For Quick Alerts
  ALLOW NOTIFICATIONS  
  For Daily Alerts

  ನಟಿ ಹೇಮಾ ಕಾಲಿಗೆ ನಮಸ್ಕಾರ ಮಾಡಿದ್ದರು ರಾಜ್ ಕುಮಾರ್!

  |
  'ಅಮೆರಿಕಾ ಅಮೆರಿಕಾ' ಚಿತ್ರದ ನಟಿ ಹೇಮಾ ಜೊತೆ Exclusive Talk | Hema Prabath | Filmibeat Kannada

  ವರನಟ ಡಾ ರಾಜ್ ಕುಮಾರ್ ಸರಳತೆಯ ಸಾಹುಕಾರ. ಈಗಾಗಲೇ ಅನೇಕರು ರಾಜ್ ಕುಮಾರ್ ಸರಳತೆ ಬಗ್ಗೆ ಮಾತನಾಡಿದ್ದಾರೆ. ರಾಜ್ ಅವರ ಸರಳತೆಯನ್ನು ಕಣ್ಣಾರೆ ಕಂಡ ನಟಿ ಇದೀಗ ಆ ವಿಷಯವನ್ನು ಹಂಚಿಕೊಂಡಿದ್ದಾರೆ.

  'ಅಮೇರಿಕಾ ಅಮೇರಿಕಾ' ಖ್ಯಾತಿಯ ನಟಿ ಹೇಮಾ ಪ್ರಭಾತ್ 'ಫಿಲ್ಮಿಬೀಟ್ ಕನ್ನಡ' ಸಂದರ್ಶನದಲ್ಲಿ ಅನೇಕ ಕುತೂಹಲಕಾರಿ ವಿಷಯಗಳ ಬಗ್ಗೆ ಮಾತನಾಡಿದ್ದಾರೆ. ಅದರಲ್ಲಿಯೂ ರಾಜ್ ಕುಮಾರ್ ಸಿನಿಮಾದಲ್ಲಿ ನಟಿಸುವಾಗ ಆದ ಒಂದು ಘಟನೆಯನ್ನು ತಿಳಿಸಿದ್ದಾರೆ.

  ಈ ಕಾರಣಕ್ಕಾಗಿ ರಜನಿಕಾಂತ್ ಚಿತ್ರ ತಿರಸ್ಕರಿಸಿದ್ದರು 'ಅಮೆರಿಕಾ ಅಮೆರಿಕಾ' ನಟಿ ಹೇಮಾ!ಈ ಕಾರಣಕ್ಕಾಗಿ ರಜನಿಕಾಂತ್ ಚಿತ್ರ ತಿರಸ್ಕರಿಸಿದ್ದರು 'ಅಮೆರಿಕಾ ಅಮೆರಿಕಾ' ನಟಿ ಹೇಮಾ!

  'ಜೀವನ ಚೈತ್ರ' ಸಿನಿಮಾದಲ್ಲಿ ರಾಜ್ ಕುಮಾರ್ ರೊಂದಿಗೆ ನಟಿಸುವ ಅದೃಷ್ಟ ಹೇಮಾರಿಗೆ ಸಿಕ್ಕಿತ್ತು. ಈ ಚಿತ್ರದ ಚಿತ್ರೀಕರಣದ ವೇಳೆ ನಡೆದ ಈ ಘಟನೆಯನ್ನು ಹೇಮ ತಮ್ಮ ಜೀವನದಲ್ಲಿ ಮರೆಯುವುದಿಲ್ಲ.

  ಹೇಮ ಸಿನಿಮಾ ಎಂಟ್ರಿಗೆ ಕಾರಣ ರಾಜ್ ಕುಮಾರ್

  ಹೇಮ ಸಿನಿಮಾ ಎಂಟ್ರಿಗೆ ಕಾರಣ ರಾಜ್ ಕುಮಾರ್

  ರಾಜ್ ಕುಮಾರ್ ರಿಗೆ ಹೇಮಾ ಕುಟುಂಬದ ತುಂಬ ವರ್ಷಗಳಿಂದ ಪರಿಚಯ ಇತ್ತು. ಹೇಮ ಚಿಕ್ಕ ವಯಸ್ಸಿನ ಹುಡುಗಿ ಆಗಿದ್ದಾಗಿನಿಂದ ಅವರನ್ನು ರಾಜ್ ಕುಮಾರ್ ನೋಡಿಕೊಂಡು ಬಂದಿದ್ದರು. ಅಲ್ಲದೆ ಹೇಮಾ ಸಿನಿಮಾ ಎಂಟ್ರಿಗೆ ಸಹ ಅವರೇ ಕಾರಣರಾದರು. ನೃತ್ಯ, ನಾಟಕದಲ್ಲಿ ಇದ್ದ ಹೇಮಾ 'ಜೀವನ ಚೈತ್ರ' ಸಿನಿಮಾದಲ್ಲಿ ಸಣ್ಣ ಪಾತ್ರ ಮಾಡುವ ಮೂಲಕ ಚಿತ್ರರಂಗಕ್ಕೆ ಬಂದರು.

