»   » ನಾನು ನಿರ್ದೇಶನಕ್ಕಿಳಿದಾಗ ಜನ ನಕ್ಕಿದ್ರು: ಅರ್ಜುನ್ ಸರ್ಜಾ

ನಾನು ನಿರ್ದೇಶನಕ್ಕಿಳಿದಾಗ ಜನ ನಕ್ಕಿದ್ರು: ಅರ್ಜುನ್ ಸರ್ಜಾ

By: ಹರ್ಷಿತಾ.ಎನ್
Subscribe to Filmibeat Kannada

ಆಕ್ಷನ್ ಕಿಂಗ್ ಅರ್ಜುನ್ ಸರ್ಜಾ ನಟಿಸಿ, ನಿರ್ಮಿಸಿ, ನಿರ್ದೇಶಿಸಿರುವ ಸ್ಯಾಂಡಲ್ ವುಡ್ ನ ಮೋಸ್ಟ್ ಎಕ್ಸ್ ಪೆಕ್ಟೆಡ್ ಸಿನಿಮಾ 'ಅಭಿಮನ್ಯು' ಇದೇ ಶುಕ್ರವಾರ ರಾಜ್ಯಾದ್ಯಂತ ರಿಲೀಸ್ ಆಗ್ತಿದೆ. ಕನ್ನಡದಲ್ಲಿ 'ಅಭಿಮನ್ಯು'ವಾಗಿ, ತೆಲುಗು ಮತ್ತು ತಮಿಳಿನಲ್ಲಿ 'ಜೈಹಿಂದ್-2' ಆಗಿ ಬಿಡುಗಡೆಯಾಗುತ್ತಿದೆ. ಕನ್ನಡದಲ್ಲಿ ಮೊದಲ ಬಾರಿಗೆ ನಿರ್ದೇಶನ ಮಾಡುತ್ತಿರುವ ಅರ್ಜುನ್ ಸರ್ಜಾ 'ಅಭಿಮನ್ಯು' ಚಿತ್ರ ಬಿಡುಗಡೆಯ ಹೊಸ್ತಿಲಲ್ಲಿ 'ಫಿಲ್ಮಿಬೀಟ್ ಕನ್ನಡ' ಜೊತೆ ತಮ್ಮ ಅನುಭವವನ್ನ ಹಂಚಿಕೊಂಡಿದ್ದಾರೆ.

* 'ಅಭಿಮನ್ಯು' ಕನ್ನಡದ ನಿಮ್ಮ ಮೊದಲ ನಿರ್ದೇಶನದ ಚಿತ್ರ. ಮಾತೃಭಾಷೆಯಲ್ಲಿ ಮೊದಲ ಬಾರಿಗೆ ನಿರ್ದೇಶನ ಮಾಡುತ್ತಿರುವ ಅನುಭವ ಹೇಗಿತ್ತು?
ತೆಲುಗು ಮತ್ತು ತಮಿಳಿನಲ್ಲಿ ನಾನೀಗಾಗಲೇ ಡೈರೆಕ್ಷನ್ ಮಾಡಿದ್ದೀನಿ. ಕನ್ನಡದಲ್ಲಿ ಈಗ ನಿರ್ದೇಶನ ಮಾಡುತ್ತಿರುವುದು ನನಗೆ ತುಂಬಾ ಖುಷಿ ಕೊಟ್ಟಿದೆ. ನನ್ನ ಮಾತೃಭಾಷೆಯಾಗಿರೋದ್ರಿಂದ, ನಮ್ಮ ಮನೆ, ನಮ್ಮ ಜನ ನೋಡುತ್ತಾರೆ ಅಂತ ತುಂಬಾ ಮುತುವರ್ಜಿ ವಹಿಸಿ ಸಿನಿಮಾ ಮಾಡಿದ್ದೀನಿ. ನನ್ನ ಬಗ್ಗೆ ಎಕ್ಸ್ ಪೆಕ್ಟೇಷನ್ ಜಾಸ್ತಿಯಿರುವುದರಿಂದ ತುಂಬಾ ಚೆನ್ನಾಗಿ ಮಾಡ್ಬೇಕು ಅಂತ ಕಷ್ಟ ಪಟ್ಟು, ಇಷ್ಟ ಪಟ್ಟು ಮಾಡಿರೋ ಸಿನಿಮಾ ಅಭಿಮನ್ಯು.

