»   » ಹಾಲಿವುಡ್ ನಲ್ಲಿ ಮಿಂಚಿದ ಟಾಪ್ 10 ಬಿಟೌನ್ ನಟಿಯರು

ಹಾಲಿವುಡ್ ನಲ್ಲಿ ಮಿಂಚಿದ ಟಾಪ್ 10 ಬಿಟೌನ್ ನಟಿಯರು

Posted By: ಸೋನು ಗೌಡ
Subscribe to Filmibeat Kannada

ಬಾಲಿವುಡ್ ನ ತಳುಕು-ಬಳುಕಿನ ಬೆಡಗಿಯರು ಬರೀ ಬಿಟೌನ್ ನಲ್ಲಿ ಮಾತ್ರವಲ್ಲದೇ, ಹಾಲಿವುಡ್ ಸಿನಿಮಾ ಕ್ಷೇತ್ರಗಳಲ್ಲೂ ತಮ್ಮ ತಮ್ಮ ಪ್ರತಿಭೆಗಳನ್ನು ತೋರಿ ಸೈ ಎನಿಸಿಕೊಂಡವರು ಹಲವರಾದರೆ, ಸೈ ಎನಿಸಿಕೊಳ್ಳಲು ತಯಾರಾಗಿರುವವರು ಇನ್ನು ಕೆಲವರು.

ಬಾಲಿವುಡ್ ನ ಖ್ಯಾತ ಸ್ಟಾರ್ ನಟಿ ಕಮ್ ಮಾಜಿ ವಿಶ್ವ ಸುಂದರಿ ಐಶ್ವರ್ಯ ರೈ ಬಚ್ಚನ್, ಟಬು, ಹಾಟ್ ಬೆಡಗಿ ಮಲ್ಲಿಕಾ ಶೆರಾವತ್, ಫ್ರೀಡಾ ಪಿಂಟೋ, ಮುಂತಾದವರು ಈಗಾಗಲೇ ಹಾಲಿವುಡ್ ಕ್ಷೇತ್ರದಲ್ಲಿ ಮಿಂಚಿ ಅಲ್ಲೂ ಪ್ರೇಕ್ಷಕರ ಮೆಚ್ಚುಗೆ ಗಳಿಸಿದ್ದಾರೆ.[ಕಿಂಗ್ ಫಿಶರ್ ಕ್ಯಾಲೆಂಡರ್ ಗರ್ಲ್ಸ್ ಈಗ ಬಿಟೌನ್ ಸ್ಟಾರ್ ನಟಿಯರು]

ಅಂದಹಾಗೆ ಹಾಲಿವುಡ್ ಕ್ಷೇತ್ರದಲ್ಲಿ ಯಾರೆಲ್ಲಾ ಸ್ಟಾರ್ ನಟಿಯರು ಅಭಿನಯಿಸಿದ್ದಾರೆ, ಹಾಗೂ ಯಾರೆಲ್ಲಾ ಇನ್ನು ಮುಂದೆ ಹಾಲಿವುಡ್ ಸಿನಿಮಾಗಳಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಎಂಬುದನ್ನು ನೋಡಲು ಸ್ಲೈಡ್ಸ್ ಕ್ಲಿಕ್ ಮಾಡಿ..

ನಟಿ ಐಶ್ವರ್ಯ ರೈ ಬಚ್ಚನ್

ಬಚ್ಚನ್ ಫ್ಯಾಮಿಲಿಯ ಸೊಸೆ ಐಶ್ವರ್ಯ ರೈ ಬಚ್ಚನ್ ಅವರು 'ದಿ ಲಾಸ್ಟ್ ಲೀಜನ್' ಎಂಬ ಹಾಲಿವುಡ್ ಸಿನಿಮಾದ ಮೂಲಕ ಮೊದಲ ಬಾರಿಗೆ ಹಾಲಿವುಡ್ ಕ್ಷೇತ್ರದಲ್ಲಿ ಮಿಂಚಿದರು. ಬೆನ್ ಕಿಂಗ್ಸ್ಲೇ ಮತ್ತು ಕೊಲಿನ್ ಫರ್ತ್ ಅವರ ಜೊತೆ ನಟಿಸಿದ್ದರು.[ಇದು ಐಶ್ವರ್ಯನಾ? ಗುಡಿಯಲ್ಲಿ ಬಚ್ಚನ್ ಸೊಸೆ ಕಸ ಗುಡಿಸಿದ್ರಾ?]