  ಹೇಮಾ ಕಾಲಿಗೆ ರಾಜ್ ನಮಸ್ಕಾರ

  ಹೇಮಾ ಕಾಲಿಗೆ ರಾಜ್ ನಮಸ್ಕಾರ

  'ಜೀವನ ಚೈತ್ರ' ಸಿನಿಮಾದ 'ನಾದ ಮಯ..' ಹಾಡಿನಲ್ಲಿ ಸರಸ್ವತಿ ಪಾತ್ರದಲ್ಲಿ ಹೇಮ ಕಾಣಿಸಿಕೊಂಡಿದ್ದರು. ಸರಸ್ವತಿ ವೇಷ ತೊಟ್ಟು ವೀಣೆ ಹಿಡಿದು ಹೇಮ ಕುಳಿತಿದ್ದರು. ಆ ವೇಳೆ ರಾಜ್ ಕುಮಾರ್ ಹೇಮಾ ಕಾಲಿಗೆ ನಮಸ್ಕಾರ ಮಾಡಿದರು. ಆ ಕ್ಷಣ ಹೇಮಾಗೆ ಏನು ಮಾಡುವುದು ತಿಳಿಯಲಿಲ್ಲ, ಆಗ ತಕ್ಷಣ ತಾವು ಕೂಡ ರಾಜ್ ಕುಮಾರ್ ಕಾಲಿಗೆ ಬಿದ್ದರು.

  ಸರಸ್ವತಿ ಪಾತ್ರ

  ಸರಸ್ವತಿ ಪಾತ್ರ

  ತನ್ನ ಕಾಲಿಗೆ ನಮಸ್ಕಾರ ಮಾಡಿದ ಹೇಮಾರನ್ನು ರಾಜ್ ಕುಮಾರ್ ಮೇಲೆ ಎತ್ತಿದ್ದರು. ನೀನು ಯಾರ ಕಾಲಿಗೂ ನಮಸ್ಕಾರ ಮಾಡಬಾರದು. ನೀನು ಸರಸ್ವತಿ ಪಾತ್ರ ಮಾಡುತ್ತಿದ್ದೀಯಾ. ಆ ಪಾತ್ರಕ್ಕೆ ಬೆಲೆ ನೀಡಬೇಕು. ನಿನ್ನ ಮನಸ್ಸಿನ ಒಳಗೆ ನೀನೆ ಸರಸ್ವತಿ ಎಂದುಕೊಳ್ಳಬೇಕು ಎಂದು ಹೇಳಿದರು. ನಾನು ನಮಸ್ಕಾರ ಮಾಡಿದ್ದು ಸರಸ್ವತಿಗೆ ಎಂದರು.

  ಪಾತ್ರದ ಮಹತ್ವ ತಿಳಿದ ಹೇಮಾ

  ಪಾತ್ರದ ಮಹತ್ವ ತಿಳಿದ ಹೇಮಾ

  ರಾಜ್ ಕುಮಾರ್ ತಮ್ಮ ಕಾಲಿಗೆ ನಮಸ್ಕಾರ ಮಾಡಿದಾಗ ಹೇಮಾ ನಡುಗಿರು. ಆದರೆ, ಆ ನಂತರ ಅದರ ಕಾರಣವನ್ನು ರಾಜ್ ಕುಮಾರ್ ತಿಳಿಸಿದರು. ಆ ನಂತರ ಒಂದು ಪಾತ್ರದ ಮಹತ್ವವನ್ನು ಹೇಮ ಅರ್ಥ ಮಾಡಿಕೊಂಡರಂತೆ. ಪಾತ್ರ ಎಂದರೆ ನಾವು ಧರಿಸುವ ಬಟ್ಟೆಯಲ್ಲ.. ಅದು ನಮ್ಮ ಮನಸ್ಸಿನ ಒಳಗೂ ಇರಬೇಕು ಎಂದು ತಿಳಿದರಂತೆ.

  English summary
  Kannada actress Hema Prabhath spoke about Dr Rajkumar.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X