»   » ಏರ್ ಲೈನ್ಸ್ ಕಂಪನಿಯ ಉದ್ಯೋಗಿ ಈಗ ಸೂರ್ಯದೇವ

ಏರ್ ಲೈನ್ಸ್ ಕಂಪನಿಯ ಉದ್ಯೋಗಿ ಈಗ ಸೂರ್ಯದೇವ

Posted By:
Subscribe to Filmibeat Kannada
ಶನಿ ಧಾರಾವಾಹಿಯ ಸೂರ್ಯ ದೇವಾ ಏರ್ ಲೈನ್ಸ್ ಕಂಪನಿಯ ಉದ್ಯೋಗಿ | ಇಲ್ಲಿದೆ ಫುಲ್ ಡೀಟೇಲ್ಸ್ | Filmibeat Kannada

ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರತಿನಿತ್ಯ ಪ್ರಸಾರ ಆಗುವ ಧಾರಾವಾಹಿ ಶನಿ. ಕಲಾವಿದರ ಅಭಿನಯ ಮತ್ತು ತಂತ್ರಜ್ಙಾನದಿಂದಲೇ ಪ್ರೇಕ್ಷಕರ ಗಮನವನ್ನು ಸೆಳೆದಿರುವ ಶನಿ ಧಾರಾವಾಹಿಯಲ್ಲಿ ಶನಿಯಷ್ಟೇ ನೋಡುಗರಆಕರ್ಷಣೆ ಮಾಡಿರುವ ಪಾತ್ರ ಸೂರ್ಯದೇವ. ಕನ್ನಡಿಗರ ಮನಸ್ಸಿನಲ್ಲಿ ಸೂರ್ಯ ದೇವಾ ಎಂದರೇ ಇವರೇ ಎನ್ನುವಷ್ಟರ ಮಟ್ಟಿಗೆ ಉಳಿದು ಹೋಗಿರುವ ಸೂರ್ಯನ ಪಾತ್ರಧಾರಿ ರಂಜಿತ್ ಈ ಹಿಂದೆ ಸಾಕಷ್ಟು ಸಿನಿಮಾ ಹಾಗೂ ಧಾರಾವಾಹಿಯಲ್ಲಿ ಅಭಿನಯಿಸಿದ್ದಾರೆ.

ರಂಜಿತ್ ಕುಮಾರ್ ಅಭಿನಯಿಸಿದ ಸಿನಿಮಾ ಧಾರಾವಾಹಿಗಳ ಹೆಸರನ್ನ ತಿಳಿಸಿದರೆ ಅರೆ ಇದು ಅದೇ ಕಲಾವಿದನಾ? ಎನ್ನುಷ್ಟು ಆಶ್ಚರ್ಯ ನಿಮಗೆ ಆಗುತ್ತದೆ. ಏಕೆಂದರೆ ರಂಜಿತ್ ಅಭಿನಯದಲ್ಲಿ ಸಾಕಷ್ಟು ಬದಲಾವಣೆಗಳು ಆಗಿವೆ. ಶನಿ ಪಾತ್ರಧಾರಿಯ ರೀತಿಯಲ್ಲೇ ರಂಜಿತ್ ಕೂಡ ಧಾರಾವಾಹಿಗೆ ಆಯ್ಕೆ ಆಗಿದ್ದು ತುಂಬಾನೇ ಇಂಟ್ರೆಸ್ಟಿಂಗ್.

500 ಜನರಲ್ಲಿ 'ಶನಿ' ಪಾತ್ರಕ್ಕೆ ಸುನೀಲ್ ಆಯ್ಕೆಯಾಗಲು ಈ ಡೈಲಾಗ್ ಕಾರಣ

ಉದ್ಯೋಗವನ್ನ ಬಿಟ್ಟು ಹವ್ಯಾಸಕ್ಕಾಗಿ ಬಣ್ಣ ಹಚ್ಚಿದ ರಂಜಿತ್ ಈಗ ರಾಜ್ಯದ ಜನಮನವನ್ನು ಗೆದ್ದಿರುವ ಸೂರ್ಯದೇವ. ಸೂರ್ಯನ ಪಾತ್ರಕ್ಕೆ ರಂಜಿತ್ ಕುಮಾರ್ ತಯಾರಿ ಹೇಗಿತ್ತು? ಈ ಹಿಂದೆ ರಂಜಿತ್ ಅಭಿನಯದ ಪಾತ್ರಗಳು ಯಾವುವು? ಪ್ರತಿ ನಿತ್ಯ ಸೂರ್ಯದೇವಾ ಎಷ್ಟು ತೂಕವಿರುವ ಕಾಸ್ಟ್ಯೂಮ್ಸ್ ಧರಿಸಿ ಅಭಿನಯಿಸುತ್ತಾರೆ? ಈ ಎಲ್ಲಾ ಪ್ರಶ್ನೆಗಳಿಗೆ ರಂಜಿತ್ ಈ ಸಂದರ್ಶನದಲ್ಲಿ ಉತ್ತರಿಸಿದ್ದಾರೆ. ಮುಂದೆ ಓದಿ

ಈ ಹಿಂದೆ ಯಾವ ಧಾರಾವಾಹಿಗಳಲ್ಲಿ ಅಭಿನಯಿಸಿದ್ದೀರಾ ?

ಹತ್ತು ವರ್ಷದಿಂದ ಅಭಿನಯ ಆರಂಭ ಮಾಡಿದ್ದು, ಅಮೃತವರ್ಷಿಣಿ, ಮೀರಾ ಮಾಧವಾ, ಅವನು ಮತ್ತೆ ಶ್ರಾವಣಿ, ರಾಧ ಕಲ್ಯಾಣ, ರಥಸಪ್ತಮಿ, ಚಿಟ್ಟೆ ಹೆಜ್ಜೆ. ಸಾಕಷ್ಟು ಸಿನಿಮಾ ಮತ್ತು ಸೀರಿಯಲ್ ನಲ್ಲಿ ಆಕ್ಟ್ ಮಾಡಿದ್ದೇನೆ.

ಸೂರ್ಯನಾಗಲು ಅವಕಾಶ ಸಿಕ್ಕಿದ್ದು ಹೇಗೆ ?

ಶನಿ ಪ್ರೊಡಕ್ಷನ್ ಟೀಂ ನವರು ಬೆಂಗಳೂರಿಗೆ ಬಂದಾಗ ಆಡಿಷನ್ ಗೆ ಬರಲು ತಿಳಿಸಿದ್ದರು. ಆಡಿಷನ್ ಕೊಟ್ಟಾಗ ನಿಮ್ಮ ಧ್ವನಿ ಚೆನ್ನಾಗಿದೆ. ನೀವೇ ಸೂರ್ಯನ ಪಾತ್ರ ಮಾಡಬೇಕು ಎಂದರು. ನನಗೂ ತುಂಬಾ ದಿನಗಳಿಂದ ಪೌರಾಣಿಕ ಪಾತ್ರ ಮಾಡಬೇಕೆಂದು ಆಸೆ ಇತ್ತು ಅದಕ್ಕಾಗಿ ಒಪ್ಪಿಗೆ ಕೊಟ್ಟೆ.

ನಿಮ್ಮ ಔಟ್ ಲುಕ್ ಬಗ್ಗೆ ಹೇಳಿ?

ಸೂರ್ಯನ ಪಾತ್ರಕ್ಕೆ ವೇಷ ಭೂಷಣವೇ ಅಲಂಕಾರ ಎಂದು ಅದೆಷ್ಟೋ ಸಲ ಅನ್ನಿಸಿದೆ. ಮೊದಮೊದಲಿಗೆ ಕಷ್ಟ ಎನ್ನಿಸುತ್ತಿತ್ತು ಆದರೆ ಈಗ ಅಭ್ಯಾಸ ಆಗಿದೆ. ಸುಮಾರು 22 ಕೆಜಿ ತೂಕವಿರುವ ಬಟ್ಟೆ ಹಾಗೂ ಆಭರಣಗಳನ್ನ ಹಾಕಿಕೊಂಡು ಅಭಿನಯ ಮಾಡಬೇಕು.

ಪೌರಾಣಿಕ ಪಾತ್ರ ಮಾಡಲು ಸ್ಫೂರ್ತಿ ಯಾರು?

ಡಾ ರಾಜ್ ಕುಮಾರ್ ಅವರ ಸಿನಿಮಾಗಳನ್ನ ನೋಡಿದಾಗ ಅವರಂತೆ ಪೌರಾಣಿಕ ಪಾತ್ರಗಳಲ್ಲಿ ಅಭಿನಯಿಸಬೇಕು ಎನ್ನುವ ಆಸೆ ಇತ್ತು. ಈಗ ಅದು ನನಸಾಗಿದೆ. ನನ್ನ ಧ್ವನಿ ಹಾಗೂ ಮ್ಯಾನರಿಸಂ ಎಲ್ಲವೂ ಪಾತ್ರ ಚೆನ್ನಾಗಿ ಮೂಡಿ ಬರಲು ಉಪಯೋಗವಾಗುತ್ತಿದೆ.

ಸೂರ್ಯನ ಪಾತ್ರಕ್ಕೆ ಪ್ರತಿಕ್ರಿಯೆ ಹೇಗಿದೆ?

ತುಂಬಾ ಚೆನ್ನಾಗಿದೆ. ಆದರೆ ನಮಗೆ ಜನರ ಬಳಿ ಮಾತನಾಡಲು ಸಮಯವೇ ಸಿಗುವುದಿಲ್ಲ. ಅಷ್ಟು ಕೆಲಸವಿರುತ್ತದೆ. ಬಿಡುವಾದಾಗ ಫೇಸ್ ಬುಕ್, ವಾಟ್ಸ್ ಆಪ್ ನಲ್ಲಿ ಮೆಸೆಜ್ ಗಳ ಮೂಲಕ ನಮ್ಮ ಅಭಿನಯದ ಬಗ್ಗೆ ಬರುವ ಪ್ರಶಂಸೆಯನ್ನ ತಿಳಿದುಕೊಳ್ಳುತ್ತೇನೆ. ಅದೆಷ್ಟೋ ಜನರು ಭೇಟಿ ಮಾಡಬೇಕು ಎಂದು ಕೇಳಿಕೊಳ್ಳುತ್ತಾರೆ. ಆದಷ್ಟು ಬೇಗ ಅವರನ್ನೆಲ್ಲಾ ಭೇಟಿ ಮಾಡುತ್ತೇನೆ.

ಶತದಿನೋತ್ಸವ ಶನಿ ಧಾರಾವಾಹಿಯ ಪಾತ್ರ ಪರಿಚಯ

Read more about: colors kannada tv shani ಟಿವಿ
English summary
Kannada serial Shani Surya character actor Ranjith Kumar interview, shani serial telecasting in Colors Kannada Channel. Raghavendra Hegde is directing the shani serial

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada

X