ನಟಿ ಟಬು

2007 ರಲ್ಲಿ ಬಾಲಿವುಡ್ ನಟಿ ಟಬು ಅವರು 'ನೇಮ್ಸೇಕ್' ಹಾಗೂ 2012ರಲ್ಲಿ ಫೇಮಸ್ ಸಿನಿಮಾ 'ಲೈಫ್ ಆಫ್ ಫೈ' ಸಿನಿಮಾದಲ್ಲಿ ನಟಿಸುವ ಮೂಲಕ ಹಾಲಿವುಡ್ ಕ್ಷೇತ್ರದಲ್ಲೂ ಒಂದು ಕೈ ನೋಡಿದ್ದರು.

ಫ್ರೀಡಾ ಪಿಂಟೋ

'ಆಸ್ಕರ್' ಪ್ರಶಸ್ತಿ ಗಳಿಸಿದ 'ಸ್ಲಂ ಡಾಗ್ ಮಿಲಿಯನೇರ್' ಸಿನಿಮಾ ಖ್ಯಾತಿಯ ನಟಿ ಫ್ರೀಡಾ ಪಿಂಟೋ ಅವರು ಭಾರತದವರಾದರೂ ಹೆಚ್ಚಾಗಿ ಮಿಂಚಿದ್ದು ಮಾತ್ರ ಹಾಲಿವುಡ್ ಸಿನಿಮಾ ಕ್ಷೇತ್ರದಲ್ಲಿ.

ಹಾಟ್ ಬೆಡಗಿ ಮಲ್ಲಿಕಾ ಶೆರಾವತ್

ಬಿಟೌನ್ ನ ಹಾಟ್ ಬೆಡಗಿ ಅಂತಾನೇ ಖ್ಯಾತಿ ಗಳಿಸಿರುವ ಮಲ್ಲಿಕಾ ಶೆರಾವತ್ ಅವರು 2010 ರಲ್ಲಿ 'ಹಿಸ್' ಎಂಬ ಸಿನಿಮಾದಲ್ಲಿ ಹಾಗೂ 2011 ರಲ್ಲಿ 'ಪೊಲಿಟಿಕ್ಸ್ ಆಫ್ ಲವ್' ಎಂಬ ಸಿನಿಮಾದಲ್ಲಿ ಕಾಣಿಸಿಕೊಂಡಿದ್ದರು.[ಹರಿಯಾಣದಲ್ಲಿ ಹಿಂಸಾಚಾರ; ಮಲ್ಲಿಕಾ ಶೆರಾವತ್ ಹೇಳುವುದೇನು?]

ನಿಮೃತ್ ಕೌರ್

ಇತ್ತೀಚೆಗೆ ಅಕ್ಷಯ್ ಕುಮಾರ್ ಅವರ ಜೊತೆ 'ಏರ್ ಲಿಫ್ಟ್' ಚಿತ್ರದಲ್ಲಿ ಮಿಂಚಿದ್ದ ಬಾಲಿವುಡ್ ನಟಿ ನಿಮೃತ್ ಕೌರ್ ಅವರು 'ಹೋಮ್ ಲ್ಯಾಂಡ್' ಎಂಬ ಹಾಲಿವುಡ್ ಟಿವಿ ಸೀರಿಸ್ ನಲ್ಲಿ ಮಿಂಚಿದ್ದರು.

ನಟಿ ನರ್ಗಿಸ್ ಫಕ್ರಿ

2005 ರಲ್ಲಿ 'ಸ್ಪೇ' ಎಂಬ ಸಿನಿಮಾದ ಮೂಲಕ ಮೊಟ್ಟ ಮೊದಲ ಬಾರಿಗೆ ಹಾಲಿವುಡ್ ಕ್ಷೇತ್ರದಲ್ಲಿ ಮಿಂಚಿದ್ದರು.

ಪ್ರಿಯಾಂಕ ಚೋಪ್ರಾ

ಮಾಜಿ ವಿಶ್ವಸುಂದರಿ ನಟಿ ಪ್ರಿಯಾಂಕ ಚೋಪ್ರಾ ಅವರು ಮೊದಲ ಬಾರಿಗೆ 'ಕ್ವಾಂಟಿಕೋ' ಎಂಬ ಸೀರಿಯಲ್ ನಲ್ಲಿ ಮೊದಲ ಬಾರಿಗೆ ಮಿಂಚಿದರೆ, ಇದೀಗ ಎರಡನೇ ಬಾರಿಗೆ 'ಬೇವಾಚ್' ಎಂಬ ಸಿನಿಮಾದಲ್ಲಿ ವಿಲನ್ ರೋಲ್ ನಲ್ಲಿ ಸಖತ್ ಹಾಟ್ ಆಗಿ ಮಿಂಚಲಿದ್ದಾರೆ.['ಆಸ್ಕರ್ ಪ್ರಶಸ್ತಿ'ಯಲ್ಲಿ ಮಿಂಚಲು ಪಿಗ್ಗಿ ಮಾಡಿದ ಖರ್ಚೆಷ್ಟು?]

ದೀಪಿಕಾ ಪಡುಕೋಣೆ

ಬಾಲಿವುಡ್ ನ ಲಕ್ಕಿ ಗರ್ಲ್ ದೀಪಿಕಾ ಪಡುಕೋಣೆ ಅವರು ಸದ್ಯಕ್ಕೆ ವಿನ್ ಡೀಸೆಲ್ ಅವರ ಜೊತೆ 'XXX' ಎಂಬ ಸಿನಿಮಾದ ಶೂಟಿಂಗ್ ನಲ್ಲಿ ಬ್ಯುಸಿಯಾಗಿದ್ದಾರೆ. ಜೊತೆಗೆ 'ಬ್ರಾಡ್ ಪಿಟ್' ಎಂಬ ಸಿನಿಮಾಗೂ ಸಹಿ ಹಾಕಿದ್ದಾರೆ.[ದೀಪಿಕಾ ಪಡುಕೋಣೆ ಬಗ್ಗೆ ನಿಮಗೆ ಗೊತ್ತಿರದ 9 ಸಂಗತಿಗಳು]

ನಟಿ ಗೌಹರ್ ಖಾನ್

ನಟಿ ಗೌಹರ್ ಖಾನ್ ಅವರು ಒಂದು ಹಾಲಿವುಡ್ ಸಾಂಗ್ ಹಾಗೂ ಅತ್ಯಂತ ಬಿಗ್ ಬಜೆಟ್ ನ ಸಿನಿಮಾ 'ಸೋಲಾರ್ ಎಕ್ಲಿಪ್ಸ್- ಡೆಪ್ತ್ ಆಫ್ ಡಾರ್ಕ್ ನೆಸ್' ಎಂಬ ಸಿನಿಮಾದ ಮೂಲಕ ಮೊದಲ ಬಾರಿಗೆ ಹಾಲಿವುಡ್ ಸಿನಿ ಕ್ಷೇತ್ರದಲ್ಲಿ ಕಮಾಲ್ ಮಾಡಲಿದ್ದಾರೆ.

ಜಾಕ್ವೇಲಿನ್ ಪೆರ್ನಾಂಡೀಸ್

'ಕಿಕ್' ಹಾಗೂ 'ರಾಯ್' ಸಿನಿಮಾ ಖ್ಯಾತಿಯ ನಟಿ ಜಾಕ್ವೇಲಿನ್ ಪೆರ್ನಾಂಡೀಸ್ ಅವರು ರೆಪ್ಪರ್ ಪಿಟ್ ಬುಲ್ ಅವರ ಮುಂದಿನ ಹಾಲಿವುಡ್ ಮ್ಯೂಸಿಕ್ ವಿಡಿಯೋ ಒಂದರಲ್ಲಿ ನಟಿಸಲು ಎಲ್ಲಾ ತಯಾರಿ ನಡೆಸುತ್ತಿದ್ದಾರೆ.

English summary
Top 10 Bollywood Actresses who Reached Hollywood film Industry

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada