ್ಚಿದ ಆತಂಕ
- Technology
ಮಾರುಕಟ್ಟೆಗೆ ಎಂಟ್ರಿ ಕೊಟ್ಟ ವಾಯರ್ಲೆಸ್ ಚಾರ್ಜಿಂಗ್ ಬೆಂಬಲಿಸುವ ಸ್ಮಾರ್ಟ್ವಾಚ್!
- Education
KVS Recruitment 2022 : ಕೇಂದ್ರೀಯ ವಿದ್ಯಾಲಯ ಸಂಗತನ್ ದಲ್ಲಿ 13404 ಹುದ್ದೆಗಳ ನೇಮಕಾತಿ
- Travel
ಯಾವುದೇ ಚಿಂತೆ ಇಲ್ಲದೆ ಸುಖಕರ ಪ್ರಯಾಣ ಅನುಭವಿಸಲು ಇಲ್ಲಿದೆ ಸಲಹೆಗಳು
25 ವರ್ಷಗಳ ಬಳಿಕ ಮರುಬಿಡುಗಡೆ ಆಗುತ್ತಿದೆ ಜಗಮೆಚ್ಚಿದ ಪ್ರೇಮಕತೆ!
ಅದ್ಭುತ ಕತೆಗಳು ಎಂದಿಗೂ ಸಾಯುವುದಿಲ್ಲ. ಅದರಲ್ಲೂ ಪ್ರೇಮಕತೆಗಳಿಗಂತೂ ಸಾವೇ ಇಲ್ಲ. ಪ್ರೇಮಿಗಳು ಸಾಯಬಹುದು ಕತೆಗಳು ಸಾಯುವುದಿಲ್ಲ ಎಂಬ ಮಾತೇ ಇದೆ. ಅಂಥಹುದೇ ಒಂದು ಅದ್ಭುತ ಪ್ರೇಮಕತಾ ಸಿನಿಮಾ 25 ವರ್ಷಗಳ ಬಳಿಕ ಮರು ಬಿಡುಗಡೆ ಆಗುತ್ತಿದೆ.
25 ವರ್ಷಗಳ ಹಿಂದೆ ಬಿಡುಗಡೆ ಆಗಿ ಜಗತ್ತಿನ ಸಿನಿಮಾ ರಂಗದಲ್ಲಿ ಇತಿಹಾಸವನ್ನೇ ಸೃಷ್ಟಿಮಾಡಿದ್ದ ಅದ್ಭುತ ಪ್ರೇಮಕತಾ ಸಿನಿಮಾ 'ಟೈಟ್ಯಾನಿಕ್' ಈಗ ಮತ್ತೆ ಬಿಡುಗಡೆಗೆ ರೆಡಿಯಾಗಿದೆ.
ಪ್ರೇಮಿಗಳ ದಿನಕ್ಕೆ ನಾಲ್ಕು ದಿನ ಮುಂಚಿತವಾಗಿ ಅಂದರೆ ಫೆಬ್ರವರಿ 10 ರಂದು ವಿಶ್ವದಾದ್ಯಂತ 'ಟೈಟ್ಯಾನಿಕ್' ಸಿನಿಮಾ ಮರು ಬಿಡುಗಡೆ ಆಗುತ್ತಿದೆ. 3ಡಿ ಹಾಗೂ 4ಕೆ ತಂತ್ರಜ್ಞಾನವನ್ನು ಸಿನಿಮಾಕ್ಕೆ ಸೇರಿಸಲಾಗಿದ್ದು ಮೊದಲಿಗಿಂತಲೂ ಭವ್ಯವಾಗಿ ಟೈಟ್ಯಾನಿಕ್ ಈ ಬಾರಿ ತೆರೆಯ ಮೇಲೆ ಕಾಣಲಿದೆ.
ಜೇಮ್ಸ್ ಕ್ಯಾಮರನ್ ನಿರ್ದೇಶನ ಮಾಡಿದ್ದ ಟೈಟ್ಯಾನಿಕ್ ಸಿನಿಮಾ ಮೊದಲ ಬಾರಿ ಡಿಸೆಂಬರ್ 19, 1997 ರಂದು ಬಿಡುಗಡೆ ಆಗಿತ್ತು. ಲಿಯೋನಾರ್ಡೊ ಡಿ ಕ್ಯಾಪ್ರಿಯೋ ಹಾಗೂ ಕೇಟ್ ವಿನ್‌ಸ್ಲೆಟ್ ನಟಿಸಿದ್ದ ಈ ಸಿನಿಮಾ ಟೈಟ್ಯಾನಿಕ್ ಹಡುಗು ಮುಳುಗುವ ಕತೆಯನ್ನು ಹೊಂದಿತ್ತು. ಹಡುಗು ಮುಳುಗುವ ಸಾಹಸಮಯ ಕತೆಯೊಳಗೆ ಅದ್ಭುತ ಪ್ರೇಮಕತೆ ಜೊತೆಗೆ ಬಡವ-ಶ್ರೀಮಂತ ವರ್ಗ ಭೇದಗಳನ್ನು ಒಳಗೊಂಡಿತ್ತು.