Arjun Sarja exclusive interview on the movie Abhimanyu6

*ಎಲ್ಲೋ ಒಂದು ಕಡೆ, ನಿಮ್ಮ ಮಾತೃಭಾಷೆಯಲ್ಲಿ ನೀವೇ ನಿರ್ದೇಶನ ಮಾಡುತ್ತಿರುವುದು ಲೇಟ್ ಆಯ್ತು ಅನ್ನಿಸಲಿಲ್ವಾ..?
ಎಲ್ಲೋ ಒಂದು ಕಡೆ ಅಲ್ಲ, ಕರೆಕ್ಟಾಗಿ ಒಂದು ಕಡೆ ನಾನು ಕನ್ನಡದಲ್ಲಿ ನಿರ್ದೇಶನ ಮಾಡುತ್ತಿರುವುದು ಲೇಟೇ ಆಯ್ತು. ಈಗ ಮಾಡ್ತೀನಿ, ಆಗ ಮಾಡ್ತೀನಿ, ಅಂತ ಅಂದುಕೊಂಡೇ ತುಂಬಾ ವರ್ಷ ಕಳೆದುಹೋಯ್ತು. ಇಟ್ಸ್ ಬೆಟರ್ ಲೇಟ್ ದ್ಯಾನ್ ನೆವರ್ ಅನ್ನೋ ಹಾಗೆ ಮೇ ಬೀ ಒಳ್ಳೇ ಪಿಕ್ಚರ್ ಮಾಡೋಕೆ ಇಷ್ಟು ಲೇಟ್ ಆಯ್ತೇನೋ?

*ಈಗಿನ ಶಿಕ್ಷಣ ಸಂಸ್ಥೆ ಮತ್ತು ಭ್ರಷ್ಟಾಚಾರದ ವಿರುದ್ಧ ಅಭಿಮನ್ಯು ಚಿತ್ರದಲ್ಲಿ ಹೇಳೋಕೆ ಹೊರ್ಟಿದ್ದೀರಾ. ಇಂತ ಸಬ್ಜೆಕ್ಟ್ ನ ನೀವು ಆಯ್ದುಕೊಂಡಿದ್ದಕ್ಕೆ ಸ್ಫೂರ್ತಿ ಏನು?
ಒಡಿಶಾ ಮತ್ತು ಬಿಹಾರ್ ನಲ್ಲಿ ನಡೆದ ಘಟನೆಗಳನ್ನ ಇಟ್ಕೊಂಡು ಕಥೆ ಮಾಡಿದ್ದು. ಶಿಕ್ಷಣ ಮಕ್ಕಳಿಗೆ ಆಜನ್ಮ ಸಿದ್ಧ ಹಕ್ಕು. ಆದ್ರೆ, ನಮ್ಮ ದೇಶದಲ್ಲಿ ಮಕ್ಕಳಿಗೆ ಸಿಗಬೇಕಾದ ಬೇಸಿಕ್ ಎಜ್ಯುಕೇಷನ್ ಸಿಗ್ತಾಯಿಲ್ಲ. ಸರ್ಕಾರಿ ಶಾಲೆಗಳಲ್ಲಿ ಉಚಿತ ಶಿಕ್ಷಣ ಅಂತಾರೆ. ಆದ್ರೆ ಅದ್ರಲ್ಲಿ ಸ್ಟ್ಯಾಂಡರ್ಡ್ ಇಲ್ಲ, ಕ್ವಾಲಿಟಿ ಇಲ್ಲ. ಇಂದಿನ ಮಕ್ಕಳೇ ನಾಳೆಯ ಪ್ರಜೆಗಳು ಅಂತೀವಿ. ಆದ್ರೆ ಶಿಕ್ಷಣವೇ ಇಲ್ಲದೆ ಹೋದ್ರೆ ಹೇಗೆ..? ಎಷ್ಟೋ ಕುಟುಂಬಗಳು ತಮ್ಮ ಮಕ್ಕಳಿಗೆ ಒಳ್ಳೆಯ ಶಿಕ್ಷಣ ಕೊಡೋಕೆ ಆಗದೆ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಇದನ್ನೆಲ್ಲಾ ಅವಲೋಕಿಸಿ, ಅಂತಹ ಕುಟುಂಬಗಳ ಪ್ರತಿನಿಧಿಯಾಗಿ ಅಭಿಮನ್ಯು ಸಿನಿಮಾ ಮಾಡಿದ್ದೀನಿ.

