»   » ಸೇತುವೆ ಮೇಲಿಂದ ಧುಮುಕಿ ಸ್ಟಾರ್ ನಿರ್ದೇಶಕ ಆತ್ಮಹತ್ಯೆ

ಸೇತುವೆ ಮೇಲಿಂದ ಧುಮುಕಿ ಸ್ಟಾರ್ ನಿರ್ದೇಶಕ ಆತ್ಮಹತ್ಯೆ

Posted By:
Subscribe to Filmibeat Kannada
Tony Scott
ಹಾಲಿವುಡ್ ನ ಸ್ಟಾರ್ ನಿರ್ದೇಶಕ ಎಂದೇ ಖ್ಯಾತರಾಗಿದ್ದ ಟೋನಿ ಸ್ಕಾಟ್ ಅವರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಸ್ಯಾನ್ ಪೆಡ್ರೋದಲ್ಲಿರುವ ಲಾಸ್ ಏಂಜಲಿಸ್ ಕಂಟ್ರಿ ಬ್ರಿಡ್ಜ್ (ವಿನ್ಸೆಂಟ್ ಥಾಮಸ್ ಬ್ರಿಡ್ಜ್)ಮೇಲಿಂದ ಹಾರಿ ಅವರು ತಮ್ಮ ಪ್ರಾಣವನ್ನು ಕಳೆದುಕೊಂಡಿದ್ದಾರೆ. ಅವರಿಗೆ 68 ವರ್ಷ ವಯಸ್ಸಾಗಿತ್ತು.

ಈ ಸಂಬಂಧ ಲಾಸ್ ಏಂಜಲಿಸ್ ಕಂಟ್ರಿ ಕರೋನೆರ್ ಲೆಫ್ಟಿನೆಂಟ್ ಜೋ ಬೌಲಿ ಅವರು ಮಾತನಾಡುತ್ತಾ, ಟೋನಿ ಸ್ಕಾಟ್ ಆವರದು ಆತ್ಮಹತ್ಯೆಯಾಗಿದ್ದು ಈ ಬಗ್ಗೆ ತನಿಖೆ ನಡೆಸಲು ಸೂಚಿಸಲಾಗಿದೆ ಎಂದಿದ್ದಾರೆ. ಟೋನಿ ಸ್ಕಾಟ್ ಅವರು ಭಾನುವಾರ (ಆ.19) ಲಾಸ್ ಏಂಜಲ್ಸ್ ಕಂಟ್ರಿ ಬ್ರಿಡ್ಜ್ ನಿಂದ ಬಿದ್ದು ಆತ್ಮಹತ್ಯೆ ಮಾಡಿಕೊಂದಿದ್ದಾರೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿತ್ತು.

ಸುಮಾರು 68 ವರ್ಷ ವಯಸ್ಸಾಗಿದ್ದ ಟೋನಿ ಸ್ಕಾಟ್ ಅವರು ವಿನ್ಸೆಂಟ್ ಬ್ರಿಡ್ಜ್ ಎಂದು ಕರೆಯಲ್ಪಡುವ ಲಾಸ್ ಏಂಜಲ್ಸ್ ಕಂಟ್ರಿ ಬ್ರಿಡ್ಜ್ ಮೇಲಿಂದ ಧುಮುಕಿ ಆತ್ಮಹತ್ಯೆ ಮಾಡಿಕೊಂಡಿದ್ದನ್ನು ಹಲವಾರು ಪ್ರತ್ಯಕ್ಷ ದರ್ಶಿಗಳು ಕಣ್ಣಾರೆ ಕಂಡಿದ್ದಾಗಿ ತಿಳಿಸಿದ್ದಾರೆ.

ಆತ್ಮಹತ್ಯೆಗೂ ಮುನ್ನ ಟೋನಿ ತಮ್ಮ ಕಾರನ್ನು ಟೋಯೋಟಾ ಪ್ರಿಯುಸ್ ಬ್ರಿಡ್ಜ್ ಸಮೀಪ ಬೀದಿಯಲ್ಲಿ ಪಾರ್ಕ್ ಮಾಡಿದ್ದರು ಎಂದು ಅಮೆರಿಕಾ ಕೋಸ್ಟ್ ಗಾರ್ಡ್ ಅಧಿಕಾರಿ ಜೆನ್ನಿಫರ್ ಓಸ್ ಬರ್ನ್ಸ್ ತಿಳಿಸಿದ್ದಾರೆ. ಈ ಕಾರಿನಲ್ಲಿ ಟೋನಿ ಬರೆದಿಟ್ಟಿರುವ ಡೆತ್ ನೋಟ್ ಕೂಡ ಸಿಕ್ಕಿದೆ. ಡೆತ್ ನೋಟ್ ನಲ್ಲಿ ಏನಿದೆ ಎಂದು ಬಹಿರಂಗಪಡಿಸಿಲ್ಲ.

ಹಾಲಿವುಡ್ ನಲ್ಲಿ ಟಾಪ್ ಗನ್, ಮ್ಯಾನ್ ಆನ್ ಫೈರ್, ಬೇವರ್ಲಿ ಹಿಲ್ಸ್ ಕಾಪ್ 2 ಸೇರಿದಂತೆ ಹಲವಾರು ಚಿತ್ರಗಳನ್ನು ನಿರ್ದೇಶಿಸಿದ್ದಾರೆ. ಈ ಚಿತ್ರಗಳೆಲ್ಲವೂ ಭಾರಿ ಕಲೆಕ್ಷನ್ ಮೂಲಕ ಬಾಕ್ಸಾಫೀಸಲ್ಲಿ ಹೊಸ ದಾಖಲೆ ಸೃಷ್ಟಿಸಿದ್ದವು. ಹಾಲಿವುಡ್ ನ ಗೌರವಾನ್ವಿತ ನಿರ್ದೇಶಕರಾಗಿ ಅವರು ಗುರುತಿಸಿಕೊಂಡಿದ್ದರು. (ಏಜೆನ್ಸೀಸ್)

English summary
Tony Scott, director of such Hollywood blockbusters as " Top Gun," " Days of Thunder" and "Beverly Hills Cop II," has died after jumping from a Los Angeles County Bridge.
Please Wait while comments are loading...