1997 ರಲ್ಲಿ ಬಿಡುಗಡೆ ಆದಾಗ ಈ ಸಿನಿಮಾ ಹಲವು ದಾಖಲೆಗಳನ್ನು ನಿರ್ಮಿಸಿತ್ತು. ಡಿಜಿಟಲ್ ಅಲ್ಲದ ಆ ಕಾಲದಲ್ಲಿಯೂ ಹಲವು ದೇಶಗಳ, ಸಣ್ಣ-ಪುಟ್ಟ ಪಟ್ಟಣ, ಹಳ್ಳಿಗಳಲ್ಲಿಯೂ ಈ ಸಿನಿಮಾ ಪ್ರದರ್ಶನ ಕಂಡಿದ್ದಿದ್ದು ವಿಶೇಷ. ವಿಶ್ವದಲ್ಲಿ ಅತಿ ಹೆಚ್ಚು ಮಂದಿ ನೋಡಿದ ಸಿನಿಮಾಗಳಲ್ಲಿ ಒಂದು 'ಟೈಟ್ಯಾನಿಕ್'.
ಆಗಿನ ಕಾಲಕ್ಕೆ 400 ಕೋಟಿ ರುಪಾಯಿ ಖರ್ಚು ಮಾಡಿ ನಿರ್ಮಿಸಲಾದ, ವಿಶ್ವದ ಅತ್ಯಂತ ದುಬಾರಿ ಸಿನಿಮಾ ಟೈಟ್ಯಾನಿಕ್ ತನ್ನ ಬಜೆಟ್‌ನ ಇಪ್ಪತ್ತು ಪಟ್ಟು ಹೆಚ್ಚು ಹಣವನ್ನು ಬಾಕ್ಸ್ ಆಫೀಸ್‌ನಿಂದ ಗಳಿಸಿತ್ತು. ಆವರೆಗೆ ವಿಶ್ವದಾದ್ಯಂತ ಇದ್ದ ಎಲ್ಲ ಬಾಕ್ಸ್ ಆಫೀಸ್ ದಾಖಲೆಗಳನ್ನು ಈ ಸಿನಿಮಾ ಒಂದೇ ಹೊಡೆತಕ್ಕೆ ಚಿಂದಿ ಉಡಾಯಿಸಿತ್ತು. ಅಲ್ಲದೆ ಹಲವು ವರ್ಷಗಳ ಕಾಲ ಯಾರೂ ಮುರಿಯಲಾಗದ ದಾಖಲೆಗಳನ್ನು ನಿರ್ಮಿಸಿತು. ಸ್ಟಾರ್ ವಾರ್ಸ್ ಸಿನಿಮಾ ಈ ದಾಖಲೆಯನ್ನು ಮುರಿಯಿತು.
ಸಿನಿಮಾ ಬಿಡುಗಡೆ ಆಗಿ 25 ವರ್ಷಗಳಾದರೂ 'ಟೈಟ್ಯಾನಿಕ್' ನಂಥಹಾ ಸುಂದರ, ಸಾಹಸಮಯ, ಭಾವುಕ ಪ್ರೇಮಕತೆಯನ್ನು ಜನ ಮರೆತಿಲ್ಲ. ಸಿನಿಮಾದ ಕೆಲವು ಐಕಾನಿಕ್ ಡೈಲಾಗ್‌ಗಳು ಈಗಲೂ ಆಗಾಗ್ಗೆ ಸಾಮಾಜಿಕ ಜಾಲತಾಣದಲ್ಲಿ ಕಾಣ ಸಿಗುತ್ತವೆ. ಇದೀಗ ಸಿನಿಮಾ ಮರು ಬಿಡುಗಡೆ ಆಗುತ್ತಿದ್ದು, ಮರು ಬಿಡುಗಡೆಯಲ್ಲಿಯೂ ಸಿನಿಮಾ ದಾಖಲೆ ನಿರ್ಮಿಸುವ ಸಾಧ್ಯತೆ ಇದೆ.