Arjun Sarja exclusive interview on the movie Abhimanyu7

*ಹಾಗಾದ್ರೆ, ಇಂತಹ ನೈಜಕಥೆ ಮತ್ತು ಶಿಕ್ಷಣ ಸಂಸ್ಥೆಗಳ ವಸ್ತುಸ್ಥಿತಿ ಬಗ್ಗೆ ಅವಲೋಕಿಸೋಕೆ ಎಷ್ಟು ಸಮಯ ತೆಗೆದುಕೊಂಡ್ರಿ..?
ಅಭಿಮನ್ಯು ಚಿತ್ರಕಥೆಯನ್ನ ಮೂರು ವರ್ಷದಿಂದ ರೆಡಿ ಮಾಡುತ್ತಿದ್ದೀನಿ. ಆರು ವರ್ಷಗಳ ಹಿಂದೆಯೇ ಕಥೆ ಹೊಳೆದಿತ್ತು. ಒಂದುವರೆ ವರ್ಷದ ಹಿಂದೆ ಸಿನಿಮಾ ಶುರು ಮಾಡಿದ್ದು.

*ಮೂರು ಭಾಷೆಯಲ್ಲಿ ಚಿತ್ರ ನಿರ್ಮಾಣ, ನಿರ್ದೇಶನದ ಜೊತೆ ನಟನೆ, ನೀವೇ ವಿತರಣೆ ಕೂಡ ಮಾಡುತ್ತಿದ್ದೀರಿ, ತುಂಬಾ ರಿಸ್ಕ್ ಅಂತ ಅನ್ನಿಸಲಿಲ್ವಾ..?
ಒಳ್ಳೆಯ ಸಿನಿಮಾ ಮಾಡುವಾಗ ರಿಸ್ಕ್ ಅಂತ ನನಗೆ ಅನಿಸೋದೇ ಇಲ್ಲ. ಇಷ್ಟೆಲ್ಲಾ ಜವಾಬ್ದಾರಿಯನ್ನ ಇಟ್ಕೊಂಡು ಮಾಡೋದಂದ್ರೆ ಸ್ಟ್ರೇನ್ ಜಾಸ್ತಿ. ತುಂಬಾ ಕಷ್ಟದ ಕೆಲಸ. ಆದ್ರೂ, ಏನೂ ಮಾಡೋಕಾಗಲ್ಲ, ಇಷ್ಟ ಪಟ್ಟು ಮಾಡಿರೋ ಸಿನಿಮಾ. ಕಷ್ಟ ಆದ್ರೂ ಮಾಡಿದ್ದೀನಿ.

Abhimanyu1

*52ರ ಹರೆಯದಲ್ಲಿ ಎಲ್ಲಾ ಜವಾಬ್ದಾರಿಯನ್ನ ಹೊತ್ತು ಮಾರು ಭಾಷೆಯಲ್ಲಿ ಸಿನಿಮಾ ಮಾಡಿದ್ದೀರಾ..? ನಿಮ್ಮ ಎನರ್ಜಿಯ ಗುಟ್ಟೇನು...?
ಪ್ಯಾಶನ್ ಅಷ್ಟೇ. ಪ್ರತಿದಿನ 20-22 ಗಂಟೆ ಕೆಲಸ ಮಾಡ್ತೀನಿ. ಜನ ನಮ್ಮಿಂದ ತುಂಬಾ ಎಕ್ಸ್ ಪೆಕ್ಟ್ ಮಾಡ್ತಾರೆ. ಚೆನ್ನಾಗಿ ಮಾಡ್ಬೇಕು ಅನ್ನೋ ಹಠ ಇರುವುದರಿಂದ ಅದಾಗದೇ ಎನರ್ಜಿ ಬರುತ್ತೆ.

*ಅರ್ಜುನ್ ಸರ್ಜಾರನ್ನ ''ಆಕ್ಷನ್ ಕಿಂಗ್'' ಅಂತಲೇ ಜನ ಈಗಲೂ ಗುರುತಿಸುತ್ತಾರೆ. ಅಭಿಮನ್ಯು ಚಿತ್ರದಲ್ಲೂ ನಿಮ್ಮ ಹಿಂದಿನ ಚಿತ್ರಗಳಂತೆ ಎಂದಿನ ಆಕ್ಷನ್ ಎಕ್ಸ್ ಪೆಕ್ಟ್ ಮಾಡ್ಬಹುದಾ?
ಹಿಂದಿನ ತರಹ ನೋಡೋಕೆ ಸಾಧ್ಯ ಇಲ್ಲ..! ಅದಕ್ಕಿಂತ ಜಾಸ್ತಿ ಆಕ್ಷನ್ ನೋಡ್ಬಹುದು. ಹಿಂದೆ ನೀವೆಲ್ಲಾ ನೋಡಿರೋ ಆಕ್ಷನ್ ಗಿಂತ ಜಾಸ್ತಿ ಆಕ್ಷನ್ ಅಭಿಮನ್ಯು ಚಿತ್ರದಲ್ಲಿದೆ. ನನ್ನ ಕೆರಿಯರ್ ನ ಬೆಸ್ಟ್ ಆಕ್ಷನ್ ಸಿನಿಮಾ ''ಅಭಿಮನ್ಯು''.

Abhimanyu2

*ನಾಯಕಿ ಸುರ್ವೀನ್ ಚಾವ್ಲಾ ಬಾಲಿವುಡ್ ನ ಗ್ಲಾಮರಸ್ ಹೀರೋಯಿನ್. ಅಭಿಮನ್ಯು ಚಿತ್ರದಲ್ಲಿ ಅವರ ಪಾತ್ರ?
ಸುರ್ವೀನ್ ಚಾವ್ಲಾ ಉತ್ತಮ ನಟಿ. ಬಾಲಿವುಡ್ ನಲ್ಲಿ ಆಕೆಗೆ ಗ್ಲಾಮರಸ್ ಇಮೇಜ್ ಇದೆ. ಆದ್ರೆ ಅಭಿಮನ್ಯು ಚಿತ್ರದಲ್ಲಿ ಅವರಿಗೆ ಹೋಮ್ಲಿ ಪಾತ್ರ. ಅವರ ಪಾತ್ರದಲ್ಲಿ ತುಂಬಾ ಎಮೋಷನ್ಸ್ ಇದೆ.

*ಹಾಗಾದ್ರೆ, ಅಭಿಮನ್ಯು ಚಿತ್ರ ಕ್ಲಾಸ್ ಮತ್ತು ಮಾಸ್ ಪ್ರೇಕ್ಷಕರೆಲ್ಲರನ್ನೂ ಆಕರ್ಷಿಸುತ್ತಾ?
ಡೆಫನೆಟ್ಲಿ. ಅಭಿಮನ್ಯು ಎಲ್ಲಾ ರಸಗಳಿರುವ ಕಂಪ್ಲೀಟ್ ಕಮರ್ಶಿಯಲ್ ಚಿತ್ರ. ಹೊಸತನಕ್ಕೆ ತುಂಬಾ ಪ್ರಯತ್ನ ಪಟ್ಟಿದ್ದೀನಿ. ಜನ ಚಿತ್ರವನ್ನ ನೋಡಿ ಹೇಳ್ಬೇಕು.

Abhimanyu3

*ಅರ್ಜುನ್ ಜನ್ಯ ಮ್ಯೂಸಿಕ್ ಬಗ್ಗೆ ಹೇಳೋದಾದರೆ...?
ಇದು ಮ್ಯೂಸಿಕಲ್ ಸಿನಿಮಾ ಅಲ್ಲ. ಆದ್ರೂ ಅರ್ಜುನ್ ಜನ್ಯ 3-4 ಒಳ್ಳೆಯ ಹಾಡುಗಳನ್ನ ನೀಡಿದ್ದಾರೆ. ಅವ್ರನ್ನ ನಾನು ಈ ಚಿತ್ರದ ಮೂಲಕ ತಮಿಳು ಚಿತ್ರರಂಗಕ್ಕೂ ಪರಿಚಯಿಸಿದ್ದೀನಿ. ಬಾಲಿವುಡ್ ನ ಅಮರ್ ಮೋಹಿಲೇ ಚಿತ್ರಕ್ಕೆ ಬ್ಯಾಕ್ ಗ್ರೌಂಡ್ ಸ್ಕೋರ್ ಮಾಡಿದ್ದಾರೆ.

*ಅಭಿಮನ್ಯು ಚಿತ್ರಕ್ಕೆ ನಥಿಂಗ್ ಈಸ್ ಇಂಪಾಸಿಬಲ್ ಅನ್ನೋ ಟ್ಯಾಗ್ ಲೈನ್ ಕೊಟ್ಟಿದ್ದೀರಾ. ಇದು ನಿಮ್ಮ ಜೀವನಕ್ಕೂ ಅನ್ವಯವಾಗುತ್ತಾ..?
ಖಂಡಿತ..! ನನ್ನ ಪರ್ಸನಲ್ ಎಕ್ಸ್ ಪೀರಿಯನ್ಸೇ ಈ ಸಿನಿಮಾ. ಚಿತ್ರರಂಗದಲ್ಲಿ ನಾನು ಮೊದಲು ನಿರ್ದೇಶನ ಮಾಡಿದಾಗ ತುಂಬಾ ಜನ ನನ್ನ ನೋಡಿ ನಕ್ಕಿದ್ರು. ಆಗ ನಾನು ಸುಮ್ಮನೆ ಕೂರಲಿಲ್ಲ. ತುಂಬಾ ಶ್ರಮ ಪಟ್ಟು, ಶ್ರದ್ಧೆಯಿಂದ ಕೆಲಸ ಮಾಡಿದೆ. ಆಗ್ಲೇ ನನಗೂ ಗೊತ್ತಾಗಿದ್ದು ನಥಿಂಗ್ ಈಸ್ ಇಂಪಾಸಿಬಲ್ ಅಂತ. ಅವಾಗಿನಿಂದ ಇಲ್ಲಿವರೆಗೂ ನನಗೆ ಯಾವುದೂ ಅಸಾಧ್ಯವಾಗಿಲ್ಲ.

Abhimanyu4

*ಕೊನೆಯದಾಗಿ, ಕನ್ನಡ ಜನತೆ ಅಭಿಮನ್ಯು ಚಿತ್ರವನ್ನ ಯಾಕೆ ನೋಡ್ಬೇಕು?
ಒಳ್ಳೆ ಎಂಟರ್ ಟೈನರ್. ಫ್ಯಾಮಿಲಿ ಕೂತು ನೋಡುವ ಸಿನಿಮಾ ಅಭಿಮನ್ಯು. ದೇಶ ಭಕ್ತಿ ಇರುವ ಕಮರ್ಶಿಯಲ್ ಸಿನಿಮಾ. ಯಾವ ಅಶ್ಲೀಲ ಡೈಲಾಗ್ಸ್ ಇಲ್ಲದ ಎಲ್ಲರೂ ನೋಡಲೇಬೇಕಾದ ಸಿನಿಮಾ.

ಅರ್ಜುನ್ ಸರ್ಜಾ ನಟಿಸಿರುವ ಕನ್ನಡ ಚಿತ್ರಗಳು

1981 - ಸಿಂಹದ ಮರಿ ಸೈನ್ಯ
1984 - ಪೂಜಾ ಫಲ
1984 - ಮಳೆ ಬಂತು ಮಳೆ
1984 - ಪ್ರಳಯಾಂತಕ
1984 - ಆಶಾ
1985 - ನಾ ನಿನ್ನ ಪ್ರೀತಿಸುವೆ
1986 - ಪ್ರೇಮ ಜ್ಯೋತಿ
1989 - ಪ್ರೇಮಾಗ್ನಿ
1990 - ಪ್ರತಾಪ್
1992 - ಪೊಲೀಸ್ ಲಾಕಪ್
1992 - ಶಿವನಾಗ
1992 - ಸ್ನೇಹದ ಕಡಲಲ್ಲಿ
1993 - ಅಳಿಮಯ್ಯ
2001 - ಶ್ರೀ ಮಂಜುನಾಥ
2009 - ವಾಯುಪುತ್ರ
2012 - ಪ್ರಸಾದ್
2013 - ಅಟ್ಟಹಾಸ
2014 - ಅಭಿಮನ್ಯು

English summary
Sandalwood's most awaited movie 'Abhimanyu' is releasing on November 7th 2014. The first directorial venture of Arjun Sarja in Kannada shares his experience on making of Abhimanyu to FILMIBEAT KANNADA exclusively.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada